ಕಾರ್ಕಳ : ಯುವ ಜೈನ್ ಮಿಲನ್ ವತಿಯಿಂದ ಮೇ 28 ರಂದು ಹಿರಿಯಂಗಡಿ ಮಹಾವೀರ ಭವನದಲ್ಲಿ ನಡೆದ ಜೈನ್ ಮಿಲನ್ ಮಾಸಿಕ ಸಭೆಯಲ್ಲಿ 2022-23 ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ 594 (99%) ಅಂಕ ಪಡೆಯುವುದರೊಂದಿಗೆ ರಾಜ್ಯಕ್ಕೆ ನಾಲ್ಕನೇ ಸ್ಥಾನ ಹಾಗೂ ಉಡುಪಿ ಜಿಲ್ಲೆಗೆ ಪ್ರಥಮ ಸ್ಥಾನಿಯಾದ ಜ್ಞಾನಸುಧಾ ಸಂಸ್ಥೆಯ ವಿದ್ಯಾರ್ಥಿನಿ ಮಾನ್ಯ ಜೈನ್ ಅವರನ್ನು ಸನ್ಮಾನಿಸಲಾಯಿತು. ಇವರು ನಲ್ಲೂರಿನ ವಿದ್ಯಾನಂದ ಜೈನ್ ಮತ್ತು ಶಕುಂತಳಾ ದಂಪತಿ ಪುತ್ರಿ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೈನ್ ಮಿಲನ್ ಅಧ್ಯಕ್ಷೆ ಮಾಲತಿ ವಸಂತರಾಜ್ ವಹಿಸಿದ್ದರು. ಉಡುಪಿ ಸ. ಪ. ಪೂ. ಕಾಲೇಜು ಉಪನ್ಯಾಸಕಿ ಪ್ರಿಯಾಕಾರಿಣಿ ರಾಜೇಶ್ ಜೈನ್, ಭಾರತೀಯ ಜೈನ್ ಮಿಲನ್ ವಲಯದ(8) ಉಪಾಧ್ಯಕ್ಷ ಸುದರ್ಶನ್ ಜೈನ್, ನಿರ್ದೇಶಕ ಮಹಾವೀರ ಹೆಗ್ಡೆ, ಜೊತೆ ಕಾರ್ಯದರ್ಶಿ ಶಶಿಕಲಾ ಕೆ. ಹೆಗ್ಡೆ, ಜೈನ್ ಮಿಲನ್ ಪದಾಧಿಕಾರಿಗಳು ಹಾಗೂ ಯುವ ಜೈನ್ ಮಿಲನ್ ಸದಸ್ಯರು ಉಪಸ್ಥಿತರಿದ್ದರು.































