ಮಾ.1ರಿಂದ ಸರಕಾರಿ ನೌಕರರ ಅನಿರ್ದಿಷ್ಟಾವಧಿ ಮುಷ್ಕರ

ಹಳೆಯ ಪಿಂಚಣಿ ಬೇಡಿಕೆ ಈಡೇರಿಕೆಗೆ ಆಗ್ರಹ

ಬೆಂಗಳೂರು : ಹಳೆಯ ಪಿಂಚಣಿ ಯೋಜನೆಯನ್ನು ಫೆ.28ರೊಳಗಾಗಿ ಜಾರಿಗೊಳಿಸದಿದ್ದರೆ ಮಾ.1ರಿಂದ ಅನಿರ್ದಿಷಾವಧಿ ಮುಷ್ಕರ ಹೂಡುವುದಾಗಿ ರಾಜ್ಯ ಸರಕಾರಿ ನೌಕರರು ಎಚ್ಚರಿಸಿದ್ದಾರೆ.
ಹಳೆ ಪಿಂಚಣಿ ಸೇರಿ ಮೂರು ಪ್ರಮುಖ ಬೇಡಿಕೆಗಳನ್ನು ಈಡೇರಿಸಲು ಹಲವು ಸುತ್ತಿನ ಹೋರಾಟ ಮಾಡಲಾಗಿದೆ. ಸರಕಾರ ಇನ್ನೂ ಸ್ಪಂದಿಸದಿರುವುದರಿಂದ ಕೊನೆಯ ಅಸ್ತ್ರವಾಗಿ ಮುಷ್ಕರ ಹೂಡುವುದು ಅನಿವಾರ್ಯವಾಗುತ್ತದೆ ಎಂದು ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್‌.ಷಡಕ್ಷರಿ ಹೇಳಿದ್ದಾರೆ.
ಪಂಜಾಬ್‌, ರಾಜಸ್ಥಾನ, ಛತ್ತೀಸ್‌ಗಢ, ಜಾರ್ಖಂಡ್‌, ಹಿಮಾಚಲ ಪ್ರದೇಶ ಸೇರಿ ಕೆಲವು ರಾಜ್ಯಗಳು ನೌಕರರ ಹಿತಾಸಕ್ತಿ ಪರಿಗಣಿಸಿ ಹಳೆ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಿವೆ. ಆದರೆ ರಾಜ್ಯ ಸರಾಕರ ಇನ್ನೂ ಮೀನಮೇಷ ಎಣಿಸುತ್ತಿದೆ. ಬಜೆಟ್‌ನಲ್ಲಿ ಬೇಡಿಕೆ ಈಡೇರುವ ನಿರೀಕ್ಷೆ ಹುಸಿಯಾಗಿದೆ. ಹೀಗಾಗಿ ಮುಷ್ಕರ ಹೂಡುವುದು ಅನಿವಾರ್ಯ. ಎಸ್ಮಾ, ಬೆದರಿಕೆಯಂಥ ತಂತ್ರಗಳಿಗೆ ಮಣಿಯುವುದಿಲ್ಲ ಎಂದು ಷಡ್ಷಕರಿ ಹೇಳಿದ್ದಾರೆ.









































































































error: Content is protected !!
Scroll to Top