ಸರಕಾರಿ ಬಂಗಲೆ ಖಾಲಿ ಮಾಡಲು ರಾಹುಲ್‌ ಗಾಂಧಿಗೆ ನೋಟಿಸ್‌

ಖಾಲಿ ಮಾಡಲು ಏ.22ರ ತನಕ ಗಡು

ಹೊಸದಿಲ್ಲಿ : ಅನರ್ಹಗೊಂಡ ಲೋಕಸಭಾ ಸದಸ್ಯ ರಾಹುಲ್ ಗಾಂಧಿ ಅವರಿಗೆ ನೀಡಲಾದ ಅಧಿಕೃತ ಬಂಗಲೆಯನ್ನು ಏ.22ರೊಳಗೆ ಖಾಲಿ ಮಾಡುವಂತೆ ಸೂಚಿಸಿ ನೋಟಿಸ್‌ ಜಾರಿಗೊಳಿಸಲಾಗಿದೆ.
ಕಳೆದ ವಾರ ಅನರ್ಹತೆಯ ನೋಟಿಸ್ ನೀಡಿದ ನಂತರ 12 ತುಘಲಕ್ ಮಾರ್ಗದ ಬಂಗಲೆಯನ್ನು ಖಾಲಿ ಮಾಡುವಂತೆ ಗಾಂಧಿ ಅವರಿಗೆ ಲೋಕಸಭೆಯ ವಸತಿ ಸಮಿತಿಯಿಂದ ನೋಟಿಸ್ ನೀಡಲಾಗಿದೆ.
ಮೋದಿ ಸಮುದಾಯದ ವಿರುದ್ಧ ಮಾನಹಾನಿ ಹೇಳಿಕೆ ಪ್ರಕರಣದಲ್ಲಿ ಗುಜರಾತ್‌ನ ಸ್ಥಳೀಯ ನ್ಯಾಯಾಲಯ ಮಾ.23ರಂದು ರಾಹುಲ್‌ ಗಾಂಧಿಯನ್ನು ಅಪರಾಧಿ ಎಂದು ಘೋಷಿಸಿ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಅನರ್ಹಗೊಂಡ ಲೋಕಸಭಾ ಸದಸ್ಯರು ಸದಸ್ಯತ್ವವನ್ನು ಕಳೆದುಕೊಂಡ ಒಂದು ತಿಂಗಳೊಳಗೆ ಅಧಿಕೃತ ಬಂಗಲೆಯನ್ನು ಖಾಲಿ ಮಾಡಬೇಕು ಎಂಬ ನಿಯಮವಿದೆ.









































error: Content is protected !!
Scroll to Top