ಕಾರ್ಕಳ: ಮಿಯ್ಯಾರು ಗ್ರಾಮದ ಜೋಡುಕಟ್ಟೆಯಲ್ಲಿ ಬೈಕ್‌ವೊಂದು ನಡೆದುಕೊಂಡು ಹೋಗುತ್ತಿದ್ದ ದಾಮೋದರ ಮೂಲ್ಯ ಎಂಬವರಿಗೆ ಡಿಕ್ಕಿ ಹೊಡೆದಿರುವ ಘಟನೆ ಜ.9ರಂದು ಸಂಭವಿಸಿದೆ. ದಾಮೋದರ ಮೂಲ್ಯ ಅವರು ಬೆಳಗ್ಗೆ ಎಣ್ಣೆ ತರಲೆಂದು ಮಣ್ಣಿನ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಹಿಂದಿನಿಂದ ವೇಗವಾಗಿ ಬಂದ ಬೈಕ್ ಅವರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ರಸ್ತೆಗೆ ಬಿದ್ದ ದಾಮೋದರ ಮೂಲ್ಯ ಅವರ ಸೊಂಟ, ಕೈ ಮತ್ತು ತಲೆಗೆ ಗಾಯವಾಗಿ ಕಾರ್ಕಳದ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದಾರೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾಡುಪ್ರಾಣಿ ಅಡ್ಡಬಂದು ಸ್ಕೂಟಿ ಪಲ್ಟಿ : ಹಿಂಬದಿ ಸವಾರನಿಗೆ ಗಂಭೀರ ಗಾಯ
ಕಾರ್ಕಳ: ಕಾಡು ಪ್ರಾಣಿಯೊಂದು ಅಡ್ಡಬಂದ ಪರಿಣಾಮ ಸ್ಕೂಟಿ ಪಲ್ಟಿಯಾಗಿ ಹಿಂಬದಿ ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ಸೋಮವಾರ ಬೆಳಗ್ಗೆ ಮಿಯ್ಯಾರಿನ ರಾಮೇರಗುತ್ತು ಎಂಬಲ್ಲಿ ಎಂಭವಿಸಿದೆ. ಸಂದೀಪ ಎಂಬವರು ಚಲಾಯಿಸುತ್ತಿದ್ದ ಸ್ಕೂಟಿಯಲ್ಲಿ ಮಂಜುನಾಥ ಹಿಂಬದಿ ಸವಾರರಾಗಿ ಹೋಗುತ್ತಿದ್ದರು. ಸಂದೀಪ ಸ್ಕೂಟಿಯನ್ನು ವೇಗವಾಗಿ ಚಲಾಯಿಸುತ್ತಿದ್ದು, ರಾಮೇರಗುತ್ತು ಬಳಿ ಬರುವಾಗ ಹಠಾತ್ ಕಾಡು ಪ್ರಾಣಿಯೊಂದು ಅಡ್ಡ ಬಂದಿದೆ. ಸಂದೀಪ್ ಧಿಡೀರ್ ಬ್ರೇಕ್ ಹಾಕಿದಾಗ ಹಿಂದೆ ಕುಳಿತಿದ್ದ ಮಂಜುನಾಥ ರಸ್ತೆಗೆ ಬಿದ್ದು ಗಾಯಗೊಂಡಿದ್ದು, ಸಂದೀಪ್ ಕೂಡ ಸ್ಕೂಟಿ ಸಮೇತ ಬದಿಯ ಹೊಂಡಕ್ಕೆ ಬಿದ್ದು ಗಾಯಗೊಂಡಿದ್ದಾರೆ. ಅದೇ ದಾರಿಯಲ್ಲಿ ಮಿಯ್ಯಾರು ಕಂಬಳ ನೋಡಿ ಬೈಕಿನಲ್ಲಿ ಹಿಂದಿರುಗುತ್ತಿದ್ದ ಮಹೇಂದ್ರ ಮತ್ತು ಸಂದೇಶ್ ಎಂಬವರು ಗಾಯಾಳುಗಳನ್ನು ಉಪಚರಿಸಿ ಆಸ್ಪತ್ರೆಗೆ ಸಾಗಿಸಲು ನೆರವಾಗಿದ್ದಾರೆ. ಅಪಘಾತದಲ್ಲಿ ಮಂಜುನಾಥ ಅವರ ಬೆನ್ನಮೂಳೆಗೆ ಗಾಯವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್‌ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


































