ಬೆಂಗಳೂರು : ಆರ್‌ಎಸ್‌ಎಸ್ ಸಂಸ್ಥಾಪಕ ಹೆಡ್ಗೇವಾರ್ ಕುರಿತು ವಿಪಕ್ಷ ನಾಯಕ ಸಿದ್ದರಾಮಯ್ಯನವರು ಮಾಡಿರುವ ಟ್ವೀಟ್ ಒಂದು ಇಂದು ಭಾರಿ ಟ್ರೋಲ್‌ಗಾಗುತ್ತಿದೆ. ಸ್ವತಹ ಸಿದ್ದರಾಮಯ್ಯನವರೇ ಈ ಟ್ವೀಟ್‌ನಿಂದ ಮುಜುಗರಕ್ಕೊಳಗಾಗಿದ್ದಾರೆ.
1942ರ ಕ್ವಿಟ್ ಇಂಡಿಯಾ ಚಳವಳಿ ಸಂದರ್ಭದಲ್ಲಿ ಆರ್.ಎಸ್.ಎಸ್.ನ ಹೆಡ್ಗೇವಾರ್ ಮತ್ತು ಗೊಲ್ವಾಲ್ಕರ್ ಬ್ರಿಟಿಷರ ಜತೆ ಸೇರಿ ಸಂಚು ರೂಪಿಸಿ ಚಳವಳಿಯನ್ನು ಹತ್ತಿಕ್ಕಲು ಯತ್ನಿಸಿದ್ದನ್ನು ಈ ದೇಶದ ಜನರು ಮರೆತಿಲ್ಲ ಎಂದು ಟ್ವೀಟ್ ಮಾಡಿದ್ದಾರೆ ಸಿದ್ದರಾಮಯ್ಯ.
ವಾಸ್ತವ ವಿಚಾರ ಏನೆಂದರೆ ಹೆಡ್ಗೇವಾರ್ 1940ರಲ್ಲಿ ನಾಗಪುರದಲ್ಲಿ ನಿಧನ ಹೊಂದಿದ್ದಾರೆ. ಇದು ತಿಳಿಯದೆ ಸಿದ್ದರಾಮಯ್ಯ ಟೀಕಿಸುವ ಭರದಲ್ಲಿ ಅವರ ಹೆಸರನ್ನು ಎಳೆದು ತಂದಿದ್ದಾರೆ. ಇದೀಗ ಈ ಟ್ವೀಟ್‌ಗೆ ವ್ಯಾಪಕ ಟೀಕೆ ವ್ಯಕ್ತವಾಗಿದ್ದು, ಟೀಕಿಸುವ ಚಪಲಕ್ಕಾಗಿ ಸಿದ್ದರಾಮಯ್ಯ ಆಗಾಗ ಆರ್‌ಎಸ್‌ಎಸ್ ನಾಯಕರನ್ನು ಎಳೆದು ತರುತ್ತಾರೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.
ಬಿಜೆಪಿ ಈ ಟ್ವೀಟ್‌ಗೆ ತಿರುಗೇಟು ನೀಡಿ 1940ರಲ್ಲಿ ತೀರಿಹೋದ ಹೆಡ್ಗೇವಾರ್ 1942ರಲ್ಲಿ ನಡೆದ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಸಂಚು ರೂಪಿಸುವುದು ಹೇಗೆ ಸಾಧ್ಯ? ಸಿದ್ದರಾಮಯ್ಯನವರ ಬುದ್ಧಿಗೆ ಮಂಕು ಕವಿದಿದೆ ಎಂದು ಲೇವಡಿ ಮಾಡಿದೆ.
ಸಿದ್ದರಾಮಯ್ಯ ಟ್ವೀಟ್ ಟ್ರೋಲ್!











