ಆರ್‌ಆರ್‌ಆರ್‌ನ ನಾಟು ನಾಟು ಹಾಡಿಗೆ ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿ

ಪ್ರತಿಷ್ಠಿತ ಪ್ರಶಸ್ತಿ ಗೆದ್ದ ಭಾರತದ ಮೊದಲ ಚಿತ್ರ

ಕ್ಯಾಲಿಫೋರ್ನಿಯ : ಖ್ಯಾತ ನಿರ್ದೇಶಕ ಎಸ್. ಎಸ್. ರಾಜಮೌಳಿ ನಿರ್ದೇಶನದಲ್ಲಿ ಕಳೆದ ವರ್ಷ ತೆರೆಕಂಡ ಆರ್‌ಆರ್‌ಆರ್ ಚಿತ್ರದ ‘ನಾಟು ನಾಟು’ ಹಾಡು 2023ರ ಗೋಲ್ಡನ್ ಗ್ಲೋಬ್‌ನಲ್ಲಿ ಅತ್ಯುತ್ತಮ ಮೂಲಗೀತೆ ಪ್ರಶಸ್ತಿಯನ್ನು ಗೆದ್ದಿದೆ.
ಗೋಲ್ಡನ್ ಗ್ಲೋಬ್ ನಲ್ಲಿ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಚಿತ್ರ ಎಂಬ ಹೆಗ್ಗಳಿಕೆಗೆ ಆರ್‌ಆರ್‌ಆರ್ ಪಾತ್ರವಾಗಿದೆ. 1200 ಕೋಟಿ ರೂಪಾಯಿಗೂ ಹೆಚ್ಚು ಜಾಗತಿಕ ಮಟ್ಟದಲ್ಲಿ ಗಳಿಕೆ ಕಂಡಿರುವ RRR ಈಗಾಗಲೇ ಹಲವಾರು ಅಂತಾರಾಷ್ಟ್ರೀಯ ಮನ್ನಣೆಗಳನ್ನು ಗಳಿಸಿದೆ.ನಾಟು ನಾಟು ಹಾಡಿಗೆ ಎಂ.ಎಂ.ಕೀರವಾಣಿ ಸಂಗೀತ ನಿರ್ದೇಶಿಸಿದ್ದಾರೆ ಹಾಗೂ ಕಲಾ ಬೈರವಿ ಮತ್ತು ರಾಹುಲ್‌ ಸಿಪ್ಲಿಗಂಜ್‌ ಹಾಡನ್ನು ಬರೆದಿದ್ದಾರೆ.















































error: Content is protected !!
Scroll to Top