ಸಿಎ ಪರೀಕ್ಷೆ ಫಲಿತಾಂಶ

ಕಾರ್ಕಳ : ನವೆಂಬರ್‌ 2022ರಲ್ಲಿ ನಡೆದ ಸಿ.ಎ. ಇಂಟರ್‌ ಮೀಡಿಯೇಟ್‌ ಪರೀಕ್ಷೆಯ ಫಲಿತಾಂಶ ಜ.11 ರಂದು ಪ್ರಕಟಗೊಂಡಿದ್ದು ಅರ್ಚನಾ, ವರ್ಷಾ ವಿ. ಶೆಣೈ ಹಾಗೂ ರಘುರಾಮ್‌ ಪ್ರಭು ತೇರ್ಗಡೆಯಾಗಿದ್ದಾರೆ.

ವರ್ಷಾ ವಿ. ಶೆಣೈ
ಸಿಎ ಅಂತಿಮ ಪರೀಕ್ಷೆಯಲ್ಲಿ ಕಾರ್ಕಳದ ವರ್ಷಾ ವಿ. ಶೆಣೈ ಅವರು ತಮ್ಮ ಮೊದಲ ಪ್ರಯತ್ನದಲ್ಲಿಯೇ ತೇರ್ಗಡೆ ಹೊಂದಿದ್ದಾರೆ. ಇವರು ವರದರಾಯ ಶೆಣೈ ಮತ್ತು ಸವಿತಾ ವಿ. ಶೆಣೈ ದಂಪತಿಯ ಪುತ್ರಿ. ಆನೆಕೆರೆಯ ಸಮೀಪದ ಸಿಎ ಪ್ರಭಾತ್ ಕುಮಾರ್ ಅವರ ಬಳಿ ಆರ್ಟಿಕಲ್ ಶಿಪ್ ನಡೆಸಿದ್ದು, ಸಿಎ ಇಂಟರ್ ಮೀಡಿಯೆಟ್ ತರಬೇತಿಯನ್ನು ತ್ರಿಷಾ ಕ್ಲಾಸಸ್‌ನಲ್ಲಿ ಪಡೆದಿರುತ್ತಾರೆ.

ಅರ್ಚನಾ
ಸಾಗರ ಮೂಲದವರಾದ ಅರ್ಚನ ಹೆಬ್ರಿಯಲ್ಲಿ ನೆಲೆಸಿದ್ದು, ಲಕ್ಷ್ಮಣ್‌ ಪೂಜಾರಿ ಮತ್ತು ಪವಿತ್ರ ದಂಪತಿ ಪುತ್ರಿ. ಈ ಬಾರಿಯ ಸಿಎ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.

ರಘುರಾಮ್‌ ಪ್ರಭು
ರಘುರಾಮ್‌ ಪ್ರಭು ಉಡುಪಿ ಹೊಟೇಲ್‌ನಲ್ಲಿ ವೈಟರ್‌ ಕೆಲಸ ಮಾಡುತ್ತಿರುವ ಬೆಳ್ಲರಪಾಡಿಯ ದೇವೇಂದ್ರ ಪ್ರಭು ಹಾಗೂ ಆನಂದಿ ಪ್ರಭು ದಂಪತಿ ಪುತ್ರ. ಜ್ಞಾನಸುಧಾ ವಿದ್ಯಾಸಂಸ್ಥೆಯಲ್ಲಿ ಪಿಯುಸಿ ವಿದ್ಯಾಭ್ಯಾಸ ಮಾಡಿದ್ದು, 2016 ರಲ್ಲಿ ಸಿಎ ಪರೀಕ್ಷೆಯ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು ಸಿಎ ತರಗತಿಗೆ ದಾಖಲಾತಿ ಪಡೆದುಕೊಂಡಿದ್ದರು. ಇದೀಗ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

















































error: Content is protected !!
Scroll to Top