ಇಂದು ಭಾರತ-ಆಸ್ಟ್ರೇಲಿಯ ಮೊದಲ ಏಕದಿನ

ಎರಡೂ ತಂಡಗಳಿಗೆ ಕಾಯಂ ನಾಯಕರಿಲ್ಲ

ಮುಂಬಯಿ : ಭಾರತ ಮತ್ತು ಆಸ್ಟ್ರೇಲಿಯ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ ಇಂದಿನಿಂದ ಆರಂಭವಾಗಲಿದೆ. ಮೊದಲ ಪಂದ್ಯದಲ್ಲಿ ಎರಡೂ ತಂಡಗಳು ತಮ್ಮ ನಿಯಮಿತ ನಾಯಕರಿಲ್ಲದೆ ಕಣಕ್ಕಿಳಿಯುತ್ತಿವೆ. ಆಸ್ಟ್ರೇಲಿಯ ನಾಯಕ ಪ್ಯಾಟ್ ಕಮಿನ್ಸ್ ತಾಯಿಯ ಸಾವಿನ ಕಾರಣ ಏಕದಿನ ಸರಣಿಯಲ್ಲಿ ಆಡುತ್ತಿಲ್ಲ. ಇತ್ತ ವಿಶ್ವಕಪ್ ವಿಜೇತ ಸ್ಟೇಡಿಯಂ ವಾಂಖೇಡೆಯಲ್ಲಿ ನಡೆಯಲಿರುವ ಮೊದಲ ಏಕದಿನ ಪಂದ್ಯದಲ್ಲಿ ಭಾರತ ತಂಡದ ನಾಯಕ ರೋಹಿತ್ ಶರ್ಮಾ ಆಡುವುದಿಲ್ಲ.
ವೈಯಕ್ತಿಕ ಕಾರಣಗಳಿಂದ ರೋಹಿತ್ ಮೊದಲ ಪಂದ್ಯದಿಂದ ದೂರ ಉಳಿದಿದ್ದು, ಎರಡನೇ ಪಂದ್ಯದಿಂದ ತಂಡವನ್ನು ಸೇರಿಕೊಳ್ಳಲಿದ್ದಾರೆ. ಹಾರ್ದಿಕ್ ಪಾಂಡ್ಯ ತಂಡವನ್ನು ಮುನ್ನಡೆಸಲಿದ್ದಾರೆ. ಹಾರ್ದಿಕ್ ಈ ಹಿಂದೆ ಟಿ20 ಸರಣಿಯನ್ನು ಮುನ್ನಡೆಸಿದ್ದರು.
ಮೊದಲ ಏಕದಿನ ಪಂದ್ಯ ಮುಂಬೈನ ವಾಂಖೇಡೆ ಸ್ಟೇಡಿಯಂನಲ್ಲಿ ಮಧ್ಯಾಹ್ನ 1:30ಕ್ಕೆ ಆರಂಭವಾಗಲಿದೆ.































































































error: Content is protected !!
Scroll to Top