ಕಾರ್ಕಳ : ಕಾರ್ಗಿಲ್ ವಿಜಯ ದಿವಸದ ಅಂಗವಾಗಿ ಯುವಸ್ಪಂದನ ಗೆಳೆಯರ ಬಳಗ ಮುಂಡ್ಲಿ ವತಿಯಿಂದ ಕಾರ್ಗಿಲ್ ಯುದ್ಧ ಸಂದರ್ಭ ಸೇನೆಯಲ್ಲಿ ಸೇವೆ ಸಲ್ಲಿಸಿರುವ ಶಿರ್ಲಾಲು ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಅವರನ್ನು ಜು. 26ರಂದು ಸನ್ಮಾನಿಸಲಾಯಿತು.
ಗೌರವ ಸ್ವೀಕರಿಸಿ ಮಾತನಾಡಿದ ಶ್ರೀನಿವಾಸ್, ಯುವ ಜನತೆ ಸೈನ್ಯದಲ್ಲಿ ಸೇವೆ ಸಲ್ಲಿಸಲು ಉತ್ಸುಕರಾಗಬೇಕು. ಅಗ್ನಿಪಥ್ ಯೋಜನೆಯಡಿ ಯುವಕರಿಗೆ ಸೇನೆ ಸೇರಲು ಅಪೂರ್ವ ಅವಕಾಶ ಲಭಿಸಿದೆ ಎಂದರು.

ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ರಮಾನಂದ ಪೂಜಾರಿ, ಉಪಾಧ್ಯಕ್ಷೆ ಪ್ರಮೀಳಾ, ಸದಸ್ಯರು, ಪಂ. ಸಿಬ್ಬಂದಿ, ಮುಂಡ್ಲಿ ಬಸದಿಯ ಪುರೋಹಿತ, ಯುವಸ್ಪಂದನ ಗೆಳೆಯರ ಬಳಗದ ಗೌರವ ಸಲಹೆಗಾರ ವೀರಾಸೇನ ಇಂದ್ರ ಮೊದಲಾದವರು ಉಪಸ್ಥಿತರಿದ್ದರು.
























