ಕಾರ್ಕಳ : ಕರ್ನಾಟಕ ಗೇರು ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರಾಗಿ ಕಾರ್ಕಳದ ನ್ಯಾಯವಾದಿ ಮಣಿರಾಜ್ ಶೆಟ್ಟಿ ಅವರನ್ನು ಮತ್ತೆ ನೇಮಕಗೊಳಿಸಿ ಅರಣ್ಯ, ಜೀವಿಶಾಸ್ತ್ರ, ಪರಿಸರ ಇಲಾಖೆ ಉಪಕಾರ್ಯದರ್ಶಿ ಎಸ್. ಶ್ರೀನಿವಾಸ್ ಜು. 25ರಂದು ಆದೇಶ ಹೊರಡಿಸಿರುತ್ತಾರೆ. ಈ ಹಿಂದೆ 2020ರ ನವೆಂಬರ್ 24ರಂದು ಯಡಿಯೂರಪ್ಪ ಸರಕಾರ ಮಣಿರಾಜ್ ಶೆಟ್ಟಿ ಅವರನ್ನು ನಿಗಮದ ಅಧ್ಯಕ್ಷರನ್ನಾಗಿ ನೇಮಕಗೊಳಿಸಿತ್ತು. 2022 ಜುಲೈ 12ರಂದು ಬೊಮ್ಮಾಯಿ ಸರಕಾರ 46 ವಿವಿಧ ನಿಗಮ, ಮಂಡಳಿಗಳ ಅಧ್ಯಕ್ಷರ ನಾಮನಿರ್ದೇಶನ ರದ್ದುಪಡಿಸಿದ ಹಿನ್ನೆಲೆಯಲ್ಲಿ ಮಣಿರಾಜ್ ಶೆಟ್ಟಿ ಅವರೂ ಗೇರು ನಿಗಮದ ಅಧ್ಯಕ್ಷ ಸ್ಥಾನ ತ್ಯಜಿಸುವಂತಾಗಿತ್ತು. ಮೂರು ಅವಧಿಗೆ ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷರಾಗಿ, ಪ್ರಸ್ತುತ ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುವ ಮಣಿರಾಜ್ ಶೆಟ್ಟಿ ಅವರಿಗೆ ಇದೀಗ ಸಚಿವ ಸುನೀಲ್ ಕುಮಾರ್ ಅವರ ಶಿಫಾರಸ್ಸಿನ ಮೇರೆಗೆ ಸರಕಾರ ಮತ್ತೊಮ್ಮೆ ಮಣೆ ಹಾಕಿದೆ.
ಮತ್ತೆ ಮಣಿರಾಜ್ ಶೆಟ್ಟಿ ಅವರಿಗೆ ಗೇರು ನಿಗಮದ ಹೊಣೆ



















