ಕಾರ್ಕಳ – ಸುನಿಲ್ ಕುಮಾರ್, ಉಡುಪಿ – ಯಶ್ ಪಾಲ್ ಸುವರ್ಣ, ಕುಂದಾಪುರ- ಕಿರಣ್ ಕುಮಾರ್ ಕೊಡ್ಗಿ, ಕಾಪು – ಗುರ್ಮೆ ಸುರೇಶ್ ಶೆಟ್ಟಿ
ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಯಾಗಿದ್ದು, 189 ಮಂದಿ ಅಭ್ಯರ್ಥಿಗಳಿಗೆ ಟಿಕೆಟ್ ಘೋಷಿಸಲಾಗಿದೆ. ಒಟ್ಟು 224 ಕ್ಷೇತ್ರಗಳ ಪೈಕಿ 189 ಕ್ಷೇತ್ರಗಳಿಗೆ ಅಭ್ಯರ್ಥಿಗಳು ಪಟ್ಟಿ ರಿಲೀಸ್ ಮಾಡಿದ್ದು, 35 ಕ್ಷೇತ್ರಗಳ ಟಿಕೆಟ್ ಬಾಕಿ ಉಳಿಸಿಕೊಂಡಿದೆ. ಹಲವು ಸುತ್ತುಗಳ ಸಭೆ, ಸುದೀರ್ಘ ಸಮಾಲೋಚನೆಗಳ ಬಳಿಕ ಮಂಗಳವಾರ ರಾತ್ರಿ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಹೈಕಮಾಂಡ್ ಮೊದಲ ಪಟ್ಟಿ ಬಿಡುಗಡೆ ಮಾಡಿದೆ. ಪಟ್ಟಿ ಬಿಡುಗಡೆಗೂ ಮುನ್ನ ಮಾತನಾಡಿದ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜ್ಯದ 31 ಜಿಲ್ಲೆಗಳಲ್ಲಿ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಲಾಗಿದೆ. ಸುಮಾರು 25 ಸಾವಿರ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿದ್ದೇವೆ ಎಂದು ಹೇಳಿದರು. ಕರ್ನಾಟಕ ರಾಜ್ಯ ಬಿಜೆಪಿ ಘಟಕದ ಉಸ್ತುವಾರಿ ಅರುಣ್ ಸಿಂಗ್, ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿಗಳಾದ ಧರ್ಮೇಂದ್ರ ಪ್ರಧಾನ್, ಮನ್ಸುಖ್ ಮಾಂಡವೀಯ, ರಾಜ್ಯ ಬಿಜೆಪಿ ಸಹ ಚುನಾವಣಾ ಉಸ್ತುವಾರಿ ಕೆ.ಅಣ್ಣಾ ಮಲೈ, ಕೇಂದ್ರ ಗಣಿ ಇಲಾಖೆ ಸಚಿವ ಪ್ರಹ್ಲಾದ್ ಜೋಶಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
52 ಹೊಸ ಮುಖಗಳಿಗೆ ಮಣೆ
ಪ್ರಸಕ್ತ ಚುನಾವಣೆಯಲ್ಲಿ 52 ಹೊಸ ಮುಖಗಳಿಗೆ ಬಿಜೆಪಿ ಟಿಕೆಟ್ ನೀಡಿದೆ. ಒಬಿಸಿಯ 32 ಮಂದಿಗೆ ಟಿಕೆಟ್ ಘೋಷಿಸಲಾಗಿದೆ. 8 ಮಂದಿ ಮಹಿಳೆಯರು ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. 9 ಮಂದಿ ವೈದ್ಯರ ಹೆಸರು ಪಟ್ಟಿಯಲ್ಲಿದೆ. 32 ಹಿಂದುಳಿದ ವರ್ಗಕ್ಕೆ, 8 ಕ್ಷೇತ್ರಗಳಲ್ಲಿ ಮಹಿಳೆಯರಿಗೆ, ಮೂವರು ಶಿಕ್ಷಣ ತಜ್ಞರಿಗು ಅವಕಾಶ, ನಿವೃತ್ತ ಅಧಿಕಾರಿಗಳಿಗೆ ಟಿಕೆಟ್ ಘೋಷಿಸಿದೆ.

