3.6 ಟನ್‌ ಗಾಂಜಾ ವಶ

ತೈಲ ಟ್ಯಾಂಕರ್‌ನೊಳಗೆ ಬಚ್ಚಿಟ್ಟು ಸಾಗಾಟ

ಅಗರ್ತಲ: ತ್ರಿಪುರ ಪೊಲೀಸರು ಗುರುವಾರ 7.3 ಕೋಟಿ ರೂ. ಮೌಲ್ಯದ 3,660 ಕೆಜಿ ಗಾಂಜಾ ವಶಪಡಿಸಿಕೊಂಡು ಈ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ. ಉನಕೋಟಿ ಜಿಲ್ಲೆಯ ಪೆಚಾರ್ತಲ್‌ ಚೆಕ್‌ಪೋಸ್ಟ್‌ನಲ್ಲಿ ಅಸ್ಸಾಂನಿಂದ ಬಂದ ಹತ್ತು ಚಕ್ರಗಳ ತೈಲ ಟ್ಯಾಂಕರ್ ಅನ್ನು ತಡೆದು ತಪಾಸಣೆ ಮಾಡಿದಾಗ 3,660 ಕೆಜಿ ಗಾಂಜಾ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ವಾಹನದ ಚಾಲಕ ಪ್ರಿಯಾಲಾಲ್ ದೆಬ್ಬರ್ಮಾ (27) ಮತ್ತು ಕ್ಲೀನರ್‌ ಪರೇಶ್ ದೆಬ್ಬರ್ಮಾ (42) ಎಂಬವರನ್ನು ಬಂಧಿಸಿದ್ದಾರೆ. ಪಶ್ಚಿಮ ತ್ರಿಪುರದಲ್ಲಿ 2.8 ಕೋಟಿ ರೂ.ಮೌಲ್ಯದ 1,385 ಕೆಜಿ ಗಾಂಜಾವನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ವಶಪಡಿಸಿಕೊಂಡ ಎರಡು ದಿನಗಳ ನಂತರ ಈ ಘಟನೆ ನಡೆದಿದೆ.































































































































error: Content is protected !!
Scroll to Top