ಬೆಳ್ಮಣ್ : ಶ್ರೀ ಲಕ್ಷ್ಮೀ ಜನಾರ್ಧನ ಪಿಯು ಕಾಲೇಜಿನ ಒಟ್ಟು 31 ವಿದ್ಯಾರ್ಥಿಗಳು ದ್ವಿತೀಯ ಪಿಯು ಪರೀಕ್ಷೆ ಬರೆದಿದ್ದು, 14 ವಿದ್ಯಾರ್ಥಿಗಳು ಉನ್ನತ ಶ್ರೇಣೀಯಲ್ಲಿ ಹಾಗೂ 14 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತೀರ್ಣರಾಗಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಜಸ್ಟಿನ್ ಆಡಮ್ ಆರೋಜ 96.83% ಗಳಿಸಿದ್ದು ಕಾಲೇಜಿಗೆ ಪ್ರಥಮ, ಶರೀನಾ ಡಿಸೋಜಾ 95% ದ್ವಿತೀಯ ಮತ್ತು ಅಂಬಿಕಾ ಜಯಶಾಂತಿ 91.67% ತೃತೀಯ ಸ್ಥಾನ ಗಳಿಸಿರುತ್ತಾರೆ. ವಾಣಿಜ್ಯ ವಿಭಾಗದಲ್ಲಿ ನೇಹಾ ಶೆಟ್ಟಿ 95.3% ಪ್ರಥಮ, ಪ್ರಿನ್ಸಿ ಪೆರೆರ 95.3%, ರಕ್ಷಿತಾ 94.3% ದ್ವಿತೀಯ ಮತ್ತು ತೃತೀಯ ಸ್ಥಾನಿಯಾಗಿ ದಿಶಾ ಯೂ. ಶೆಟ್ಟಿ 92.8% ಅಂಕಗಳಿಸಿರುತ್ತಾರೆ.























