ಬಾವಿ ಸ್ವಚ್ಛಗೊಳಿಸಲು ಇಳಿದ ವ್ಯಕ್ತಿ ಮೇಲೆ ಬರಲಾರದೇ ಪರದಾಟ

ಅಗ್ನಿ ಶಾಮಕ ದಳದಿಂದ ರಕ್ಷಣೆ

ಕಾರ್ಕಳ : ಬಾವಿಯ ಸ್ವಚ್ಛತೆಗಾಗಿ ಬಾವಿಗಿಳಿದಿದ್ದ ವ್ಯಕ್ತಿ ಮೇಲಕ್ಕೆ ಬರಲಾಗದ ಸ್ಥಿತಿಯಲ್ಲಿದ್ದು, ಅವರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ಮೇಲಕ್ಕೆತ್ತಿ ರಕ್ಷಿಸಿದ ಘಟನೆ ಮೇ 18 ರಂದು ಕುಕ್ಕುಂದೂರು ಗ್ರಾಮದಲ್ಲಿ ಸಂಭವಿಸಿದೆ.
ರಮೇಶ್‌ ಆಚಾರ್ಯ ಎಂಬುವವರು ಬಾವಿಯ ಸ್ವಚ್ಚತೆಗಾಗಿ ಬಾವಿಗೆ ಇಳಿದಿದ್ದರು. ಆದರೆ, ನಂತರ ಬಾವಿಯಿಂದ ಮೇಲಕ್ಕೆ ಬರಲಾಗದ ಸ್ಥಿತಿಯಲ್ಲಿದ್ದು, ಮಾಹಿತಿ ದೊರೆತ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಕಾರ್ಕಳ ಅಗ್ನಿಶಾಮಕ ದಳದ ಸಿಬ್ಬಂದಿ ವ್ಯಕ್ತಿಯನ್ನು ಬಾವಿಯಿಂದ ಮೇಲೆಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಅಗ್ನಿಶಾಮಕ ಠಾಣಾಧಿಕಾರಿ ಆಲ್ಬರ್ಟ್ ಮೋನಿಸ್, ಸಿಬ್ಬಂದಿ ಹರಿಪ್ರಸಾದ್ ಶೆಟ್ಟಿಗಾರ್, ಜಯ ಮೂಲ್ಯ, ಸುರೇಶ್ ಕುಮಾರ್, ವಿನಾಯಕ ಪಾಲ್ಗೊಂಡಿದ್ದರು.











































































error: Content is protected !!
Scroll to Top