ಯಾವ ಕ್ಷೇತ್ರದಲ್ಲಿ ಯಾರು ಟಿಕೆಟ್ ಪಡೆದಿದ್ದಾರೆ.
ಟಿಕೆಟ್ ಪಡೆದವರ ಜಿಲ್ಲಾವಾರು ಕ್ಷೇತ್ರ ಮಾಹಿತಿ ಇಲ್ಲಿದೆ:
ಉಡುಪಿ
ಉಡುಪಿ – ಯಶ್ ಪಾಲ್ ಸುವರ್ಣ
ಕುಂದಾಪುರ- ಕಿರಣ್ ಕುಮಾರ್ ಕೊಡ್ಗಿ
ಕಾರ್ಕಳ – ಸುನಿಲ್ ಕುಮಾರ್
ಕಾಪು -ಗುರ್ಮೆ ಸುರೇಶ್ ಶೆಟ್ಟಿ
ಸುನಿಲ್ ಕುಮಾರ್ ಕಾರ್ಕಳದಿಂದ ಬಿಜೆಪಿ ಹುರಿಯಾಳು

ಕಾರ್ಕಳ : ಕಾರ್ಕಳ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಯಾರು ಎನ್ನುವ ಗೊಂದಲ ಇರಲಿಲ್ಲ. ಹಾಲಿ ಶಾಸಕ, ಸಚಿವ ವಿ. ಸುನಿಲ್ ಕುಮಾರ್ ಅವರ ಭದ್ರಕೋಟೆ ಕಾರ್ಕಳ. ಹೀಗಾಗಿ ಅವರಿಗೆ ಟಿಕೆಟ್ ಸಿಗುವ ಬಗ್ಗೆ ಯಾರಲ್ಲೂ ಅನುಮಾನವಿರಲಿಲ್ಲ. ಇದೀಗ ಬಿಜೆಪಿಯ ಮೊದಲ ಪಟ್ಟಿಯಲ್ಲೇ ಸುನಿಲ್ ಕುಮಾರ್ ಹೆಸರು ಪ್ರಕಟವಾಗಿದೆ.
ಬಿಜೆಪಿ ಅಭ್ಯರ್ಥಿಗಳ ಹೆಸರು ಘೋಷಣೆ ಅಂತಿಮಗೊಂಡಿರುವುದರಿಂದ ಕಾರ್ಕಳ ಚುನಾವಣಾ ಕಣ ರಂಗೇರಿದೆ. ಇನ್ನೊಂದೆಡೆ ಪ್ರಮೋದ್ ಮುತಾಲಿಕ್ ಕೂಡ ಪಕ್ಷೇತರರಾಗಿ ಸ್ಪರ್ಧಿಸಲು ಪ್ರಚಾರ ಆರಂಭಿಸಿದ್ದಾರೆ. ಏನೇ ಆದರೂ ಕಾರ್ಕಳದ ಈ ಸಲದ ಚುನಾವಣೆ ಭಿನ್ನವಾಗಿರಲಿದೆ ಎನ್ನುವುದಂತೂ ಖಚಿತ.
90ರ ದಶಕದಲ್ಲಿ ಕಾಂಗ್ರೆಸ್ ಪ್ರಾಬಲ್ಯ ಹೊಂದಿದ್ದ ಕಾರ್ಕಳ ಇದೀಗ ಬಿಜೆಪಿಯ ಭದ್ರಕೋಟೆಯಾಗಿದೆ. 2004, 2013, 2018ರಲ್ಲಿ ನಡೆದ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿ ಜಯ ಸಾಧಿಸಿದೆ. 2016ರ ಫೆಬ್ರವರಿಯಲ್ಲಿ ನಡೆದ ಜಿ.ಪಂ., ತಾ.ಪಂ. ಚುನಾವಣೆಯಲ್ಲೂ ಬಿಜೆಪಿ ಜಯಭೇರಿ ಬಾರಿಸಿದೆ.
