ಕಾರ್ಕಳ : ಹಿರಿಯಂಗಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಸತತ ಎರಡನೇ ಅವಧಿಗೆ ಗಿರೀಶ್ ರಾವ್ ಆಯ್ಕೆಯಾಗಿರುತ್ತಾರೆ. ಏ. 23 ರಂದು ನಡೆದ ದೇವಸ್ಥಾನದಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಮೊಕ್ತೇಸರರಾಗಿ ಗಣೇಶ್ ರಾವ್, ದಯಾನಂದ ರಾವ್, ಸುಧೀಂದ್ರ ರಾವ್ ಹಾಗೂ ರಾಮಚಂದ್ರ ರಾವ್ ಅವರನ್ನು ಆಯ್ಕೆ ಮಾಡಲಾಯಿತು.
ಗಿರೀಶ್ ರಾವ್ ಅವರು ಛತ್ರಪತಿ ಫೌಂಡೇಶನ್‌ನ ಸಂಸ್ಥಾಪಕರಾಗಿ, ಕ್ಷತ್ರೀಯ ಮರಾಠ ಸಮಾಜದ ಉಡುಪಿ ಜಿಲ್ಲಾಧ್ಯಕ್ಷರಾಗಿ, ದುರ್ಗಾಪರಮೇಶ್ವರಿ ಜೀರ್ಣೋದ್ಧಾರ ಟ್ರಸ್ಟ್‌ನ ಅಧ್ಯಕ್ಷರಾಗಿ, ಜೇಸಿಐ ಭಾರತದ ಪೂರ್ವ ರಾಷ್ಟ್ರೀಯ ಅಧಿಕಾರಿ, ಸೀನಿಯರ್ ಛೇಂಬರ್ ಇಂಟರ್‌ನ್ಯಾಷನಲ್ ಕಾರ್ಕಳದ ಘಟಕ ಇದರ ಸ್ಥಾಪಕಾಧ್ಯಕ್ಷರಾಗಿ, ಲಯನ್ಸ್ ಜಿಲ್ಲಾ ವಲಯಾಧ್ಯಕ್ಷರಾಗಿ ಹಾಗೂ ಅನೇಕ ಸಂಘ ಸಂಸ್ಥೆಗಳಲ್ಲಿ ಸಕ್ರೀಯರಾಗಿದ್ದಾರೆ. ಕಳೆದ ವರ್ಷ ದೇವಳದ ಜೀರ್ಣೋದ್ಧಾರ ಸಹಿತ ಬ್ರಹ್ಮಕಲಶೋತ್ಸವವು ಇವರ ನೇತೃತ್ವದಲ್ಲಿ ವಿಜೃಂಭಣೆಯಿಂದ ನೇರವೇರಿರುತ್ತದೆ.
























