ಸಹೋದರನ ಮನೆಗೆ ಬೆಂಕಿ ಹಚ್ಚಿ ತಾನೂ ಸುಟ್ಟುಕೊಂಡು ಸತ್ತ ಅಣ್ಣ

ಸಚ್ಚೇರಿಪೇಟೆಯಲ್ಲೊಂದು ಭೀಕರ ಘಟನೆ; ಕಾರಿನೊಳಗೆ ಕುಳಿತು ಆತ್ಮಹತ್ಯೆ ಮಾಡಿಕೊಂಡ ಅರೋಪಿ

ಬೆಳ್ಮಣ್‌ : ವ್ಯಕ್ತಿಯೊಬ್ಬ ಸಹೋದರನ ಮನೆಗೆ ಬೆಂಕಿಯಿಟ್ಟು ಬಳಿಕ ಕಾರಿನೊಳಗೆ ಕುಳಿತು ಬೆಂಕಿಹಚ್ಚಿಕೊಂಡು ಕಾರಿನ ಸಮೇತ ತಾನೂ ಸುಟ್ಟು ಕರಕಲಾದ ಘಟನೆ ಬೆಳ್ಮಣ್‌ ಸಮೀಪದ ಸಚ್ಚೇರಿಪೇಟೆಯಲ್ಲಿ ಗುರುವಾರ ನಸುಕಿನ ಹೊತ್ತು ಸಂಭವಿಸಿದೆ.
ಸಚ್ಚೇರಿಪೇಟೆಯ ಕೃಷ್ಣ ಕುಲಾಲ್ ಈ ಕೃತ್ಯ ಎಸಗಿದ ವ್ಯಕ್ತಿ. ಕೃಷ್ಣ ಕುಲಾಲ್ ನಸುಕಿನ 3 ಗಂಟೆ ವೇಳೆಗೆ ಸಹೋದರ ಶೇಖರ ಕುಲಾಲ್ ಅವರ ಮನೆಗೆ ಬೆಂಕಿ ಹಚ್ಚಿದ್ದಾನೆ. ಬಳಿಕ ತನ್ನ ಓಮ್ನಿ ಕಾರಿನಲ್ಲಿ ಕುಳಿತು ಅದಕ್ಕೂ ಬೆಂಕಿ ಹಚ್ಚಿದ್ದಾನೆ.

ಶೇಖರ ಕುಲಾಲ್ ಅವರ ಮಗಳ ಮೆಹಂದಿ ಕಾರ್ಯಕ್ರಮ ಮುಗಿದು ಮನೆಯವರೆಲ್ಲ ಗಾಢ ನಿದ್ದೆಯಲ್ಲಿದ್ದ ಹೊತ್ತಿನಲ್ಲಿ ಕೃಷ್ಣ ಕುಲಾಲ್ ಈ ಕೃತ್ಯವೆಸಗಿದ್ದಾನೆ. ಜಮೀನು ವಿವಾದದ ಹಿನ್ನೆಲೆಯಲ್ಲಿ ಈ ಕೃತ್ಯಕ್ಕೆ ಕಾರಣ ಎನ್ನಲಾಗುತ್ತಿದೆ. ಬೆಂಕಿ ಹಚ್ಚುವ ಮುನ್ನ ಕೃಷ್ಣ ಡೆತ್‌ನೋಟ್‌ ಬರೆದು ಮನೆಯ ಕಂಪೌಂಡ್‌ ಗೋಡೆಗೆ ಅಂಟಿಸಿದ್ದು ಅದರಲ್ಲಿ ಹಲವರ ಹೆಸರು ಬರೆದಿಟ್ಟಿದ್ದಾನೆ. ಅಗ್ನಿಶಾಮಕ ಪಡೆಯವರು ಬಂದು ಬೆಂಕಿ ನಂದಿಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

Latest Articles

error: Content is protected !!