ಭೂಮಿಯಡಿಯಲ್ಲಿ ಸಿಕ್ಕಿದ ನಿಧಿಯೆಂದು ನಂಬಿ 15 ಲಕ್ಷ ಕಳೆದುಕೊಂಡ ಉದ್ಯಮಿ

ಬೆಂಗಳೂರು: ಮೋಸ ಹೋಗುವವರು ಇರುವ ತನಕ ಮೋಸ ಮಾಡುವವರು ಇರುತ್ತಾರೆ ಎಂಬ ಲೋಕರೂಢಿಯ ಮಾತನ್ನು ಸಾಬೀತುಪಡಿಸುವ ಪ್ರಕರಣಗಳು ಆಗಾಗ ಸಂಭವಿಸುತ್ತಿರುತ್ತವೆ. ಇದೂ ಅದೇ ಮಾದರಿಯ ಒಂದು ಪ್ರಕರಣ. ವಂಚಕನ ಮಾತಿಗೆ ಮರುಳಾಗಿ ಚೆನ್ನೈನ ಪ್ರಸಿದ್ದ ಹೋಟೆಲ್‌ ಮಾಲೀಕರೊಬ್ಬರು ಬೆಂಗಳೂರಿನಲ್ಲಿ ಬರೋಬ್ಬರಿ 15 ಲ.ರೂ. ಕಳೆದುಕೊಂಡಿದ್ದಾರೆ.
ಚೆನ್ನೈನ ಪ್ರಸಿದ್ಧ ʼಸ್ವಾಮಿ ಚಿಕನ್‌ ಚೆಟ್ಟಿನಾಡ್‌ʼ ಹೋಟೆಲ್‌ಗೆ ತೆರಳಿದ ವಂಚಕ, ಅಲ್ಲಿ ಹೋಟೆಲ್‌ ಮಾಲೀಕ ಮುರುಗನಾಥಂ ಅವರನ್ನು ಭೇಟಿಯಾಗಿದ್ದ. ‘ಕೆಲಸದ ನಿಮಿತ್ತ ಚೆನ್ನೈಗೆ ಬಂದಿದ್ದೆ. ನಿಮ್ಮ ಹೋಟೆಲ್‌ ತಿಂಡಿ ಚೆನ್ನಾಗಿದೆ. ನನ್ನ ಹೆಸರು ಅರ್ಜುನ್‌’ ಎನ್ನುತ್ತ ಮಾತಿಗೆ ಎಳೆದಿದ್ದ ವಂಚಕ. ಇದಕ್ಕೆ ಸ್ಪಂದಿಸಿದ ಮುರುಘನಾಥಂ, ಉಭಯಕುಶೋಲಪರಿ ಆರಂಭಿಸಿದ್ದರು.ಮಾತಿನ ನಡುವೆ ಅರ್ಜುನ್‌, ನನ್ನ ಮನೆಯ ಸಂಪ್ ಅಗೆಯುವಾಗ 5 ಮಣಿಹಾರದ ನಿಧಿ ಸಿಕ್ಕಿದೆ. ಅವುಗಳನ್ನು ಮಾರಾಟ ಮಾಡಬೇಕು ಎಂದಿದ್ದೇನೆ. ಅದಕ್ಕೆ ಚೆನ್ನೈನಲ್ಲಿ ಗ್ರಾಹಕರು ಇರಬಹುದೇ ಎಂದು ಹುಡುಕಾಟ ನಡೆಸಿದ್ದೇನೆ ಎಂದಿದ್ದ.
ನಿಧಿ ಎಂದ ಕೂಡಲೆ ಮುರುಗನಾಥಂ ಕಿವಿ ಚುರುಕಾಗಿದೆ. ಅವನ ಮಾತನ್ನು ನಭಿ ಸರ್ನ್ನು ಪಡೆದುಕೊಂಡು
ಪರಿಶೀಲಿಸಲು ಕಳುಹಿಸಿದ್ದಾರೆ. ಅವುಗಳು ಅಸಲಿ ಎಂಬ ದೃಢೀಕರಣವನ್ನು ಚಿನ್ನಾಭರಣ ಕುಶಲಕರ್ಮಿಗಳು ನೀಡಿದ್ದರು. ಕೂಡಲೇ ಅರ್ಜುನ್‌ಗೆ ಕರೆ ಮಾಡಿದ ಮುರುಗನಾಥಂ, ಚೆನ್ನೈನ ರೇಸ್‌ ಕೋರ್ಸ್‌ ಬಳಿಗೆ ಮಣಿಸರ ತಂದು ಬಿಡಿ ಎಂದು ಹೇಳಿದ್ದಾರೆ.
