ಕಾರ್ಕಳ : ಕ್ರಿಯೇಟಿವ್ ವಿದ್ಯಾರ್ಥಿಗಳಿಗೆ ಹಸಿರೊಡನೆ ಕಲಿಕೆಯ ಕಲರವ ಕಾರ್ಯಕ್ರಮ

ವಿದ್ಯಾರ್ಥಿಗಳು ಕೆಸರನ್ನು ಅಸಹ್ಯ ಎಂದು ಭಾವಿಸದೇ ಮಣ್ಣಿನ ಮಕ್ಕಳಾಗಬೇಕು- ಹರಿಶ್ಚಂದ್ರ ಕುಲಾಲ್

ಕಾರ್ಕಳ: ಕ್ರಿಯೇಟಿವ್ ಪ.ಪೂ. ಕಾಲೇಜಿನ ʼಹಸಿರೊಡನೆ ಕಲಿಕೆಯ ಕಲರವʼ ಕಾರ್ಯಕ್ರಮ ಪೆರ್ವಾಜೆ ಶ್ರೀಮಹಾಲಿಂಗೇಶ್ವರ ದೇವಸ್ಥಾನದ ಬಳಿ ಸೆ. 19ರಂದು ಜರುಗಿತು. ಮುಖ್ಯಅತಿಥಿಯಾಗಿ ಹರಿಶ್ಚಂದ್ರ ಕುಲಾಲ್ ಭಾಗವಹಿಸಿದ್ದು, ಮಾತನಾಡಿದ ಅವರು ಇಂದು ನಾವು ವಿದ್ಯಾಭ್ಯಾಸದಲ್ಲಿ ಶೈಕ್ಷಣಿಕ ಪ್ರಗತಿಯನ್ನು ಮಾತ್ರ ಗಮನಿಸುತ್ತಿದ್ದೇವೆ ಆದರೆ ನಮಗೆ ಅನ್ನ ನೀಡುವ ಕೃಷಿಭೂಮಿ ಮತ್ತು ಕೃಷಿಕರ ಕುರಿತು ತಿಳುವಳಿಕೆ ಪಡೆಯಲು ವಿದ್ಯಾರ್ಥಿಗಳಿಗೆ ಇದೊಂದು ಉತ್ತಮ ಕಾರ್ಯಕ್ರಮ. ವಿದ್ಯಾರ್ಥಿಗಳು ಕೆಸರನ್ನು ಅಸಹ್ಯ ಎಂದು ಭಾವಿಸದೇ ಮಣ್ಣಿನ ಮಕ್ಕಳಾಗಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ ಸಹ ಸಂಸ್ಥಾಪಕ ಡಾ. ಗಣನಾಥಶೆಟ್ಟಿ ಮಾತನಾಡಿ ಜಗತ್ತಿನಲ್ಲಿ ಹಿಂದೆ ಎಲ್ಲರೂ ದೀರ್ಘಾಯುಷಿಗಳಾಗಿದ್ದರು. ಯಾಕೆಂದರೆ ಅವರೆಲ್ಲ ಸಾವಯವ ಕೃಷಿಯನ್ನು ಉತ್ತೇಜಿಸಿ, ನಮ್ಮ ಮಣ್ಣಿನ ಸಂಸ್ಕೃತಿಯನ್ನು ಉಳಿಸುವಲ್ಲಿ ಪ್ರಯತ್ನ ಪಟ್ಟಿದ್ದರು. ಆದರೆ ಪ್ರಸ್ತುತ ದಿನಗಳಲ್ಲಿ ಕೃಷಿ ಭೂಮಿಗಳೆಲ್ಲ ಹಡಿಲು ಭೂಮಿಯಾಗಿ ಮಾರ್ಪಟ್ಟಿದೆ ಎಂದು ಅಭಿಪ್ರಾಯಪಟ್ಟರು.
ಪ್ರಗತಿಪರ ಕೃಷಿಕ ಸ್ಥಳೀಯ ಮಣಿ ಕಂಪೌಂಡ್ ನಿವಾಸಿ ರಾಜು ಶೆಟ್ಟಿಯವರನ್ನು ವಿದ್ಯಾಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು. ಸುರೇಶ್ ಆನಂದ್ ರಾವ್, ಸುನಿಲ್ ಶೆಟ್ಟಿ, ರಾಕೇಶ್ ಇವರನ್ನು ಗೌರವಿಸಲಾಯಿತು. ಕ್ರಿಯೇಟಿವ್ ನ ಸಹಸಂಸ್ಥಾಪಕ ಅಮೃತ್ ರೈ, ಪ್ರವೀಣ್ ಕುಮಾರ್ ಹಿರ್ಗಾನ, ಉಪನ್ಯಾಸಕರಾದ ರಾಘವೇಂದ್ರ ರಾವ್, ಉಮೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳಿಗೆ ಕೃಷಿಭೂಮಿಯಲ್ಲಿ ವಿವಿಧ ಆಟೋಟ ಸ್ಪರ್ಧೆಗಳನ್ನು ನಡೆಸಲಾಯಿತು.
ಸಮಾರೋಪ ಸಮಾರಂಭವು ಮಧ್ಯಾಹ್ನ 3.30ಕ್ಕೆನೆರವೇರಿತು. ಪೆರ್ವಾಜೆ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಸಿ. ಪಿ. ಹರಿಕೃಷ್ಣಭಟ್ ಮುಖ್ಯ ಅತಿಥಿಯಾಗಿ ಆಗಮಿಸಿ ವಿಜೇತರಿಗೆ ಬಹುಮಾನ, ಪ್ರಶಸ್ತಿ ಪತ್ರ ವಿತರಿಸಿದರು. ಸಂಸ್ಥೆಯ ಸಂಸ್ಥಾಪಕರುಗಳಾದ ಅಶ್ವಥ್ ಎಸ್. ಎಲ್., ಆದರ್ಶ ಎಂ. ಕೆ., ಉಪನ್ಯಾಸಕ ವರ್ಗದವರು ಹಾಗೂ ಉಪನ್ಯಾಸಕೇತರ ಬಳಗದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ವಿನಾಯಕ್, ಶಿವಕುಮಾರ್, ರಾಜೇಶ್, ನವೀನ್, ರವಿರಾಜ್ ವಿವಿಧ ಸ್ಪರ್ಧೆಗಳನ್ನು ನಡೆಸಿಕೊಟ್ಟರು. ರಾಮಕೃಷ್ಣ ಹೆಗಡೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.









































































































error: Content is protected !!
Scroll to Top