ರೈಲು ನಿಲ್ದಾಣದ ಎದುರು ಡ್ರಮ್‌ನಲ್ಲಿ ಯುವತಿ ಶವ ಪತ್ತೆ

ಸೀರಿಯಲ್‌ ಕಿಲ್ಲರ್‌ ಕೈವಾಡ ಶಂಕೆ

ಬೆಂಗಳೂರು : ಬೆಂಗಳೂರು ರೈಲು ನಿಲ್ದಾಣದ ಪ್ರವೇಶ ದ್ವಾರದ ಪಕ್ಕದಲ್ಲೇ ಇದ್ದ ಪ್ಲಾಸ್ಟಿಕ್‌ ಡ್ರಮ್‌ ಒಂದರಲ್ಲಿ ಯುವತಿಯ ಶವ ಪತ್ತೆಯಾಗಿದೆ. ನಿನ್ನೆ ರಾತ್ರಿ ಶವ ಪತ್ತೆಯಾಗಿದ್ದು, ಇದು ಎರಡು ತಿಂಗಳಲ್ಲಿ ಪತ್ತೆಯಾದ ಈ ಮಾದರಿಯ ಮೂರನೇ ಪ್ರಕರಣ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮಹಿಳೆಯನ್ನು ಹತ್ಯೆ ಮಾಡುವ ಸೀರಿಯಲ್‌ ಕಿಲ್ಲರ್‌ ಇದ್ದಾನೆಯೇ ಎನ್ನುವ ಅನುಮಾನ ಕಾಡತೊಡಗಿದೆ.
ಎರಡು ತಿಂಗಳ ಹಿಂದೆ ಬೆಂಗಳೂರಿನ ಯಶವಂತಪುರ ಹಾಗೂ ಬೈಯ್ಯಪ್ಪನಹಳ್ಳಿ ರೈಲು ನಿಲ್ದಾಣದ ಬಳಿ ಡ್ರಮ್ ಹಾಗೂ ಚೀಲದಲ್ಲಿ ಮಹಿಳೆಯರ ಶವಗಳು ಪತ್ತೆಯಾಗಿದ್ದವು. ಇದರ ಬೆನ್ನಲ್ಲೇ ಮತ್ತೊಂದು ಮಹಿಳೆಯ ಶವ ಬೈಯ್ಯಪ್ಪನಹಳ್ಳಿ ರೈಲ್ವೆ ಸ್ಟೇಷನ್ ಬಳಿ ಪತ್ತೆಯಾಗಿದೆ. ಮೊದಲ ಎರಡು ಕೇಸ್‌ಗಳ ಬೆನ್ನತ್ತಿರುವ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿಲ್ಲ. ಈಗ ಮತ್ತದೇ ಹಳೇ ಮಾದರಿಯಲ್ಲಿ ಮತ್ತೊಂದು ಮಹಿಳೆಯ ಶವವನ್ನು ಡ್ರಮ್​ನಲ್ಲಿ ಹಾಕಿಕೊಂಡು ಬಂದು ಬೈಯ್ಯಪ್ಪನಹಳ್ಳಿ ರೈಲ್ವೆ ಸ್ಟೇಷನ್ ಬಳಿ ಇಟ್ಟು ಎಸ್ಕೇಪ್ ಆಗಿದ್ದಾರೆ.
ಸೋಮವಾರ ಸಂಜೆ 7 ಗಂಟೆ ರೈಲ್ವೆ ನಿಲ್ದಾಣದ ಎಂಟ್ರಿ ಗೇಟ್ ಬಳಿ ಇದ್ದ ಪ್ಲಾಸ್ಟಿಕ್ ಡ್ರಮ್‌ನಿಂದ ವಾಸನೆ ಬರುತ್ತಿತ್ತು. ಇದರಿಂದ ಅನುಮಾನಗೊಂಡ ಆಟೋ ಚಾಲಕರೊಬ್ಬರು ಡ್ರಮ್‌ನ ಮುಚ್ಚುಳ ತೆರೆದು ನೋಡಿದಾಗ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಕಂಡಿದೆ. ಗಾಬರಿಯಾದ ಅವರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.
ಮಹಿಳೆಯನ್ನು ಬೇರೆ ಕಡೆ ಕೊಲೆ ಮಾಡಿ ಬೆಳಗ್ಗೆ 10 ಗಂಟೆ ಸುಮಾರಿಗೆ ಆಟೋದಲ್ಲಿ ತಂದು ರೈಲ್ವೆ ನಿಲ್ದಾಣದ ಡ್ರಮ್‌ನಲ್ಲಿಟ್ಟು ಹಂತಕರು ಎಸ್ಕೇಪ್ ಆಗಿದ್ದಾರೆ ಎನ್ನಲಾಗಿದೆ. ಮಹಿಳೆ 35 ವರ್ಷದ ಆಸುಪಾಸಿನವಳು. ಬೈಯ್ಯಪ್ಪನಹಳ್ಳಿ ರೈಲ್ವೆ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸ್ಥಳದಲ್ಲಿ ಸಿಕ್ಕ ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ಆಟೋದಲ್ಲಿ ಬಂದು ಡ್ರಮ್ ಇಟ್ಟು ಎಸ್ಕೇಪ್ ಆಗಿರುವ ಆರೋಪಿಗಳ ಪತ್ತೆಗೆ ಶೋಧ ನಡೆಸಿದ್ದಾರೆ.
ಯಶವಂತಪುರ ಹಾಗೂ ಬೈಯ್ಯಪ್ಪನಹಳ್ಳಿಯಲ್ಲಿ ಇದೇ ಮಾದರಿಯಲ್ಲಿ ಡ್ರಮ್ ಹಾಗೂ ಗೋಣಿ ಚೀಲದಲ್ಲಿ ಮಹಿಳೆಯರ ಶವಗಳ ಪತ್ತೆಯಾಗಿದ್ವು. ಆ ಪ್ರಕರಣಗಳ ತನಿಖೆ ಕೈಗೊಂಡಿರೋ ರೈಲ್ವೇ ಪೊಲೀಸರು, ಹತ್ಯೆಯಾದವರ ಪತ್ತೆ ಮಾಡುವುದಕ್ಕೆ ಹರಸಾಹಸ ಪಡುತ್ತಿದ್ದಾರೆ. ಇದರ ಬೆನ್ನಲ್ಲೇ ಮತ್ತೆ ಅದೇ ಮಾದರಿಯಲ್ಲಿ ಮಹಿಳೆಯನ್ನ ಹತ್ಯೆಗೈದು ಡ್ರಮ್‌ನಲ್ಲಿ ತುಂಬಿದ್ದಾರೆ. ಇದರ ಸೀರಿಯಲ್ ಕಿಲ್ಲರ್ ಗ್ಯಾಂಗ್ ಕೈವಾಡವಿರುವ ಶಂಕೆ ಶುರುವಾಗಿದೆ.









































































































error: Content is protected !!
Scroll to Top