ಏ. 13 – 19 : ಕುಕ್ಕುಂದೂರು ಶ್ರೀ ದುರ್ಗಾಪರಮೇಶ್ವರೀ ದೇವಿ ಸನ್ನಿಧಿಯಲ್ಲಿ ಭೌತಿಕೋತ್ಸವ ಮತ್ತು ರಥಯಾತ್ರಾ ಮಹೋತ್ಸವ

ಕಾರ್ಕಳ : ಕುಕ್ಕುಂದೂರು ಶ್ರೀ ದುರ್ಗಾಪರಮೇಶ್ವರೀ ದೇವಿ ಸನ್ನಿಧಿಯಲ್ಲಿ ಏ. 13ರಿಂದ 19 ರವರೆಗೆ ಭೌತಿಕೋತ್ಸವ ಮತ್ತು ರಥಯಾತ್ರಾ ಮಹೋತ್ಸವ ಜರುಗಲಿದೆ.

ಧಾರ್ಮಿಕ ಕಾರ್ಯಕ್ರಮ
ಏ. 13ರಂದು ಧಾರ್ಮಿಕ ಕಾರ್ಯಕ್ರಮ ಆರಂಭಗೊಂಡಿದ್ದು, 14ರಂದು ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಏ. 15ರಂದು ಬೆಳಗ್ಗೆ ಕಲಶಾಭಿಷೇಕ, ತುಲಾಭಾರ ಸೇವೆ ಮಧ್ಯಾಹ್ನ ಮಹಾಪೂಜೆ, ಅನ್ನಸಂತರ್ಪಣೆ ನಡೆಯಲಿದ್ದು, ರಾತ್ರಿ ಬಲಿದಾನಾದಿ ಉತ್ಸವ, ಮಹಾರಂಗಪೂಜಾ ಮಹೋತ್ಸವ ಜರುಗಲಿದೆ. ಏ. 16 ರಂದು ಬೆಳಗ್ಗೆ ಅಂಬೋಡಿ ಬಲಿ ಪ್ರಾರಂಭ, ತುಲಾಭಾರಾದಿ ಸೇವೆ, ಮಧ್ಯಾಹ್ನ ಮಹಾಪೂಜೆ ಮತ್ತು ಅನ್ನಸಂತರ್ಪಣೆ ನಡೆಯಲಿದೆ. ಏ. 17 ರಂದು ಕಲಶಾಭಿಷೇಕ, ಮಧ್ಯಾಹ್ನ ಮಹಾಪೂಜೆ, ರಥಾರೋಹಣ, ಅನ್ನಸಂತರ್ಪಣೆ ಜರುಗಲಿದ್ದು, ರಾತ್ರಿ ರಥಯಾತ್ರಾ ಮಹೋತ್ಸವ, ಮಹಾಪೂಜೆ, ಶ್ರೀ ಮಹಾಭೂತ ಬಲಿ, ಕವಾಟ ಬಂಧನ ನಡೆಯಲಿದೆ. ಏ. 18 ರಂದು ಬೆಳಿಗ್ಗೆ ಕವಾಟ ಉದ್ಘಾಟನೆ, ದಶವಿಧ ಸ್ನಾನ, ಮಧ್ಯಾಹ್ನ ಮಹಾಪೂಜೆ, ಬಲಿ ಉತ್ಸವ, ವಸಂತ ಪೂಜೆ, ಅನ್ನಸಂತರ್ಪಣೆ, ರಾತ್ರಿ ಯಾತ್ರಾ ಹೋಮ, ಓಕುಳಿ, ಅವಭೃತ, ಕಟ್ಟೆಪೂಜೆ, ರಕ್ತೇಶ್ವರಿ ಮತ್ತು ಪರಿವಾರ ದೈವಗಳ ನೇಮ, ಧ್ವಜಾವರೋಹಣ ಆಗಿ ರಾತ್ರಿ ಪೂಜೆ ನಡೆಯಲಿದ್ದು, ಏ. 19ರಂದು ಸಂಪ್ರೋಕ್ಷಣೆ, ಮಹಾ ಮಂತ್ರಾಕ್ಷತೆ, ಪ್ರಸಾದ ವಿತರಣೆ ನೆರವೇರಲಿದೆ.

ಸಾಂಸ್ಕೃತಿಕ ಕಾರ್ಯಕ್ರಮ
ಏ. 14ರಂದು ಸಂಜೆ 5 ಗಂಟೆಗೆ ಕುಕ್ಕುಂದೂರು ಶ್ರೀ ದುರ್ಗಾಪರಮೇಶ್ವರೀ ಭಜನಾ ಮಂಡಳಿಯವರಿಂದ ಭಜನೆ ನಡೆಯಲಿದ್ದು, ಏ. 16 ರಂದು ರಾತ್ರಿ 8 ಗಂಟೆಗೆ ಕಲಾಸಂಗಮ ಕಲಾವಿದರಿಂದ ವಿಜಯ್‌ ಕುಮಾರ್ ಕೊಡಿಯಾಲ್ ಬೈಲು ನಿರ್ದೇಶನದ ಶಿವದೂತೆ ಗುಳಿಗೆ ನಾಟಕ ಪ್ರದರ್ಶನಗೊಳ್ಳಲಿದೆ. ಏ. 17 ರಂದು ಸಂಜೆ 4.30 ರಿಂದ ಜೋಡುರಸ್ತೆಯ ಶ್ರೀದೇವಿ ಮಹಿಳಾ ಭಜನಾ ಮಂಡಳಿ ಮತ್ತು ಅಯ್ಯಪ್ಪನಗರದ ಶ್ರೀ ದುರ್ಗಾಶಕ್ತಿ ಮಕ್ಕಳ ಕುಣಿತ ಭಜನಾ ಮಂಡಳಿ ಹಾಗೂ ಕುಕ್ಕುಂದೂರು ಶ್ರೀ ದುರ್ಗಾ ಕುಣಿತ ಭಜನಾ ಮಂಡಳಿವರಿಂದ ಭಜನಾ ಕಾರ್ಯಕ್ರಮ ಜರುಗಲಿದೆ.

































































error: Content is protected !!
Scroll to Top