ನಿಮ್ಮ ಆಯುಷ್ಯ ಎರಡು ವರ್ಷ ಹೆಚ್ಚಳ!

ಹೊಸದಿಲ್ಲಿ: ಭಾರತೀಯರ ಸರಾಸರಿ ಆಯುಷ್ಯದಲ್ಲಿ 2 ವರ್ಷ ಹೆಚ್ಚಳವಾಗಿದೆ ಎಂದೆನ್ನುತ್ತಿದೆ ಒಂದು ಅಧ್ಯಯನ. 2015ರಿಂದ 2019ರ ನಡುವೆ ಭಾರತೀಯರ ಜೀವಿತಾವಧಿಗೆ 2 ವರ್ಷ ಹೆಚ್ಚುವರಿಯಾಗಿ ಸೇರ್ಪಡೆಯಾಗಿದೆ. ಪ್ರಸ್ತುತ ಜೀವಿತಾವಧಿ 69.7 ವರ್ಷಕ್ಕೇರಿದೆ. ಅಂದರೆ ಓರ್ವ ಭಾರತೀಯ ಸರಾಸರಿಯಾಗಿ 69 ವರ್ಷ 7 ತಿಂಗಳು ಬದುಕುತ್ತಾನೆ ಎಂದು ಅರ್ಥ! ಆದರೆ ಜಾಗತಿಕ ಜೀವಿತಾವಧಿಯ ಸರಾಸರಿಯಾಗಿರುವ 72.6 ವರ್ಷಕ್ಕಿಂತ ಭಾರತೀಯರ ಜೀವಿತಾವಧಿ ಇನ್ನೂ ಬಹಳ ಕಡಿಮೆಯಿದೆ.
ಅಬ್ರಿಡ್ಜ್‌ ಲೈಫ್‌ ಟೇಬಲ್ಸ್‌ 2015-19 ಎಂಬ ವರದಿ ಭಾರತೀಯರ ಆಯುಷ್ಯ ಹೆಚ್ಚಳವಾಗಿರುವುದನ್ನು ಬಹಿರಂಗಪಡಿಸಿದೆ. ಆದರೆ ಭಾರತೀಯರ ಜೀವಿತಾವಧಿ ಎರಡು ವರ್ಷ ಹೆಚ್ಚಳವಾಗಲು ಬರೋಬ್ಬರಿ 10 ವರ್ಷ ಹಿಡಿದಿದೆ. ಭಾರತದ ಗ್ರಾಮೀಣ ಭಾಗಗಳಲ್ಲಿ ಸರಾಸರಿಯಾಗಿ ಜನ 68.3 ವರ್ಷ ಬದುಕಿದರೆ ನಗರ ಭಾಗಗಳಲ್ಲಿ 73 ವರ್ಷ ಬದುಕುತ್ತಾರೆ. ರಾಷ್ಟ್ರೀಯ ಮಟ್ಟದಲ್ಲಿ ಪುರುಷು ಜೀವಿತಾವಧಿ 68.4 ವರ್ಷಚರಣೆ ಮತ್ತು ಮಹಿಳೆಯರದ್ದು 71.1 ವರ್ಷ ಎಂದು ಈ ವರದಿ ತಿಳಿಸಿದೆ. ವೈದ್ಯಕೀಯ ಸೌಲಭ್ಯಗಳಲ್ಲಿ ಆಗಿರುವ ಕ್ರಾಂತಿಕಾರಿ ಬದಲಾವಣೆಗಳು, ಮೂಲಸೌಕರ್ಯದಲ್ಲಾಗಿರುವ ಅಭಿವೃದ್ಧಿ, ತಂತ್ರಜ್ಞಾನ ಮತ್ತು ಜೀವನಶೈಲಿಯಲ್ಲಾಗಿರುವ ಬದಲಾವಣೆ ಭಾರತೀಯರ ಆಯುಷ್ಯ ಹೆಚ್ಚಳವಾಗುವಲ್ಲಿ ಪ್ರಮುಖ ಪಾತ್ರ ವಹಿಸಿದೆ.























error: Content is protected !!
Scroll to Top