ಕ್ರಿಕೆಟ್‌ ಬೆಟ್ಟಿಂಗ್‌ನಲ್ಲಿ ನಿರತನಾಗಿದ್ದ ವ್ಯಕ್ತಿ ಬಂಧನ : ನಾಲ್ವರು ಪರಾರಿ

ಕಾರ್ಕಳ : ಬಜಗೋಳಿ ಬಸ್‌ ನಿಲ್ದಾಣ ಬಳಿ ಕ್ರಿಕೆಟ್‌ ಬೆಟ್ಟಿಂಗ್‌ ನಡೆಸುತ್ತಿದ್ದ ವ್ಯಕ್ತಿಯನ್ನು ಕಾರ್ಕಳ ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಎ. 13ರಂದು ಮೊಬೈಲ್‌ ನಲ್ಲೇ ಕ್ರಿಕೆಟ್‌ ಬೆಟ್ಟಿಂಗ್‌ ನಡೆಸುತ್ತಿದ್ದ ದೇವೇಂದ್ರ ಶೆಟ್ಟಿ ಎಂಬಾತನನ್ನು ಖಚಿತ ಮಾಹಿತಿಯ ಮೇರೆಗೆ ಗ್ರಾಮಾಂತರ ಠಾಣೆ ಎಸ್‌ಐ ತೇಜಸ್ವಿ ಅವರು ದಾಳಿ ನಡೆಸಿ ಆತನನ್ನು ಬಂಧಿಸಿದ್ದಾರೆ. ಮಧು ಅಜೆಕಾರು, ಪ್ರಭಾಕರ ನೆಲ್ಲಿಕಾರ್, ಕರ್ಣ ನಲ್ಲೂರು ಹಾಗೂ ನವೀನ್ ಬಜಗೋಳಿ ಎಂಬವರೆಲ್ಲ ಸ್ಥಳದಿಂದ ಓಡಿ ಹೋಗಿದ್ದು, ದೇವೇಂದ್ರ ಶೆಟ್ಟಿ ಬಳಸಿದ ಮೂರು ಮೊಬೈಲ್‌ಗಳನ್ನು, ಸಾರ್ವಜನಿಕರಿಂದ ಸಂಗ್ರಹಿಸಿದ್ದ ರೂ. 25 ಸಾವಿರ ನಗದನ್ನು ಹಾಗೂ ಬೈಕ್‌ನ್ನು ವಶಪಡಿಸಿಕೊಳ್ಳಲಾಗಿದೆ.

































































error: Content is protected !!
Scroll to Top