ಆರೋಗ್ಯ ಧಾರ : ಸನ್ ಸ್ಟ್ರೋಕ್‌ ಸಮಸ್ಯೆಯಿಂದ ಆರೋಗ್ಯ ರಕ್ಷಣೆ

ತಾಪಮಾನ ದಿನೇ ದಿನೇ ಹೆಚ್ಚುತ್ತಿದೆ. ಇದರಿಂದ ಅನೇಕ ಆರೋಗ್ಯ ಸಮಸ್ಯೆ ಎದುರಾಗುತ್ತಿದ್ದು, ವಿಶೇಷವಾಗಿ ಸನ್ (ಹೀಟ್)‌ ಸ್ಟ್ರೋಕ್ ಆಗುವ ಸಂಭವವಿರುತ್ತದೆ. ಇದು ಜೀವಕ್ಕೂ ಕೂಡ ಅಪಾಯಕಾರಿ ಆಗಬಹುದು. ಇದರಿಂದ ರಕ್ಷಣೆ ಹೇಗೆ ಮಾಡಬಹುದೆಂದು ಇವತ್ತು ತಿಳಿದುಕೊಳ್ಳೋಣ.

ಸನ್ ಸ್ಟ್ರೋಕ್ ಎಂದರೇನು?
ಅಧಿಕ ಸಮಯದವರೆಗೆ ದೇಹದ ಉಷ್ಣತೆ ಹೆಚ್ಚಾದಾಗ ಅದನ್ನು ಹೀಟ್ ಸ್ಟ್ರೋಕ್ ಅಥವಾ ಸನ್ ಸ್ಟ್ರೋಕ್ ಎಂದು ಕರೆಯುತ್ತಾರೆ. ಇದರಿಂದ ತ್ವಚೆ, ಮೂತ್ರಪಿಂಡ , ಹೃದಯ, ಮೆದುಳಿಗೆ ಹಾನಿ ಉಂಟಾಗಬಹುದು.

ಹೀಟ್ ಸ್ಟ್ರೋಕ್‌ನ ಕಾರಣಗಳು:
ಬೇಸಿಗೆಯಲ್ಲಿ ಉಷ್ಣ ಆಹಾರ ಸೇವಿಸುವುದು, ಅತಿ ವ್ಯಾಯಾಮ ಮಾಡುವುದು, ಮಾಂಸಾಹಾರ ಸೇವನೆ, ಹೊರಗೆ ಅತಿ ಕೆಲಸ ಮಾಡುವುದು, ಅತೀ ಮಧ್ಯ ಸೇವನೆ.

ಲಕ್ಷಣಗಳು:
ದೇಹದ ಉಷ್ಣತೆ ಹೆಚ್ಚುವುದು, ತಲೆ ಸುತ್ತು ಬಂದು ಬೀಳುವುದು, ಜ್ವರ, ವಾಂತಿ, ಅತಿ ಬಾಯಾರಿಕೆ, ಮಾಂಸ ಖಂಡ ನೋವು, ನಿರ್ಜಲೀಕರಣ ಇದರ ಪ್ರಮುಖ ಲಕ್ಷಣಗಳಾಗಿವೆ.

ಸನ್ ಸ್ಟ್ರೋಕ್ ಅನ್ನು ಹೇಗೆ ತಡೆಯುವುದು:
• ಕಾರಣಗಳಿಂದ ದೂರವಿರಿ.
• ನೀರು ಕುಡಿಯಿರಿ. ನೀರಿಗೆ ಜೀರಿಗೆ ಅಥವಾ ಕೊತ್ತಂಬರಿ ಬೀಜವನ್ನು ಹಾಕಿ ನೆನೆಸಿಟ್ಟ ನೀರನ್ನು ಕುಡಿಯಬೇಕು. ಹಣ್ಣಿನ ರಸ ಸೇವನೆ, ಎಳನೀರು, ಕಲ್ಲಂಗಡಿಯ ಜ್ಯೂಸ್, ಮಜ್ಜಿಗೆ ಕುಡಿಯಿರಿ.
• ಹೊರಗೆ ಕೆಲಸ ಕಡಿಮೆ ಮಾಡಿ .
• ತಿಳಿ ಬಣ್ಣದ ಬಟ್ಟೆ ಧರಿಸಿ. ಹೊರಗೆ ಹೊಗುವಾಗ ಛತ್ರಿಯನ್ನು ಉಪಯೋಗಿಸಿ.
• ಕಾಫಿ, ಚಹಾ ಕುಡಿಯುವುದನ್ನು ಕಡಿಮೆ ಮಾಡಿ.
• ಮಾವಿನಕಾಯಿಯನ್ನು ಬೇಯಿಸಿ, ಅದಕ್ಕೆ ಜೀರಿಗೆ ಪುಡಿ ಸ್ವಲ್ಪ ಸಕ್ಕರೆ ಏಲಕ್ಕಿ ಉಪ್ಪು ಹಾಕಿ ನೀರು ಬೆರೆಸಿ ಕುಡಿಯಿರಿ.
• ಈರುಳ್ಳಿ, ಸೌತೆಕಾಯಿಯನ್ನು ಸೇವಿಸಿ.
• ತಣ್ಣೀರಿನಲ್ಲಿ ಸ್ನಾನ ಮಾಡಿ.
• ಅಶ್ವಗಂಧ ಚೂರ್ಣ ಕಾಲು ಚಮಚ ಒಂದು ಕಪ್ ಹಾಲಿಗೆ ಬೆರೆಸಿ ಕುಡಿಯಿರಿ.
• ಒಣದ್ರಾಕ್ಷಿಯನ್ನು ನೀರಿನಲ್ಲಿ ನಾಲ್ಕು ಗಂಟೆ ನೆನೆಸಿ ಸೇವಿಸಿ.
• ಎರಡು ಚಮಚ ನೆಲ್ಲಿಕಾಯಿಯ ರಸವನ್ನು ಎರಡು ಚಮಚ ನೀರಿಗೆ ಹಾಕಿ ಖಾಲಿ ಹೊಟ್ಟೆಯಲ್ಲಿ ಸೇವಿಸಿ.
• ಅಮೃತಬಳ್ಳಿಯ ಕಷಾಯವನ್ನು ಕುಡಿಯಿರಿ.
• ತ್ವಚೆಯ ಮೇಲೆ ಚಂದನದ ಲೇಪ, ಅರಿಶಿನದ ಲೇಪ, ಹೆಸರು ಹಿಟ್ಟಿನ ಲೇಪನೆ ಮಾಡುವುದರಿಂದ ದೇಹದ ಉಷ್ಣತೆಯನ್ನು ಕಡಿಮೆ ಮಾಡಬಹುದು.

✒️ ಡಾ.ಹರ್ಷಾ ಕಾಮತ್













































































error: Content is protected !!
Scroll to Top