ಹುಬ್ಬಳ್ಳಿ : ಪ್ರಧಾನಿ ಮೋದಿ ಸಂಚರಿಸುವ ಮಾರ್ಗದಲ್ಲಿ ಅಪರಿಚಿತ ವಾಹನ ಪತ್ತೆಯಾಗಿದೆ. ಹೊಸೂರ್ ಕ್ರಾಸ್ ನಲ್ಲಿ ಅಪರಿಚಿತ ಕಾರ್ ನಿಂತಿದ್ದು ಕಳೆದೆರಡು ದಿನಗಳಿಂದ ಈ ಕಾರ್ ಇಲ್ಲೆ ಇದೆ ಎಂಬ ಬಗ್ಗೆ ಮಾಹಿತಿ ತಿಳಿದು ಬಂದಿದೆ. ವೋಲ್ಕ್ಸ್ ವ್ಯಾಗನ್ ಕಂಪನಿಯ ಎಂ ಎಚ್ 10, ಸಿಎ 6984 ಮಹಾರಾಷ್ಟ್ರ ರಾಜ್ಯದ ನೊಂದಣಿ ಹೊಂದಿರುವ ಕಾರ್ ಇದಾಗಿದೆ. ಕಾರು ನೋಡಿ ಪೊಲೀಸರು ಅನುಮಾನಗೊಂಡಿದ್ದು ಟ್ರಾಫಿಕ್ ಪೊಲೀಸರು ಕಾರನ್ನು ಬೇರೆಡೆ ಶಿಫ್ಟ್ ಮಾಡಿದ್ದಾರೆ.
ಇಂದು ಹುಬ್ಬಳ್ಳಿಗೆ ಪ್ರಧಾನಿ ನರೇಂದ್ರ ಮೋದಿ ಆಗಮನ ಹಿನ್ನೆಲೆ ಹುಬ್ಬಳ್ಳಿ ವಿಮಾನ ನಿಲ್ದಾಣವನ್ನು ಎಸ್ಪಿಜಿ ತನ್ನ ಸುಪರ್ದಿಗೆ ಪಡೆದಿದೆ. ಏರ್ಪೋರ್ಟ್ ಸುತ್ತಮುತ್ತ ಹೆಚ್ಚುವರಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಪ್ರಧಾನಿ ಆಗಮಿಸುವ ಒಂದು ಗಂಟೆ ಮುನ್ನ ರಸ್ತೆ ಸಂಚಾರ ಬಂದ್ ಮಾಡಲಾಗುತ್ತೆ ಹಾಗೂ ಹುಬ್ಬಳ್ಳಿಯ ಹೊಸೂರ ವೃತ್ತಕ್ಕೆ ಭದ್ರತೆ ತಪಾಸಣೆಗೆ ಎಸ್‌ಪಿ ಲೋಕೇಶ್ ಮತ್ತು ಇಬ್ಬರು ಡಿಸಿಪಿಗಳು ಭೇಟಿ ನೀಡಿದ್ದಾರೆ.
ರಾಷ್ಟ್ರೀಯ ಯುವ ಜನೋತ್ಸವ ಹಿನ್ನೆಲೆಯಲ್ಲಿ ಹುಬ್ಬಳ್ಳಿಯಲ್ಲಿನ ರಸ್ತೆಗಳು ಫುಲ್ ಕ್ಲೀನ್ ಆಗುತ್ತಿವೆ. ನಗರದ ಭಗತಸಿಂಗ್ ಸರ್ಕಲ್, ಹೊಸುರ್ ಸರ್ಕಲ್ ಹಾಗೂ ಟ್ರಾಫಿಕ್ ಪೋಲಿಸ್ ಸ್ಟೆಶನ್ ಸರ್ಕಲ್ ನಲ್ಲಿ ಮೋದಿ ಸ್ವಾಗತಕ್ಕೆ ದೊಡ್ಡ ಬ್ಯಾನರ್ ಅಳವಡಿಕೆ ಮಾಡಲಾಗಿದೆ. ವಿಮಾನ ನಿಲ್ದಾಣದಿಂದ ರೈಲ್ವೆ ಮೈದಾನದ ವರೆಗೂ ಬ್ಯಾರಿಕೇಡ್ ಅಳವಡಿಸಲಾಗಿದೆ. ಬ್ಯಾರಿಕೇಡ್ ಅಳವಡಿಸಿ ಹೊರ ಭಾಗದಲ್ಲಿ ನಿಂತುಕೊಂಡು ಮೋದಿ ಅವರನ್ನ ಕಣ್ತುಂಬಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಇನ್ನು ಒಟ್ಟು ಹತ್ತು ಕಡೆಗಳಲ್ಲಿ ಮೋದಿ ಜನರತ್ತ ಕೈ ಬೀಸಲಿದ್ದಾರೆ. ಕಾರಿನಿಂದ ಇಳಿದು ಮೋದಿ ಜನರತ್ತ ಕೈ ಬೀಸಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ.
ರಾಷ್ಟ್ರೀಯ ಯುವಜನೋತ್ಸವ 2023 ಉದ್ಘಾಟನ ಸಮಾರಂಭ : ಪ್ರಧಾನಿ ಮೋದಿ ಸಂಚರಿಸುವ ಮಾರ್ಗದಲ್ಲಿ ಅಪರಿಚಿತ ವಾಹನ ಪತ್ತೆ





































