ಡಿ. 20-21 : ನಿಟ್ಟೆ ಕಾಲೇಜಿನಲ್ಲಿ ಕೈಗಾರಿಕಾ ಮತ್ತು ಶೈಕ್ಷಣಿಕ ಪರಿಣತರ ಸಮಾವೇಶ

ಕಾರ್ಕಳ : ನಿಟ್ಟೆ ಕಾಲೇಜಿನಲ್ಲಿ ಡಿ. 20 ಹಾಗೂ 21ರಂದು ಕೈಗಾರಿಕಾ ಮತ್ತು ಶೈಕ್ಷಣಿಕ ಪರಿಣತರ ಸಮಾವೇಶ ನಡೆಯಲಿದೆ. ಕೈಗಾರಿಕಾ ವಲಯದ ಪ್ರಸ್ತುತ ಅಗತ್ಯತೆಗಳ ಕುರಿತು ಬೋಧಕ ವಲಯ ಮತ್ತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಸಲುವಾಗಿ ನಿಟ್ಟೆ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಅಂಗಸಂಸ್ಥೆ ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯವು ಎರಡು ದಿನಗಳ ಕಾಲ ಕೈಗಾರಿಕಾ ಮತ್ತು ಶೈಕ್ಷಣಿಕ ಪರಿಣತರ ಸಮಾವೇಶ-2022 ನ್ನು ಹಮ್ಮಿಕೊಂಡಿದೆ.

ಶೈಕ್ಷಣಿಕ ವಲಯ ಮತ್ತು ಕೈಗಾರಿಕಾ ರಂಗಗಳ ನಡುವಿನ ಸವಾಲು, ಅಂತರವನ್ನು ಪರಿಹರಿಸಲು ಈ ಎರಡೂ ಕ್ಷೇತ್ರಗಳ ಪರಿಣತರ ಸಂವಾದಕ್ಕೆ ವೇದಿಕೆಯನ್ನು ಸಿದ್ಧಪಡಿಸಲಾಗುತ್ತಿದೆ. ಇದರೊಂದಿಗೆ ಸುಸ್ಥಿರವಾದ ಸಮಾಜದ ಅಭಿವೃದ್ಧಿಗೆ ಕೈಗಾರಿಕೆ ಮತ್ತು ಶಿಕ್ಷಣ ಕ್ಷೇತ್ರಗಳು ಒಂದಾಗಿ ಸಾಗಬೇಕಾದ ಅನಿವಾರ್ಯತೆ ಕುರಿತ ಅಂಶವನ್ನು ಸಮಾವೇಶ ಸಾರಲಿದೆ.

ಉದ್ಘಾಟನೆ
ಬೆಂಗಳೂರಿನ ಸೆಂಟ್ರಲ್ ಮ್ಯಾನುಫ್ಯಾಕ್ಚರಿಂಗ್‌ ಟೆಕ್ನಾಲಜಿ ಇನ್ಸ್ಟಿಟ್ಯೂಟ್ ನ ನಿರ್ದೇಶಕ ಡಾ. ನಾಗಹನುಮಯ್ಯ ಡಿ. 20 ರಂದು ಸಮಾವೇಶ ಉದ್ಘಾಟಿಸುವರು. ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್. ವಿನಯ ಹೆಗ್ಡೆ ಅಧ್ಯಕ್ಷತೆ ವಹಿಸಲಿದ್ದು, ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಪ್ರೊ ವೈಸ್‍ಚಾನ್ಸೆಲರ್ ಡಾ. ಎಂ.ಎಸ್. ಮೂಡಿತ್ತಾಯ ಅತಿಥಿಗಳಾಗಿ ಭಾಗವಹಿಸಲಿರುವರು.

ಸಂವಾದದ ಪ್ರಮುಖ ಕ್ಷೇತ್ರ
ಭಾರತ ಸರಕಾರದ ನೀತಿ ಆಯೋಗ ಗುರುತಿಸಿರುವ ಆದ್ಯತೆಯ ಕ್ಷೇತ್ರಗಳಾದ ಸೆಮಿಕಂಡಕ್ಟರ್‌ ವಲಯ, ಇಂಧನ ಕ್ಷೇತ್ರ / ಶಕ್ತಿಸಂಪನ್ಮೂಲ, ವಾಹನೋದ್ಯಮ, ಭಾರತೀಯ ಕೈಗಾರಿಕೆಗಳು ಮತ್ತು ಡಿಜಿಟಲೀಕರಣ ಸವಾಲುಗಳು ಎಂಬ 4 ವಿಷಯಗಳ ಕುರಿತು ಸಂವಾದ ನಡೆಯಲಿದೆ.

