ಕಾರ್ಕಳ : ವಿಧಾನ ಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಎ. 6ರಂದು ಕಾರ್ಕಳದಲ್ಲಿ ಪೊಲೀಸರಿಂದ ಪಥಸಂಚಲನ ನಡೆಯಿತು. ಕೇಂದ್ರ ಮೀಸಲು ಪಡೆ ಸಿಬ್ಬಂದಿ, ಕಾರ್ಕಳ ನಗರ, ಗ್ರಾಮಾಂತರ, ಅಜೆಕಾರು, ಹೆಬ್ರಿ ಪೊಲೀಸ್ ಠಾಣೆಯ ಪೊಲೀಸರು ರೂಟ್ ಮಾರ್ಚ್‌ನಲ್ಲಿ ಭಾಗವಹಿಸಿದ್ದರು. ಸಂಜೆ ಪಳ್ಳಿ ಕ್ರಾಸ್‌ನಿಂದ ಬೈಲೂರು ಪ್ರೌಢಶಾಲೆವರೆಗೆ ಬಳಿಕ ಕಾರ್ಕಳ ಜೋಡುರಸ್ತೆಯಿಂದ ಬಂಡಿಮಠದವರೆಗೆ ಪಥಸಂಚಲನ ಜರುಗಿತು.
ಡಿವೈಎಸ್‌ಪಿ ಅರವಿಂದ ಕಲಗುಜ್ಜಿ, ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್, ಪೊಲೀಸ್ ನಿರೀಕ್ಷಕ ಲೋಕೇಶ್ ಎ.ಸಿ., ನಗರ ಠಾಣೆ ಎಸ್‌ಐ ಪ್ರಸನ್ನ ಎಂ.ಎಸ್. ಗ್ರಾಮಾಂತರ ಠಾಣೆ ಎಸ್‌ಐ ತೇಜಸ್ವಿ, ಅಜೆಕಾರು ಠಾಣೆ ಎಸ್‌ಐ ತಿಮ್ಮೇಶ್, ಹೆಬ್ರಿ ಠಾಣೆ ಎಸ್‌ಐ ನಂದಕುಮಾರ್ ಸೇರಿದಂತೆ 100 ಕ್ಕೂ ಅಧಿಕ ಮಂದಿ ಪಥಸಂಚಲನದಲ್ಲಿ ಪಾಲ್ಗೊಂಡರು.





