2018ರ ಆಗಸ್ಟ್‌ನಲ್ಲಿ ನಡೆದ ಪುರಸಭಾ ಚುನಾವಣೆಯಲ್ಲಿ ಮಾತ್ರ ಬಿಜೆಪಿ ಕಾಂಗ್ರೆಸ್ ಸಮಬಲದ ಫಲಿತಾಂಶ ದಾಖಲಾಗಿತ್ತು. 5 ಜಿ.ಪಂ. ಕ್ಷೇತ್ರಗಳೂ ಬಿಜೆಪಿ ತೆಕ್ಕೆಯಲ್ಲಿದ್ದರೆ, 20 ತಾ.ಪಂ. ಕ್ಷೇತ್ರಗಳ ಪೈಕಿ 19 ಬಿಜೆಪಿ ಹಾಗೂ ಒಂದು ಕಾಂಗ್ರೆಸ್ ಸದಸ್ಯರನ್ನು ಹೊಂದಿತ್ತು. 2021ರ ಡಿಸೆಂಬರ್‌ನಲ್ಲಿ ನಡೆದ ಗ್ರಾ.ಪಂ. ಚುನಾವಣೆಯಲ್ಲಿ ಕಾರ್ಕಳ (27) ಹೆಬ್ರಿ ತಾಲೂಕಿನಲ್ಲಿ (7) ನ 34 ಗ್ರಾ. ಪಂ.ಗಳ ಪೈಕಿ 31 ಪಂಚಾಯತ್‌ಗಳ ಆಡಳಿತ ಬಿಜೆಪಿ ಬೆಂಬಲಿತರಲ್ಲಿದೆ. ಈದು, ಇನ್ನಾ ಗ್ರಾ.ಪಂ. ಕಾಂಗ್ರೆಸ್ ಪಾಲಾಗಿದ್ದರೆ, ಕುಚ್ಚೂರು ಪಂಚಾಯತ್ ಪಕ್ಷೇತರರ ಹಿಡಿತದಲ್ಲಿದೆ. 23 ಪುರಸಭಾ ಸದಸ್ಯರ ಪೈಕಿ 11 ಬಿಜೆಪಿ, 11 ಕಾಂಗ್ರೆಸ್ ಹಾಗೂ ಒರ್ವ ಸ್ವತಂತ್ರ ಸದಸ್ಯರಿದ್ದು, ಬಿಜೆಪಿ ಆಡಳಿತ ನಡೆಸುತ್ತಿದೆ.
2012ರ ಉಡುಪಿ – ಚಿಕ್ಕಮಗಳೂರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯದ ನಗೆ ಬೀರಿದ್ದರೆ, ಬಳಿಕ 2014 ಹಾಗೂ 2019ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ವಿಜಯದ ಪತಾಕೆ ಹಾರಿಸಿದೆ.
2004ರ ವಿಧಾನ ಸಭಾ ಚುನಾವಣೆ
ವಿ. ಸುನೀಲ್ ಕುಮಾರ್ – ಹೆಚ್.ಗೋಪಾಲ ಭಂಡಾರಿ
ಬಿಜೆಪಿ 52, 061, ಕಾಂಗ್ರೆಸ್ 42,266, ಲೀಡ್ 9795
2008 ವಿಧಾನ ಸಭಾ ಚುನಾವಣೆ
ವಿ. ಸುನಿಲ್ ಕುಮಾರ್ – ಹೆಚ್. ಗೋಪಾಲ ಭಂಡಾರಿ
ಬಿಜೆಪಿ 54,850, ಕಾಂಗ್ರೆಸ್ 56,399, ಲೀಡ್ 1,549
2009 ಲೋಕಸಭಾ ಚುನಾವಣೆ
ಡಿ.ವಿ. ಸದಾನಂದ ಗೌಡ – ಜಯಪ್ರಕಾಶ್ ಹೆಗ್ಡೆ
ಬಿಜೆಪಿ 52, 566, ಕಾಂಗ್ರೆಸ್ 47, 279, ಲೀಡ್ 5,287
2012 ಲೋಕಸಭಾ ಉಪಚುನಾವಣೆ
