ಕಾರ್ಕಳ : ನೆಕ್ಲಾಜೆ ಶ್ರೀ ಕಾಳಿಕಾಂಬಾ ದೇವಸ್ಥಾನದಲ್ಲಿ ಮೇ 1 ರಿಂದ 9 ರವರೆಗೆ ವಾರ್ಷಿಕ ಮಹೋತ್ಸವ ಜರುಗಲಿದೆ. ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ವೇದಮೂರ್ತಿ ಕೆ. ಉಮೇಶ್ ತಂತ್ರಿಯವರ ನೇತೃತ್ವದಲ್ಲಿ ಪ್ರಧಾನ ಅರ್ಚಕ ಪುರೋಹಿತ್ ವಿಠಲ್ ಆಚಾರ್ಯ ಅವರ ಪೌರೋಹಿತ್ಯದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನಡೆಯಲಿದೆ.
ಧಾರ್ಮಿಕ ಕಾರ್ಯಕ್ರಮ
ಪ್ರತಿನಿತ್ಯವೂ ಧಾರ್ಮಿಕ ವಿಧಿ ವಿಧಾನ ನಡೆಯಲಿದ್ದು, ಮೇ 2 ರಂದು ಧ್ವಜಾರೋಹಣ ನೆರವೇರಲಿದೆ. ಮೇ5 ರಂದು ರಾತ್ರಿ 8 ಗಂಟೆಗೆ ಶ್ರೀ ಮನ್ಮಹಾರಥೋತ್ಸವ ನಡೆಯಲಿದ್ದು, ಮೇ 7 ರಂದು ಮಧ್ಯಾಹ್ನ ಮಹಾಪೂಜೆ, ದೈವಗಳಿಗೆ ವಿಶೇಷ ತಂಬಿಲ ಸೇವೆ, ಸಂಜೆ 5 ಗಂಟೆಗೆ ಭಂಡಾರ ಇಳಿದು ರಕ್ತೇಶ್ವರಿ, ಕಲ್ಕುಡ, ಪಂಜುರ್ಲಿ ದೈವಗಳಿಗೆ ನೇಮೋತ್ಸವ, ಮೇ 8 ರಂದು ಸಂಜೆ 5 ಗಂಟೆಗೆ ಭಂಡಾರ ಇಳಿದು ವ್ಯಾಘ್ರ ಚಾಮುಂಡಿ ದೈವದ ನೇಮೋತ್ಸವ ಜರುಗಲಿದೆ. ಮೇ 9 ರಂದು ಬೆಳಗ್ಗೆ ಸಂಪ್ರೋಕ್ಷಣೆ ನಡೆಯಲಿದೆ.
ಸಭಾ ಕಾರ್ಯಕ್ರಮ
ಮೇ 5 ರಂದು ಸಂಜೆ 6 ಗಂಟೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು, ಕಟಪಾಡಿ ಪಡುಕುತ್ಯಾರು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದ ಪೀಠಾಧೀಶ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮೀಜಿಯವರು ಆಶೀರ್ವಚನ ನೀಡಲಿದ್ದಾರೆ. ದೇವಸ್ಥಾನದ ಆಡಳಿತ ಮೊಕ್ತೇಸರ ಶಿಲ್ಪಿ ರಾಮಚಂದ್ರ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಕಟಪಾಡಿ ವೇಣುಗಿರಿ ಶ್ರೀ ಕಾಳಿಕಾಂಬಾ ವಿಶ್ವಕರ್ಮೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ನವೀನ್ ಆಚಾರ್ಯ ಉಪಸ್ಥಿರಿರುವವರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿಲ್ಪಿ ಕೆ. ಸತೀಶ ಆಚಾರ್ಯ, ಸಾನಿಧ್ಯ ಆಚಾರ್ಯ ಪೆರ್ಡೂರು, ದಾಮೋದರ ಆಚಾರ್ಯ ಕಾಂತರಗೊಳಿ, ಶ್ಯಾಮರಾಯ ಆಚಾರ್ಯ ಜಾರ್ಕಳ, ಎಸ್. ಕೇಶವ ಆಚಾರ್ಯ ನಲ್ಲೂರು, ಡಾ. ಚೈತ್ರ ಆಚಾರ್ಯ ಕಾರ್ಕಳ, ಶ್ರೀನಿಧಿ ಯು. ಆಚಾರ್ಯ ಕಾರ್ಕಳ, ಕವನ ಆಚಾರ್ಯ ಕಾರ್ಕಳ ಅವರನ್ನು ಈ ಸಂದರ್ಭ ಸನ್ಮಾನಿಸಲಾಗುವುದು. ನಾರಾವಿ ಕೂಡುವಳಿಕೆ ಮೊಕ್ತೇಸರ ಶ್ರೀನಿವಾಸ ಆಚಾರ್ಯ ಕಾವಲಿಗುಡ್ಡೆ, ದೊಂಡೆರಂಗಡಿ ಕೂಡುವಳಿಕೆ ಮೊಕ್ತೇಸರ ರಮೇಶ್ ಆಚಾರ್ಯ ಹಾಗೂ ರೆಂಜಾಳ ನಿಕಟಪೂರ್ವ ಕೂಡುವಳಿಕೆ ಮೊಕ್ತೇಸರ ಶ್ರೀನಿವಾಸ ಆಚಾರ್ಯ ಅವರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ
ಮೇ 4 ರಂದು ರಾತ್ರಿ 7 ಗಂಟೆಗೆ ಪಿಂಗಾರ ಕಲಾವಿದೆರ್ ಬೆದ್ರ ತಂಡದವರಿಂದ ಭರಣಿ ಕೃತಿಕೆ ನಾಟಕ ಪ್ರದರ್ಶನಗೊಳ್ಳಲಿದೆ. ಮೇ 5 ರ ರಾತ್ರಿ 8 ಗಂಟೆಗೆ ಶ್ರೀ ವಿಶ್ವಕರ್ಮ ಮಹಿಳಾ ಮಂಡಳಿಯವರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ದೇವಸ್ಥಾನದ ಆಡಳಿತ ಸಮಿತಿ ಪ್ರಕಟನೆಯಲ್ಲಿ ತಿಳಿಸಿದೆ.


































