Friday, August 19, 2022
spot_img
Homeರಾಜ್ಯಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್‌ ಶೆಟ್ಟಿ ಸೇರಿದಂತೆ 46 ವಿವಿಧ ನಿಗಮ, ಮಂಡಳಿಗಳ ಅ‍ಧ್ಯಕ್ಷರ...

ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ್‌ ಶೆಟ್ಟಿ ಸೇರಿದಂತೆ 46 ವಿವಿಧ ನಿಗಮ, ಮಂಡಳಿಗಳ ಅ‍ಧ್ಯಕ್ಷರ ನಾಮನಿರ್ದೇಶನ ರದ್ದು

ಬೆಂಗಳೂರು : 47 ನಿಗಮ ಮಂಡಳಿಯ ಅಧ್ಯಕ್ಷರು, ಉಪಾಧ್ಯಕ್ಷರ ನೇಮಕಾತಿ ರದ್ದು ಮಾಡಿ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಆದೇಶ ಹೊರಡಿಸಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಆದೇಶದ ಹಿನ್ನೆಲೆಯಲ್ಲಿ ಸಿಎಸ್ ಕಚೇರಿಯಿಂದ ಆಯಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಮತ್ತು ಕಾರ್ಯದರ್ಶಿಗಳಿಗೆ, ಸರ್ಕಾರದ ಮುಖ್ಯ ಕಾರ್ಯದರ್ಶಿ ಕಚೇರಿಯಿಂದ ಸೂಚನೆ ನೀಡಲಾಗಿದೆ. ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿದ್ದ ಕಾರ್ಕಳದ ಮಣಿರಾಜ್‌ ಶೆಟ್ಟಿ ಅವರ ನೇಮಕಾತಿಯನ್ನು ರಾಜ್ಯ ಸರಕಾರ ಪಾಪಸ್‌ ಪಡೆದಿದೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವಧಿಯಲ್ಲಿ ನೇಮಕಗೊಂಡಿದ್ದ ವಿವಿಧ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ನೇಮಕಾತಿಯನ್ನು ಒಂದೂವರೆ ವರ್ಷದ ಅಧಿಕಾರಾವಧಿ ಪೂರ್ಣಗೊಳಿಸಿದ ಮಾನದಂಡದಡಿಯಲ್ಲಿ ರದ್ದು ಮಾಡಲಾಗಿದೆ. ಸಚಿವ ಆರ್. ಅಶೋಕ್, ಎಂಎಲ್ಸಿ ಲಕ್ಷ್ಮಣ ಸವದಿ ಮತ್ತು ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ ಇದ್ದ ತ್ರಿಸದಸ್ಯ ಸಮಿತಿ ರದ್ದು ಪಟ್ಟಿ ತಯಾರಿಸಿ ಮುಖ್ಯಮಂತ್ರಿ ಅವರಿಗೆ ಹಸ್ತಾಂತರಿಸಿದ್ದರು. ಜು.11ರಂದು ಮುಖ್ಯಮಂತ್ರಿಗಳು ಸಮಿತಿ ಸದಸ್ಯರ ಜೊತೆ ಚರ್ಚೆ ನಡೆಸಿ ಅಂತಿಮ ಪಟ್ಟಿ ಸಿದ್ದಪಡಿಸಿದ್ದರು. ನೇಮಕಾತಿ ರದ್ದುಪಡಿಸಲ್ಪಟ್ಟ ನಿಗಮ ಮಂಡಳಿ ಮತ್ತು ಪ್ರಾಧಿಕಾರಗಳಿಗೆ ಇನ್ನೂ ಎರಡು-ಮೂರು ದಿನಗಳಲ್ಲಿ ಹೊಸ ಅಧ್ಯಕ್ಷರು ಮತ್ತು ಉಪಾಧ್ಯಕ್ಷರನ್ನು ನೇಮಕಾತಿ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ನಿಗಮ ಮಂಡಳಿ ಮತ್ತು ಪ್ರಾಧಿಕಾರಗಳ 46 ಅಧ್ಯಕ್ಷರು ಮತ್ತು 6 ಉಪಾಧ್ಯಕ್ಷರ ನೇಮಕಾತಿ ವಾಪಸ್ ಪಡೆದ ರಾಜ್ಯ ಸರ್ಕಾರ
ಎಲ್.ಆರ್. ಮಹದೇವಸ್ವಾಮಿ- ಮೃಗಾಲಯ ಪ್ರಾಧಿಕಾರ ಮೈಸೂರು
ರವಿ ಕುಶಾಲಪ್ಪ- ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ
ಮಣಿರಾಜ ಶೆಟ್ಟಿ- ಗೇರು ಅಭಿವೃದ್ಧಿ ನಿಗಮ ಮಂಡಳಿ
ಅನಂತ ಹೆಗಡೆ ಆಶೀಸರ- ಜೀವ ವೈವಿಧ್ಯ ನಿಗಮ ಮಂಡಳಿ