ಸಮಾವೇಶದ ಆಶಯ
ಉದ್ಯಮ ಮತ್ತು ಶೈಕ್ಷಣಿಕ ವಲಯದ ನಡುವಿನ ಸಂಬಂಧ ಬಲಪಡಿಸಲು ವಿಷಯ ಪರಿಣತರ ಚರ್ಚೆಗಳನ್ನು ಏರ್ಪಡಿಸುವುದು ಮತ್ತು ಸಂವಾದನಾತ್ಮಕ ಅಧಿವೇಶನಕ್ಕೆ ಅವಕಾಶ ಕಲ್ಪಿಸುವುದು. ಕೈಗಾರಿಕಾ ಕ್ಷೇತ್ರ ಮತ್ತು ಶೈಕ್ಷಣಿಕ ವಲಯದ ಜಂಟಿ ಯೋಜನೆಗಳಿಗೆ ನಿಟ್ಟೆ ಶಿಕ್ಷಣ ಸಂಸ್ಥೆಯ ಸಾಮರ್ಥ್ಯವನ್ನು ಬಿಂಬಿಸುವುದು, ಪರಸ್ಪರ ಪಾಲುದಾರಿಕೆಯ ಪ್ರಯೋಜನಗಳನ್ನು ಶಿಕ್ಷಣ ಮತ್ತುಕೈಗಾರಿಕಾರಂಗ ಪಡೆದುಕೊಳ್ಳಲಾಗುವಂತಹ ಸಂವಾದಗಳನ್ನು ತಜ್ಞರ ನಡುವೆ ಏರ್ಪಡಿಸುವುದು. ಸಂಸ್ಥೆಯ ಬೋಧಕರ ಮತ್ತು ವಿದ್ಯಾರ್ಥಿಗಳ ಸಾಮರ್ಥ್ಯ ಮತ್ತು ಕೌಶಲ್ಯಗಳನ್ನು ಪರಿಚಯಿಸಲು ವಿದ್ಯಾರ್ಥಿಗಳ ಯೋಜನೆ ಮತ್ತು ಉತ್ಪನ್ನಗಳ ಪ್ರದರ್ಶನ ಮಾಡವುದು.
ಜ್ಞಾನ, ತಂತ್ರಜ್ಞಾನ, ಅನುಭವಗಳ ಪರಸ್ಪರ ವಿನಿಮಯಕ್ಕೆ ಶೈಕ್ಷಣಿಕ ವಲಯ ಹಾಗೂ ಕೈಗಾರಿಕಾ ಕ್ಷೇತ್ರವನ್ನು ಮುಖಾಮುಖಿಗೊಳಿಸುವುದು, ಕೈಗಾರಿಕೆಗಳು ಎದುರಿಸುತ್ತಿರುವ ಅನ್ವೆಷಣಾ ವೆಚ್ಚ ಮತ್ತುಕಾರ್ಯಸಾಧ್ಯತೆಯ ಸವಾಲುಗಳಿಗೆ ಪರಿಹಾರೋಪಾಯಗಳನ್ನು ಕಂಡುಕೊಳ್ಳುವುದು. ಕೈಗಾರಿಕೆಗಳ ಅಗತ್ಯತೆ ಮತ್ತು ಶೈಕ್ಷಣಿಕ ವಲಯದ ಪರಿಣತಿಯ ನಡುವಿನ ಅಂತರವನ್ನು ಕಡಿಮೆಗೊಳಿಸುವ ಚರ್ಚೆಗಳನ್ನು ಮುನ್ನೆಲೆಗೆ ತರುವುದು, ಕೈಗಾರಿಕಾ ವಲಯ ಹಾಗೂ ಶೈಕ್ಷಣಿಕ ವಲಯಗಳ ನಡುವಿನ ಅಂತರವನ್ನು ತಗ್ಗಿಸುವಲ್ಲಿಎನ್.ಎಂ. ಎ. ಎಂ. ಐ. ಟಿ. ಯ ಸಾಮರ್ಥವನ್ನು ನಿರೂಪಿಸುವುದು ಹಾಗೂ ನಮ್ಮ ಸಂಸ್ಥೆಯನ್ನು ಸ್ಥಳೀಯ ತಂತ್ರಜ್ಞಾನಗಳ ಸಂಶೋಧನೆ ಮತ್ತು ಅಭಿವೃದ್ಧಿಯ ಶ್ರೇಷ್ಠ ಕೇಂದ್ರವನ್ನಾಗಿಸುವ ಗುರಿಯನ್ನು ಹೊಂದುವುದಾಗಿದೆ.











































error: Content is protected !!
Scroll to Top