ಅರ್ಜುನ್‌ ರೇಸ್‌ ಕೋರ್ಸ್‌ ಬಳಿ ಬಂದು, ಮತ್ತೆ ನಾಲ್ಕು ಮಣಿಗಳನ್ನು ತೋರಿಸಿದ. ಅವುಗಳು ಕೂಡ ಅಸಲಿ ಎಂಬುದು ದೃಢವಾಯಿತು. ಅರ್ಜುನ್‌ ಜತೆಗೆ ಮುರುಗನಾಥಂ ವ್ಯವಹಾರಕ್ಕೆ ಇಳಿದಾಗ ಬೆಂಗಳೂರಿಗೆ ಹೋಗಿ ಕರೆ ಮಾಡುತ್ತೇನೆ ಎಂದು ಹೇಳಿ ಹಿಂದಿರುಗಿದ್ದ.
ಮೂರು ದಿನಗಳ ಬಳಿಕ ಅರ್ಜುನ್ ಕರೆ ಮಾಡಿ, ಒಂದು ಕಿಲೋ ಮಣಿಗೆ 25 ಲಕ್ಷ ರೂಪಾಯಿ ಆಗುತ್ತೆ ಎಂದಿದ್ದ. ಮುರುಗನಾಥಂ, ಈಗ ಸ್ವಲ್ಪ ತೆಗೆದುಕೊಳ್ಳುವೆ. 15 ಲಕ್ಷ ರೂಪಾಯಿ ರೆಡಿ ಮಾಡಿದ್ದೇನೆ ಎಂದು ಹೇಳಿದ್ದರು. ಕೂಡಲೇ ಅರ್ಜುನ್‌, ಹಾಗಾದರೆ ಹಣ ತೆಗೆದುಕೊಂಡು ಬೆಂಗಳೂರಿಗೆ ಬನ್ನಿ. ಅಲ್ಲೇ ನಿಮಗೆ ಮಣಿಗಳನ್ನು ಕೊಡುವೆ ಎಂದಿದ್ದ.
ಬೆಂಗಳೂರಿಗೆ ಬಂದ ಮುರುಗನಾಥಂ ಹೋಟೆಲ್‌ ಒಂದರಲ್ಲಿ ಉಳಿದುಕೊಂಡು, ಬಳಿಕ ಅರ್ಜುನ್‌ಗೆ ಕರೆ ಮಾಡಿದ್ದರು. ಆಗ ಅರ್ಜುನ್‌ ಮತ್ತು ತಂಡ ಮುರುಗನಾಥಂ ಅವರನ್ನು ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಮೂರನೇ ದ್ವಾರದ ಬಳಿ ಬರಲು ತಿಳಿಸಿತ್ತು. ನಿಶ್ಚಿತ ಸಮಯಕ್ಕೆ ಮುರುಗನಾಥಂ ಅಲ್ಲಿಗೆ ತೆರಳಿದ್ದರು. ಅಲ್ಲಿ ಅರ್ಜುನ್‌, ಒಬ್ಬ ಮಹಿಳೆ ಮತ್ತು ಇನ್ನೊಬ್ಬರಿದ್ದರು. ಮುರುಗನಾಥಂ 15 ಲಕ್ಷ ರೂಪಾಯಿ ಕೊಟ್ಟರು. ಅರ್ಜುನ್‌ ಮಣಿಗಳ ಪೊಟ್ಟಣವನ್ನು ಮುರುಗನಾಥಂಗೆ ಹಸ್ತಾಂತರಿಸಿದ. ಎಲ್ಲರೂ ಅಲ್ಲಿಂದ ಹಿಂದಿರುಗಿದರು. ಹೋಟೆಲ್‌ ಸೇರಿದ ಮುರುಗನಾಥಂ ಮಣಿಗಳ ಪೊಟ್ಟಣ ಬಿಡಿಸಿ ನೋಡಿ ಬೆಚ್ಚಿ ಬಿದ್ದರು. ಅವೆಲ್ಲವೂ ನಕಲಿ ಮಣಿಗಳಾಗಿದ್ದವು. ಅರ್ಜುನ್‌ಗೆ ಕರೆ ಮಾಡಿದರೆ ಫೋನ್‌ ಸ್ವಿಚ್‌ ಆಫ್‌. ಮಾತಿಗೆ ಮರುಳಾಗಿ ಮೋಸ ಹೋದೆ ಎಂಬುದು ಮುರುಗನಾಥಂಗೆ ಮನವರಿಕೆ ಆಗಿತ್ತು.ಇದೀಗ ಉಪ್ಪಾರಪೇಟೆ ಪೊಲೀಸ್‌ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ.









































































































error: Content is protected !!
Scroll to Top