ವಿ. ಸುನಿಲ್ ಕುಮಾರ್ – ಜಯಪ್ರಕಾಶ್ ಹೆಗ್ಡೆ
ಬಿಜೆಪಿ 53,879 ಕಾಂಗ್ರೆಸ್ 52,657 ಲೀಡ್ 1,222
2013 ವಿಧಾನಸಭಾ ಚುನಾವಣೆ
ವಿ. ಸುನಿಲ್ ಕುಮಾರ್- ಹೆಚ್. ಗೋಪಾಲ ಭಂಡಾರಿ
ಬಿಜೆಪಿ 64,648, ಕಾಂಗ್ರೆಸ್ 60,374 ಲೀಡ್ 4,274
2014 ಲೋಕಸಭಾ ಚುನಾವಣೆ
ಶೋಭಾ ಕರಂದ್ಲಾಜೆ – ಜಯಪ್ರಕಾಶ್ ಹೆಗ್ಡೆ
ಬಿಜೆಪಿ 80,030 ಕಾಂಗ್ರೆಸ್ 48,579 ಲೀಡ್ 31,451
2018 ವಿಧಾನ ಸಭಾ ಚುನಾವಣೆ
ವಿ. ಸುನಿಲ್ ಕುಮಾರ್- ಹೆಚ್. ಗೋಪಾಲ ಭಂಡಾರಿ
ಬಿಜೆಪಿ 91,245 ಕಾಂಗ್ರೆಸ್ 48,679 ಲೀಡ್ 42,566
- ಬಸವರಾಜ ಬೊಮ್ಮಾಯಿ- ಶಿಗ್ಗಾಂವಿ
- ನಿಪ್ಪಾಣಿ: ಶಶಿಕಲಾ ಜೊಲ್ಲೆ
- ಚಿಕ್ಕೋಡಿ ರಮೇಶ್ ಕತ್ತಿ
- ಕಾರವಾರ: ಶ್ರೀಮಂತ್ ಪಾಟೀಲ್
- ಅಥಣಿ: ಕುಮಟಳ್ಳಿ
- ಕುಡುಚಿ: ಪಿ ರಾಜೀವ್
- ಹುಕ್ಕೇರಿ: ನಿಖಿಲ್ ಕತ್ತಿ
- ಅರಭಾವಿ : ಬಿ ಜಾರಕಿಹೊಳಿ
- ಗೋಕಾಕ್: ರಮೇಶ್ ಜಾರಕಿಹೊಳಿ
- ಎಮಕನಮರಡಿ: ಬಸವರಾಜ್ ಹುಂದ್ರಿ
- ಬೆಳಗಾವಿ ಉತ್ತರ: ರವಿ ಪಾಟೀಲ್
- ಬೆಳಗಾವಿ ದಕ್ಷಿಣ: ಅಭಯ್ ಪಾಟೀಲ್
- ಬೆಳಗಾವಿ ಗ್ರಾಮಾಂತರ: ನಾಗೇಶ್ ಮರೂಲ್ಕರ್
- ರಾಯಭಾಗ: ದುರ್ಯೋಧನ ಐಹೊಳೆ
- ಕಿತ್ತೂರು: ಮಹಾಂತೇಶ್ ದೊಡ್ಡಗೌಡರ್
- ಬೈಲಹೊಂಗಲ: ಜಗದೀಶ್ ಚೆನ್ನಪ್ಪ
- ಬೀಳಗಿ: ಮುಗುಗೇಶ್ ನಿರಾಣಿ
- ಬಿಜಾಪುರ ನಗರ: ಯತ್ನಾಳ್
ದ.ಕ ಜಿಲ್ಲೆಯಿಂದ
ಆಶಾ ತಿಮ್ಮಪ್ಪ – ಪುತ್ತೂರು
ಹರೀಶ್ ಪೂಂಜ – ಬೆಳ್ತಂಗಡಿ
ಭಾಗೀರಥಿ ಮುರುಳ್ಯ – ಸುಳ್ಯ
ರಾಜೇಶ್ ನಾಯ್ಕ್ – ಬಂಟ್ವಾಳ
ಡಾ. ಭರತ್ ಶೆಟ್ಟಿ – ಮಂಗಳೂರು ಉತ್ತರ
ವೇದವ್ಯಾಸ ಕಾಮತ್ – ಮಂಗಳೂರು ದಕ್ಷಿಣ
ಉಮಾನಾಥ್ ಕೋಟ್ಯಾನ್ – ಮೂಡಬಿದಿರೆ
























