ಸಿದ್ದರಾಮಯ್ಯ ಮೊಮ್ಮಗ ರಾಜಕೀಯ ಎಂಟ್ರಿ

ತಾತನ ಜತೆ ಸಕ್ರಿಯ ಪ್ರಚಾರದಲ್ಲಿ ಧವನ್‌ ರಾಕೇಶ್‌

ಮೈಸೂರು: ಸಿದ್ದರಾಮಯ್ಯ ಕುಟುಂಬದ ಮೂರನೇ ತಲೆಮಾರು ರಾಜಕೀಯ ಪ್ರವೇಶಕ್ಕೆ ತಯಾರಾಗಿದೆ. ಸಿದ್ದರಾಮಯ್ಯನವರ ಮೊಮ್ಮಗ ಧವನ್‌ ರಾಕೇಶ್‌ ಈ ಚುನಾವಣೆಯಲ್ಲಿ ವರುಣಾ ಕ್ಷೇತ್ರದಲ್ಲಿ ತಾತನ ಪರವಾಗಿ ಪ್ರಚಾರ ಮಾಡಲು ಕಣಕ್ಕಿಳಿದಿದ್ದು, ಈ ಮೂಲಕ ಸಿದ್ದರಾಮಯ್ಯ ಮೊಮ್ಮಗನನ್ನು ರಾಜಕೀಯಕ್ಕೆ ಕರೆ ತಂದಿರುವ ಸುದ್ದಿಗಳು ಹರಿದಾಡುತ್ತಿವೆ.
ದಿವಂಗತ ರಾಕೇಶ್ ಸಿದ್ದರಾಮಯ್ಯ ಪುತ್ರ ಧವನ್ ತಾತ ಸಿದ್ದರಾಮಯ್ಯ ಜತೆ ಪ್ರಚಾರ ಕಣದಲ್ಲಿ ಕಾಣಿಸಿಕೊಂಡಿದ್ದಾರೆ. ಮೈಸೂರಿನಲ್ಲಿ ಚುನಾವಣಾ ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸಿದ್ದರಾಮಯ್ಯ ಜತೆ ಧವನ್ ಕೂಡ ಓಡಾಟ ಆರಂಭಿಸಿದ್ದಾರೆ. ಅವರಿಗೆ ಚಿಕ್ಕಪ್ಪ ವರುಣಾ ಕ್ಷೇತ್ರದ ಶಾಸಕ ಯತೀಂದ್ರ ಸಿದ್ದರಾಮಯ್ಯ ಮಾರ್ಗದರ್ಶಿಯಾಗಿದ್ದಾರೆ.
ತಾತ ಹಾಗೂ ಚಿಕ್ಕಪ್ಪನ ಜತೆ ಚುನಾವಣಾ ಕಣದೊಳಗೆ ತಿರುಗುತ್ತಿರುವ ಧವನ್‌ಗೆ ಎಲೆಕ್ಷನ್ ವಿಚಾರದ ಬಗ್ಗೆ ಬಹಳ ಕುತೂಹಲವಂತೆ. ಚುನಾವಣೆ ಎಂದರೇನು? ಅದು ಹೇಗಿರುತ್ತೆ? ಪ್ರಚಾರ ಶೈಲಿ ಮತ್ತು ಕಾರ್ಯ, ಜನರ ಒಡನಾಟ ಇವುಗಳೆಲ್ಲವನ್ನೂ ಹತ್ತಿರದಿಂದ ನೋಡಿ ತಿಳಿದುಕೊಳ್ಳುವ ಕುತೂಹಲ. ಹೀಗಾಗಿ ಬಿರು ಬೇಸಿಗೆಯಲ್ಲೂ ಆತ ಪ್ರಚಾರ ಕಾರ್ಯದ ವೇಳೆ ಮನೆಯ ಹಿರಿಯರೊಂದಿಗೆ ಉಪಸ್ಥಿತರಿದ್ದಾರೆ.
ಸಿದ್ದರಾಮಯ್ಯನವರ ಪುತ್ರ ಡಾ.ಯತೀಂದ್ರ ಈಗಾಗಲೇ ಸಕ್ರಿಯ ರಾಜಕೀಯದಲ್ಲಿ ಇದ್ದಾರೆ. ಕಳೆದ ಚುನಾವಬಣೆಯಲ್ಲಿ ವರುಣಾದಿಂದ ಗೆದ್ದು ಶಾಸಕರೂ ಆಗಿದ್ದಾರೆ. ಆದರೆ ಈ ಸಲ ತಂದೆಗೆ ತನ್ನ ಸೀಟನ್ನು ಬಿಟ್ಟುಕೊಟ್ಟಿದ್ದಾರೆ.

















































error: Content is protected !!
Scroll to Top