*ಮಂಗಳೂರಿನಲ್ಲಿ ಸೋಮವಾರ ರಾತ್ರಿ ನಡೆದ ಘಟನೆ
*ನಗರದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಗಳು
ಮಂಗಳೂರು: ಪ್ರತಿಷ್ಠಿತ ಕಾಲೇಜೊಂದರ ವಿದ್ಯಾರ್ಥಿಗಳು ಕಿಸ್ಸಿಂಗ್ ಸ್ಪರ್ಧೆ ಏರ್ಪಡಿಸಿದ್ದ ವೀಡಿಯೊ ಬಹಿರಂಗವಾಗಿ ದೇಶಾದ್ಯಾಂತ ಸುದ್ದಿಯಾಗಿದ್ದ ಮಂಗಳೂರು ಇದೀಗ ಸೋಮವಾರ ರಾತ್ರಿ ಇದೇ ಮಾದರಿಯ ಇನ್ನೊಂದು ಘಟನೆಗೆ ಸಾಕ್ಷಿಯಾಗಿದೆ.
ನಗರದ ಪಬ್ ಒಂದರಲ್ಲಿ ನಡೆಯುತ್ತಿದ್ದ ಪ್ರತಿಷ್ಠಿತ ಕಾಲೇಜೊಂದರ ಮೋಜುಮಸ್ತಿಯ ಪಾರ್ಟಿಗೆ ಬಜರಂಗ ದಳ ಕಾರ್ಯಕರ್ತರು ದಾಳಿ ಮಾಡಿ ಅಡ್ಡಿಪಡಿಸಿದ್ದಾರೆ. ಪಬ್‌ನಲ್ಲಿ ವಿದ್ಯಾರ್ಥಿಗಳ ವಿದಾಯಕೂಟ ನಡೆಯುತ್ತಿತ್ತು ಎನ್ನಲಾಗಿದೆ.
ಮಂಗಳೂರು ನಗರದ ಪಬ್ ಒಂದರಲ್ಲಿ ಕಾಲೇಜು ವಿದ್ಯಾರ್ಥಿಗಳು ಸಹಪಾಠಿಗಳ ಜೊತೆ ಸೇರಿ ವಿದಾಯಕೂಟ ಆಚರಿಸುತ್ತಿದ್ದ ಸಂದರ್ಭದಲ್ಲಿ ಬಜರಂಗ ದಳದ ಕಾರ್ಯಕರ್ತರು ಸೋಮವಾರ ರಾತ್ರಿ ಅಲ್ಲಿಗೆ ತೆರಳಿ ವಿದ್ಯಾರ್ಥಿಗಳ ಮೋಜುಮಸ್ತಿಗೆ ಅಡ್ಡಿಪಡಿಸಿ ಪಾರ್ಟಿಯಲ್ಲಿ ತೊಡಗಿದ್ದ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿ ಪಬ್‌ನಿಂದ ಹೊರಗೆ ಕಳುಹಿಸಿದ್ದಾರೆ.
ಮಂಗಳೂರಿನ ಬಲ್ಮಠದಲ್ಲಿರುವ ರಿ-ಸೈಕಲ್ ದಿ ಲಾಂಜ್ ಪಬ್‌ನಲ್ಲಿ ಈ ಘಟನೆ ನಡೆದಿದೆ.
ಮಂಗಳೂರಿನ ಪ್ರತಿಷ್ಠಿತ ಖಾಸಗಿ ಕಾಲೇಜು ವಿದ್ಯಾರ್ಥಿಗಳಿಂದ ಪಾರ್ಟಿ ನಡೆಯುತ್ತಿತ್ತು. ಕುಡಿದು ಯುವಕ-ಯುವತಿಯರು ಮೋಜು ಮಸ್ತಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ಬಜರಂಗ ದಳ ಕಾರ್ಯಕರ್ತರು ತಡೆಯೊಡ್ಡಿದ್ದಾರೆ. ಕಾಲೇಜು ಫೇರ್‌ವೆಲ್ ನೆಪದಲ್ಲಿ ಪಬ್‌ನಲ್ಲಿ ಪಾರ್ಟಿ ನಡೆಯುತ್ತಿತ್ತು.
ಪಬ್ ಒಳ ಹೊಕ್ಕು ಪಾರ್ಟಿ ನಿಲ್ಲಿಸಿದ ಬಜರಂಗ ದಳದ ಕಾರ್ಯಕರ್ತರು, ಬೈದು ವಿದ್ಯಾರ್ಥಿಗಳನ್ನ ಹೊರ ಕಳುಹಿಸಿದ್ದಾರೆ.ನಂತರ ಬಂದ ಪೊಲೀಸರು ಬಜರಂಗ ದಳದ ಕಾರ್ಯಕರ್ತರನ್ನು ಚದುರಿಸಿದ್ದಾರೆ. ಪಾರ್ಟಿ ಅರ್ಧದಲ್ಲೇ ನಿಲ್ಲಿಸಿ ಕಾಲೇಜು ವಿದ್ಯಾರ್ಥಿಗಳು ಕಾಲ್ಕಿತ್ತಿದ್ದಾರೆ. ತುಂಡುಡುಗೆ ತೊಟ್ಟು ಕುಡಿದು ವಿದ್ಯಾರ್ಥಿಗಳು ಮೋಜು ಮಸ್ತಿ ಮಾಟಡುತ್ತಿದ್ದರು ಎಂದು ಬಜರಂಗ ದಳದ ಕಾರ್ಯಕರ್ತರು ಹೇಳಿಕೊಂಡಿದ್ದಾರೆ. ದಾಳಿಯಲ್ಲಿ 30-40 ಬಜರಂಗದಳದ ಕಾರ್ಯಕರ್ತರು ಒಳಗೊಂಡಿದ್ದರು.
ಕೆಲ ವರ್ಷಗಳ ಹಿಂದೆ ಇದೇ ರೀತಿ ಕಾಲೇಜು ವಿದ್ಯಾರ್ಥಿಗಳು, ಸೆಲೆಬ್ರಿಟಿಗಳು ಒಟ್ಟು ಸೇರಿ ಮೋಜು ಮಾಡುತ್ತಿದ್ದ ಮಂಗಳೂರಿನ ಪಬ್‌ಗೆ ಬಜರಂಗ ದಳದವರು ದಾಳಿ ಮಾಡಿದ್ದು ರಾಷ್ಟ್ರಮಟ್ಟದಲ್ಲಿ ತೀವ್ರ ವಿವಾದಕ್ಕೆಡೆ ಮಾಡಿಕೊಟ್ಟಿತ್ತು.
ಪಬ್‌ನಲ್ಲಿ ನಡೆಯುತ್ತಿದ್ದ ವಿದ್ಯಾರ್ಥಿಗಳ ಪಾರ್ಟಿಗೆ ಬಜರಂಗ ದಳ ತಡೆ



















