ಗಣರಾಜ್ಯೋತ್ಸವ ಪರೇಡ್​​​​ನಲ್ಲಿ ಕರ್ನಾಟಕದ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಕೇಂದ್ರದಿಂದ ಅನುಮತಿ

ದೆಹಲಿ: ಜನವರಿ 26ರಂದು ದೆಹಲಿಯ ರಾಜಪಥ್‍ನಲ್ಲಿ ನಡೆಯುವ ಗಣರಾಜ್ಯೋತ್ಸವ ದಿನಾಚರಣೆಯ ಪರೇಡ್‍ನಲ್ಲಿ ಈ ವರ್ಷ ಕರ್ನಾಟಕದ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಅವಕಾಶ ನಿರಾಕರಿಸಲಾಗಿತ್ತು. ಕೇಂದ್ರದ ಈ ನಿರ್ಧಾರಕ್ಕೆ ರಾಜ್ಯದಲ್ಲಿ ಆಕ್ರೋಶ ವ್ಯಕ್ತವಾಗಿತ್ತು. ಸದ್ಯ ಈಗ ಕೊನೆ ಕ್ಷಣದಲ್ಲಿ ಕರ್ನಾಟಕದ ಸ್ತಬ್ಧಚಿತ್ರಕ್ಕೆ ಕೇಂದ್ರ ಅವಕಾಶ ಕಲ್ಪಿಸಿದೆ.

ನಾರಿ ಶಕ್ತಿ ಪರಿಕಲ್ಪನೆ
ಪದ್ಮಶ್ರೀ ಪುರಸ್ಕೃತ ಮಹಿಳಾ ಸಾಧಕರ ಸಾಧನೆ ಅನಾವರಣಗೊಳಿಸಲು ರಾಜ್ಯ ನಾರಿ ಶಕ್ತಿ ಕಲ್ಪನೆಯಲ್ಲಿ ಸ್ತಬ್ಧಚಿತ್ರದ ಸಿದ್ಧತೆ ಮಾಡಿಕೊಂಡಿದೆ. ರಾಜ್ಯದ ಮೂವರು ಮಹಿಳಾ ಸಾಧಕಿಯರ ಬಗ್ಗೆ ಸ್ತಬ್ಧಚಿತ್ರ ತಯಾರಾಗಿದೆ. ಸಾಲುಮರದ ತಿಮ್ಮಕ್ಕ, ಸೂಲಗಿತ್ತಿ ನರಸಮ್ಮ, ತುಳಿಸಿಗೌಡ ಇವರ ಸಾಧನೆ ಅನಾವರಣಗೊಳ್ಳಲಿದೆ.

14 ನೇ ಬಾರಿ ರಾಜ್ಯದ ಸ್ತಬ್ದ ಚಿತ್ರ ಪ್ರದರ್ಶನ
ಕಳೆದ ವರ್ಷ ದೆಹಲಿಯ ರಾಜಪಥ್‍ನಲ್ಲಿ 73ನೇ ಗಣರಾಜ್ಯೋತ್ಸವ ದಿನಾಚರಣೆಯ ಪರೇಡ್‍ನಲ್ಲಿ ಭಾಗವಹಿಸಿದ್ದ ಕರ್ನಾಟಕ ಪಾರಂಪರಿಕ ಕರಕುಶಲ ವಸ್ತುಗಳಗಳ ತೊಟ್ಟಿಲು ವಿಷಯಧಾರಿತ ರಾಜ್ಯದ ಸ್ತಬ್ಧಚಿತ್ರಕ್ಕೆ ದ್ವಿತೀಯ ಸ್ಥಾನ ಸಿಕ್ಕಿತ್ತು. ಸತತ 13 ವರ್ಷಗಳಿಂದ ಪ್ರದರ್ಶನಗೊಳ್ಳುತ್ತ ಬಂದಿದ್ದ ಕರ್ನಾಟಕದ ಸ್ತಬ್ಧ ಚಿತ್ರಕ್ಕೆ ಈ ವರ್ಷವೂ ಅವಕಾಶ ಸಿಕ್ಕಿದ್ದು ಸತತ 14ನೇ ಬಾರಿ ರಾಜ್ಯದ ಸ್ಥಬ್ದ ಚಿತ್ರ ಪ್ರದರ್ಶನಗೊಳ್ಳಲಿದೆ.







































































error: Content is protected !!
Scroll to Top