ಮುಕ್ತಾರ್ ಹುಸೇನ್ ಫಕ್ರುದ್ದೀನ್- ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ಮಂಡಳಿ
ತಮ್ಮೇಶ್ ಗೌಡ – ಕರ್ನಾಟಕ ವಿದ್ಯುತ್ ಕಾರ್ಖಾನೆ
ಸಂತೋಷ್ ರೈ ಬೋಳಿಯಾರ್- ಮೈಸೂರು ಎಲೆಕ್ನಿಕಲ್ ಇಂಡಸೀಸ್
ಡಾ. ನಂದೀಶ್ ಹಂಚೆ- ಕನ್ನಡ ಪುಸ್ತಕ ಪ್ರಾಧಿಕಾರ
ಸುನೀಲ್ ಪುರಾಣಿಕ್-ಚಲನಚಿತ್ರ ಅಕಾಡೆಮಿ
ಆನಂದ ಉಪ್ಪಳ್ಳಿ- ಸಾಮಯವ ಕೃಷಿ ಉತ್ಪನ್ನ ಮಟ್ಟದ ಅಧಿಕಾರ ಯುಕ್ತ ಸಮಿತಿ
ಲಿಂಗರೆಡ್ಡಿ ಗೌಡ- ತೊಗರಿ ಅಭಿವೃದ್ಧಿ ಮಂಡಳಿ
ಹನುಮನಗೌಡ ಬೆಳಗುರ್ಕಿ- ಕೃಷಿ ಬೆಲೆ ಆಯೋಗ
ಎನ್. ಶಿವಲಿಂಗಯ್ಯ- ಕಾಡಾ,
ಮೈಸೂರು ಶರಣಪ್ಪ ತಳವಾರ- ಕಾಡಾ,
ಭೀಮರಾಯನಗುಡಿ ತಿಪ್ಪೇರುದ್ರಸ್ವಾಮಿ ಬಿ.ಎಚ್.ಎಂ- ಕಾಡಾ, ತುಂಗಭದ್ರಾ ಯೋಜನೆ
ಕಾಂತಿಲಾಲ್ ಕೇವಲಚಂದ್ರ ಬನ್ಸಾಲಿ- ದ್ರಾಕ್ಷಿ ರಸ ಮಂಡಳಿ
ಕೆ.ವಿ. ನಾಗರಾಜ- ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ
ಸವಿತ ವಿಶ್ವನಾಥ್ ಅಮರ ಶೆಟ್ಟಿ- ರೇಷ್ಮೆ ಮಾರಾಟ ಮಂಡಳಿ
ಎಸ್.ಆರ್. ಗೌಡ- ರೇಷ್ಮೆ ಉದ್ಯಮಗಳ ನಿಗಮ
ಅಶೋಕ್ ಎಸ್. ಅಲ್ಲಾಪುರ- ಲಿಂಬೆ ಅಭಿವೃದ್ಧಿ ಮಂಡಳಿ
ಎಂ. ಜಯದೇವ- ಬೆಂಗಳೂರು- ಮೈಸೂರು ಮೂಲಸೌಕರ್ಯ ಕಾರಿಡಾರ್ ಪ್ರದೇಶ ಯೋಜನಾ ಪ್ರಾಧಿಕಾರ
ಶರಣು ತಳ್ಳಿಕೇರಿ- ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ
ನಿತೀನ್ ಕುಮಾರ್- ಮೀನುಗಾರಿಕೆ ಅಭಿವೃದ್ಧಿ ನಿಗಮ
ಅಪ್ಪಣ್ಣ- ಜಂಗಲ್ ಲಾಡ್ಸ್ ಮತ್ತು ರೆಸಾರ್ಟ್ ಲಿಮಿಟೆಡ್
ಕೆ. ಹೇಮಂತ್ ಕುಮಾರ್ ಗೌಡ-ವಸ್ತು ಪ್ರದರ್ಶನ ಪ್ರಾಧಿಕಾರ ಮೈಸೂರು
ಶಶಿಕಲಾ ಟೆಂಗಳಿ- ಮಹಿಳಾ ಅಭಿವೃದ್ಧಿ ಹಾಗೂ ವಿಕಲಚೇತನರ ಸಬಲೀಕರಣ ನಿಗಮ
ಅಂತೋಣಿ ಸಬಾಸ್ಟೀನ್- ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ
ಪ್ರಮೀಳಾ ನಾಯ್ಡು- ಮಹಿಳಾ ಆಯೋಗ
ಚಿಕ್ಕಮ್ಮ ಬಸವರಾಜ- ಬಾಲ ಭವನ ಸೊಸೈಟಿ
ಹರಿಕೃಷ್ಣ ಬಂಟ್ವಾಳ- ಕಿಯೋನಿಕ್ಸ್
ಜೀವನ ಮೂರ್ತಿ ಎಸ್.- ಬಯಲುಸೀಮೆ ಪ್ರದೇಶಾಭಿವೃದ್ಧಿ ಮಂಡಳಿ
ಸಿ. ಮುನಿ ಕೃಷ್ಣ- ಮಾರುಕಟ್ಟೆ ಕನ್ಸಲ್ವೆಂಟ್ಸ್ ಮತ್ತು ಏಜೆನ್ಸಿಸ್ ಲಿಮಿಟೆಡ್
ಬೇಳೂರು ರಾಘವೇಂದ್ರ ಶೆಟ್ಟಿ-ಕರಕುಶಲ ಅಭಿವೃದ್ಧಿ ನಿಗಮ
ಕೃಷ್ಣಪ್ಪ ಗೌಡ ಎನ್.ಆರ್. ಖಾದಿ ಮತ್ತು ಗ್ರಾಮೋದ್ಯೋಗಮಂಡಳಿ
ಎಸ್. ಲಿಂಗಮೂರ್ತಿ- ಮೈಸೂರು ಸ್ಟೇಟ್ ಮಿನರಲ್ ಕಾರ್ಪೊರೇಷನ್
ಬಿ.ಕೆ. ಮಂಜುನಾಥ್- ತೆಂಗಿನ ನಾರಿನ ಅಭಿವೃದ್ಧಿ ನಿಗಮ
ಶಿವಲಿಂಗೇಗೌಡ- ಮೈಸೂರು ಸಕ್ಕರೆ ಕಾರ್ಖಾನೆ
ಹೆಚ್. ಹನುಮಂತಪ್ಪ- ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ
ಎಂ. ರಾಮಚಂದ್ರಪ್ಪ- ಕೇಂದ್ರ ಪರಿಹಾರ ಸಮಿತಿ

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!