Saturday, October 1, 2022
spot_img
Homeಸ್ಥಳೀಯ ಸುದ್ದಿಕುಕ್ಕುಂದೂರು ಕೆಸರು ಗದ್ದೆಯಲ್ಲಿ ಮಕ್ಕಳ ಕಲರವ

ಕುಕ್ಕುಂದೂರು ಕೆಸರು ಗದ್ದೆಯಲ್ಲಿ ಮಕ್ಕಳ ಕಲರವ

ಕಾರ್ಕಳ : ಭಾರತ ಕೃಷಿ ಪ್ರಧಾನ ದೇಶ. ಯುವ ಮನಸ್ಸುಗಳಲ್ಲಿ ಕೃಷಿ ಕುರಿತು ಆಸಕ್ತಿ ಮೂಡಿಸಲು, ಕೃಷಿಯ ಖುಷಿ ಅನುಭವಿಸಲು ಕೆಸರ್‌ಡೊಂಜಿ ದಿನ ಕಾರ್ಯಕ್ರಮ ಪೂರಕವೆಂದು ಪ್ರಗತಿ ಪರ ಕೃಷಿಕ, ಪ್ರಸಿದ್ಧ ಕಂಬಳ ತೀರ್ಪುಗಾರ ರವೀಂದ್ರ ಕುಮಾರ್‌ ಹೇಳಿದರು.

ಅವರು ಮಂಗಳವಾರ ಕುಕ್ಕುಂದೂರು ಕೇರ್ತಾಡಿಗುತ್ತು ವೃಷಭರಾಜ್‌ ಕಡಂಬ ಅವರ ಗದ್ದೆಯಲ್ಲಿ ಜೇಸಿಐ ಕಾರ್ಕಳ ವತಿಯಿಂದ ನಡೆದ ಕೆಸರ್‌ಡ್‌ ಒಂಜಿ ದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ತುಳುನಾಡ ಅಪ್ಪಟ ಗ್ರಾಮೀಣ ಸೊಗಡಿನ, ಸಂಸ್ಕೃತಿಯ ಪ್ರತೀಕ ಕೆಸರು ಗದ್ದೆ ಕ್ರೀಡಾಕೂಟ. ಜೇಸಿಐ ಕಾರ್ಕಳ ಇಂತಹ ಕಾರ್ಯಕ್ರಮ ಆಯೋಜನೆ ಮಾಡುವ ಮೂಲಕ ಮಕ್ಕಳು ಗದ್ದೆಯಲ್ಲಿ ಸಂಭ್ರಮ ಪಡುವಂತೆ ಮಾಡುವುದರ ಜೊತೆಗೆ ಕೃಷಿ ಮಹತ್ವ, ಅರಿವು ಮೂಡಿಸುವ ಕಾರ್ಯ ಮಾಡಿದೆ ಎಂದು ರವೀಂದ್ರ ಕುಮಾರ್‌ ಅಭಿಪ್ರಾಯಪಟ್ಟರು.

ಕೇರ್ತಾಡಿಗುತ್ತು ಅಜಿತ್‌ ಕಡಂಬ, ಜೆಸಿಐ ಶಾಲಾ ಅಧ್ಯಕ್ಷ ಚಿತ್ತರಂಜನ್‌ ಶೆಟ್ಟಿ, ಉಪಾಧ್ಯಕ್ಷ ಪದ್ಮಪ್ರಸಾದ್‌ ಜೈನ್‌, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ವಿಖ್ಯಾತ್‌ ಶೆಟ್ಟಿ, ಪತ್ರಕರ್ತ ರಾಮಚಂದ್ರ ಬರೆಪ್ಪಾಡಿ, ಉದ್ಯಮಿಗಳಾದ ಯುವರಾಜ ಶೆಟ್ಟಿ, ಭರತ್‌ ಶೆಟ್ಟಿ, ಜೆಸಿಐ ಉಪಾಧ್ಯಕ್ಷ ಸೂರಜ್ ಜೈನ್, ವೃಷಭರಾಜ್‌ ಕಡಂಬ ಹಾಗೂ ಇಂದಿರಾ ದಂಪತಿ, ಶಾಲಾ ಮುಖ್ಯಶಿಕ್ಷಕಿ ಸುರೇಖಾ ರಾಜ್‌ ಉಪಸ್ಥಿತರಿದ್ದರು. ಪ್ರಸಾದ್‌ ಐಸಿರ ಕಾರ್ಯಕ್ರಮ ನಿರ್ವಹಿಸಿದರು.

ಗದ್ದೆಯಲ್ಲಿ ಮಕ್ಕಳ ಕಲರವ
ಮಕ್ಕಳಿಗಾಗಿ ಕೆಸರು ಗದ್ದೆ ಓಟ, ಹಗ್ಗಜಗ್ಗಾಟ, ಸೊಪ್ಪಾಟ ಸೇರಿದಂತೆ ವಿವಿಧ ಸಾಂಪ್ರದಾಯಿಕ ಸ್ಪರ್ಧೆ ನಡೆಯಿತು. ಅತ್ಯಂತ ಉತ್ಸಾಹದಿಂದ ಆಟೋಟ ಸ್ಪರ್ಧೆಯಲ್ಲಿ ಪಾಲ್ಗೊಂಡ ಮಕ್ಕಳು ಸಂಭ್ರಮಪಟ್ಟರು. ಅವರೊಂದಿಗೆ ಹೆತ್ತವರು, ಜೇಸಿಐ ಸದಸ್ಯರೂ ಗದ್ದೆಗಿಳಿದು ಮಕ್ಕಳೊಂದಿಗೆ ಆಟೋಟ ಸ್ಪರ್ಧೆಯಲ್ಲಿ ಭಾಗವಹಿಸಿ, ಸಾಥ್ ನೀಡಿದರು‌. ವನಜಾ ನಲ್ಲೂರು ತುಳು ಪಾಡ್ದನ ಹಾಡಿದರು. ಜೇಸಿಐ ಶಾಲಾ ಶಿಕ್ಷಕಿ ವಂದನಾ ರೈ, ಶಿಲ್ಪಾ ಆಟೋಟ ಸ್ಪರ್ಧೆ ನಿರ್ವಹಿಸಿದರು.

ಕೆಸರುಗದ್ದೆ ಹೈಲೈಟ್ಸ್‌ ವಿಡಿಯೋಗಾಗಿ ಕ್ಲಿಕ್‌ ಮಾಡಿ

LEAVE A REPLY

Please enter your comment!
Please enter your name here

Most Popular

error: Content is protected !!