ನದಿಯಲ್ಲಿ ಶವ ಪತ್ತೆಯಾದ ಪ್ರಕರಣಕ್ಕೆ ಟ್ವಿಸ್ಟ್- ಐವರು ಆರೋಪಿಗಳು ಸೆರೆ
ಪುಣೆ: ಪುಣೆಯ ದೌಂಡ್ನ ಭೀಮಾ ನದಿಯಲ್ಲಿ 7 ಶವಗಳು ಪತ್ತೆಯಾದ ಕ್ರಕರಣಕ್ಕೆ ತಿರುವು ಸಿಕ್ಕಿದ್ದು, ಇವರನ್ನು ಸಂಬಂಧಿಕೃಎ ಹತ್ಯೆ ಮಾಡಿ ನದಿಗೆ ಎಸೆದಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ. ಇ ಸಂಬಂಧ ಐವರನ್ನು ಪೊಲೀಸರು ಬಂಧಿಸಿದ್ದಾರೆ. ನದಿಯಲ್ಲಿ ಶವ ಪತ್ತೆಯಾದಾಗ ಇದು ಸಾಮೂಹಿಕ ಆತ್ಮಹ್ತಯೆ ಪ್ರಕರಣ ಎಂದು ಶಂಕಿಸಲಾಗಿತ್ತು.
ಹಿರಿಯ ದಂಪತಿ, ಅವರ ಪುತ್ರಿ, ಅಳಿಯ ಮತ್ತು ಮೂವರು ಮೊಮ್ಮಕ್ಕಳನ್ನು ಸಾಯಿಸಿ ನದಿಗೆಸೆದಿದ್ದರು.ಮೊಮ್ಮಕ್ಕಲೂ 3ರಿಂದ 7 ವರ್ಷ ಪ್ರಾಯದವರು.ಇವರೆಲ್ಲ ಉಸ್ಮಾನಾಬಾದ್ ಜಿಲ್ಲೆಯ ಕೂಲಿ ಕಾರ್ಮಿಕರು. ಕೆಲಸಕ್ಕಾಗಿ ಪುಣೆಯ ದೌಂಡ್ಗೆ ಬಂದಿದ್ದರು.ಅವರನ್ನು ಮೋಹನ್ ಪವಾರ್, ಅವರ ಹೆಂಡತಿ ಸಂಗೀತಾ, ಮಗಳು ರಾಣಿ ಫೂಲ್ವಾರೆ, ಅಳಿಯ ಶ್ಯಾಮ್ ಫೂಲ್ವಾರೆ ಮತ್ತು ಅವರ ಮೂವರ ಮಕ್ಕಳು ಎಂದು ಗುರುತಿಸಲಾಗಿದೆ.
ಜನವರಿ 18 ರಿಂದ 24ರ ನಡುವೆ ಭೀಮಾ ನದಿ ದಂಡೆಯಲ್ಲಿ ಮೂರರಿಂದ ಏಳು ವರ್ಷದೊಳಗಿನ ಮೂವರು ಮಕ್ಕಳು ಸೇರಿದಂತೆ ಒಟ್ಟು ಏಳು ಮಂದಿಯ ಮೃತದೇಹ ಪತ್ತೆಯಾಗಿತ್ತು. ಈ ಸಂಬಂಧ ಮೃತರ ಸಂಬಂಧಿಕರಾದ ಐವರನ್ನು ಬಂಧಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ತನಿಖೆ ವೇಳೆ ಎಲ್ಲರನ್ನು ಹತ್ಯೆ ಮಾಡಿರುವ ಬಗ್ಗೆ ಕೆಲವೊಂದು ಮಾಹಿತಿ ತಿಳಿದು ಬಂದಿತು. ಆರೋಪಿ ಪೈಕಿ ಒಬ್ಬನಾದ ಅಶೋಕ್ ಪವಾರ್ನ ಪುತ್ರ ಧನಂಜಯ್ ಪವಾರ್ ಅಪಘಾತದಲ್ಲಿ ಕೆಲವು ತಿಂಗಳ ಹಿಂದೆ ಸಾವನ್ನಪ್ಪಿದ್ದ. ಈ ಸಂಬಂಧ ಪುಣೆಯಲ್ಲಿ ಕೇಸ್ ದಾಖಲಾಗಿತ್ತು.
ಇದರಿಂದ ಆಕ್ರೋಶಗೊಂಡಿದ್ದ ಅಶೋಕ್, ತನ್ನ ಮಗನ ಸಾವಿಗೆ ಹತ್ಯೆಯಾದ ಮೋಹನ್ ಪುತ್ರನೇ ಕಾರಣ ಎಂದು ಕುಪಿತಗೊಂಡಿದ್ದ. ಇದೇ ಕಾರಣದಿಂದ ಪ್ರತೀಕಾರವಾಗಿ ಏಳು ಜನರನ್ನು ಹತ್ಯೆ ಮಾಡಿರುವುದು ಮೇಲ್ನೋಟಕ್ಕೆ ತಿಳಿದುಬಂದಿದೆ ಎಂದು ಪೊಲೀಸ್ ಅಧಿಕಾರಿ ಗೋಯೆಲ್ ತಿಳಿಸಿದ್ದಾರೆ.