ಬೆಂಗಳೂರು: ಅಂತಾರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಬದಲಾಯಿಸಿ ಪಾಕಿಸ್ಥಾನದ ಪರವಾಗಿ ಬೇಹುಗಾರಿಕೆ ನಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಸೇನಾಪಡೆ- ಸಿಸಿಬಿ ಬೆಂಗಳೂರಿನಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಬಂಧಿಸಿದೆ.
ಬಂಧಿತನನ್ನು ಶರ್ಫುದ್ದೀನ್ (41) ಎಂದು ಗುರುರ್ತಸಲಾಗಿದೆ.ಸೋಮವಾರ ಬೆಳಿಕ್ಕೆ ಹೆಸರಘಟ್ಟದಲ್ಲಿ ಆತ ಸೆರೆಯಾಗಿದ್ದಾನೆ. ಆರೋಪಿಯಿಂದ 32 ಸಿಮ್ ಕಾರ್ಡ್‌ಗಳನ್ನು ಮತ್ತು AVUGಳನ್ನು ಬಳಸುವ 58 ಸಿಮ್ ಬಾಕ್ಸ್ ಗಳನ್ನು ವಶಪಡಿಸಿಕೊಂಡಿದ್ದಾರೆ.
ಕೇರಳ ಮೂಲದ ಈತ ಅಂತರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಮಾರ್ಪಾಡು ಮಾಡುತ್ತಿದ್ದ. ಈತನನ್ನು ಬಳಸಿಕೊಂಡು ಪಾಕಿಸ್ಥಾನದ ಐಎಸ್ಐ ಭಾರತದಲ್ಲಿ ಬೇಹುಗಾರಿಕೆ ನಡೆಸುತ್ತಿದೆ ಎಂಬ ಮಾಹಿತಿ ಸೇನೆಗೆ ಸಿಕ್ಕಿತ್ತು.
ಆರೋಪಿಯು ಅನಿಯಮಿತ ಕರೆ ಸೌಲಭ್ಯವಿರುವ (ಅನ್‌ಲಿಮಿಟೆಡ್) ಸಿಮ್ ಕಾರ್ಡ್‌ಗಳನ್ನು ಎಫ್‌ಟಿಸಿ ಬಾಕ್ಸ್, ಮೋಡೆಮ್ ಹಾಗೂ ರೂಟರ್‌ಗೆ ಜೋಡಿಸಿದ್ದ. ಇದೇ ಉಪಕರಣದ ಮೂಲಕ ಐಎಸ್‌ಡಿ ಕರೆಗಳನ್ನು ಎಸ್‌ಟಿಡಿ ಕರೆಗಳಾಗಿ ಪರಿವರ್ತಿಸುತ್ತಿದ್ದ. ಇದರಿಂದ ವಿದೇಶಿ ಕರೆಗಳಿಗೂ ಎಸ್‌ಟಿಡಿ ದರವೇ ಅನ್ವಯವಾಗುತ್ತಿತ್ತು.
‘ಪಾಕಿಸ್ತಾನದಿಂದ ಬರುತ್ತಿದ್ದ ಕರೆಗಳನ್ನು ಆರೋಪಿ ಮಾರ್ಪಾಡು ಮಾಡುತ್ತಿದ್ದ. ಐಎಸ್‌ಐ ಪ್ರತಿನಿಧಿಗಳು, ದೇಶದ ಕೆಲವರ ಜೊತೆ ಮಾತನಾಡುತ್ತಿದ್ದರು. ಭಾರತೀಯ ಸೇನೆ ಹಾಗೂ ಇತರೆ ಮಾಹಿತಿಗಳನ್ನು ತಿಳಿದುಕೊಳ್ಳುತ್ತಿದ್ದರೆಂಬ ಅನುಮಾನವಿದೆ. ಭಾರತೀಯ ಸೇನೆಯ ಗುಪ್ರಚರ ವಿಭಾಗ ಆರೋಪಿಯ ಕುರಿತು ಬೆಂಗಳೂರು ಪೊಲೀಸರಿಗೆ ಮಾಹಿತಿ ನೀಡಿತ್ತು. ಇದರಂತೆ ಸೇನೆ ಅಧಿಕಾರಿಗಳು ಹಾಗೂ ಸಿಸಿಬಿ ಪೊಲೀಸರು, ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಪಾಕಿಸ್ಥಾನ ಪರ ಬೇಹುಗಾರಿಕೆ ಮಾಡುತ್ತಿದ್ದ ವ್ಯಕ್ತಿ ಬಂಧನ




















