ಮಹಿಳೆ ಮೇಲೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ಆರೋಪಿ ಬೆಂಗಳೂರಿನಲ್ಲಿ ಸೆರೆ

ತಲೆಮರೆಸಿಕೊಳ್ಳಲು ಬೆಂಗಳೂರಿಗೆ ಬಂದಿದ್ದ ಶಂಕರ್‌ ಮಿಶ್ರಾ

ಬೆಂಗಳೂರು: ವಿಮಾನದಲ್ಲಿ ಮಹಿಳೆಯ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಶಂಕರ್ ಮಿಶ್ರಾನನ್ನು ದಿಲ್ಲಿ ಪೊಲೀಸರು ಬೆಂಗಳೂರಿನಲ್ಲಿ ಶನಿವಾರ ಬಂಧಿಸಿದ್ದಾರೆ.
ನ್ಯೂಯಾರ್ಕ್‌ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಸಹ-ಪ್ರಯಾಣಿಕ ವೃದ್ಧ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ ಶಂಕರ್ ಮಿಶ್ರಾನನ್ನು ಹುಡುಕಿಕೊಂಡು ಪೊಲೀಸರ ತಂಡ ಶುಕ್ರವಾರವೇ ಬೆಂಗಳೂರಿಗೆ ಬಂದಿಳಿದಿತ್ತು.
ಆರೋಪಿಯನ್ನು ಸಂಜಯ್‌ ನಗರ ಪ್ರದೇಶದಿಂದ ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಮಿಶ್ರಾ ಕ್ಯಾಲಿಫೋರ್ನಿಯಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಅಮೆರಿಕದ ಬಹುರಾಷ್ಟ್ರೀಯ ಹಣಕಾಸು ಸೇವೆಗಳ ಕಂಪನಿ ವೆಲ್ಸ್ ಫಾರ್ಗೋದ ಭಾರತೀಯ ವಿಭಾಗದ ಉಪಾಧ್ಯಕ್ಷನಾಗಿದ್ದ. ವೆಲ್ಸ್ ಫಾರ್ಗೋ ಬೆಳ್ಳಂದೂರಿನಲ್ಲಿ ಕಚೇರಿಯನ್ನು ಹೊಂದಿದ್ದು, ಮಿಶ್ರಾ ಆಗಾಗ್ಗೆ ಭೇಟಿ ನೀಡುತ್ತಿದ್ದ.
ಮಿಶ್ರಾಗೆ ಬೆಂಗಳೂರಿನಲ್ಲಿ ಸಂಬಂಧಿಕರಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಬೆಂಗಳೂರಿಗೆ ಬಂದಿದ್ದರು. ದಿಲ್ಲಿಯಿಂದ ಮತ್ತೊಂದು ಪೊಲೀಸ್ ತಂಡ ಮುಂಬೈಗೆ ತೆರಳಿದ್ದು, ಅಲ್ಲಿರುವ ಆತನ ತಂದೆ ಶ್ಯಾಮ್ ಮಿಶ್ರಾ ಅವರನ್ನು ವಿಚಾರಣೆಗೆ ಒಳಪಡಿಸಿದೆ. ಶಂಕರ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ತಲೆಮರೆಸಿಕೊಂಡಿದ್ದ.
ಮಿಶ್ರಾ ವಿರುದ್ಧ ಸೆಕ್ಷನ್ 294 (ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಕೃತ್ಯ), 354 (ಮಹಿಳೆ ಮೇಲೆ ಹಲ್ಲೆ ಅಥವಾ ಕ್ರಿಮಿನಲ್ ಪ್ರಕರಣ), 509, ಮತ್ತು ಐಪಿಸಿಯ 510 (ಮದ್ಯ ಸೇವಿಸಿದ ವ್ಯಕ್ತಿಯಿಂದ ಸಾರ್ವಜನಿಕವಾಗಿ ದುರ್ವರ್ತನೆ) ಹಾಗೂ ವಿಮಾನ ನಿಯಮಗಳ ಅಡಿಯಲ್ಲಿ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ದೇಶ ತೊರೆಯದಂತೆ ಪೊಲೀಸರು ‘ಲುಕ್ ಔಟ್ ಸುತ್ತೋಲೆ’ ಕೂಡ ಹೊರಡಿಸಿದ್ದರು.

















































error: Content is protected !!
Scroll to Top