ಕಾರ್ಕಳ : ಗಾಂಧೀಜಿ ದೇಶವಾಸಿಗಳ ಮೇಲೆ ಅತ್ಯಂತ ಪ್ರಭಾವ ಬೀರಿದ್ದರು. ಜನತೆಯನ್ನು ಗಾಂಧಿಯಷ್ಟು ಆವರಿಸಿದ ಮತ್ತೊಬ್ಬ ನಾಯಕನಿರಲಾರರು. ಗಾಂಧಿ ಎಲ್ಲ ಕಾಲಮಾನಕ್ಕೂ ಸಲ್ಲುವವರು ಎಂದು ಎಂಜಿಎಂ ಕಾಲೇಜಿನ ಗಾಂಧಿ ಅಧ್ಯಯನ ಕೇಂದ್ರದ ಸಂಯೋಜಕ ವಿನೀತ್ ರಾವ್ ಬಣ್ಣಿಸಿದರು.
ಅವರು ಶ್ರೀ ಭುವನೇಂದ್ರ ಕಾಲೇಜಿನಲ್ಲಿ ಮಾನವಿಕ ಸಂಘದ ವತಿಯಿಂದ ನಡೆದ ಆಜಾದೀ ಕಾ ಅಮೃತ ಮಹೋತ್ಸವ ಅಂಗವಾಗಿ ನಡೆದ ‘ಗಾಂಧೀಯ ತತ್ವ, ಚಿಂತನೆಗಳು ಹಾಗೂ ಸರ್ವೋದಯದ ಪ್ರಸ್ತುತತೆ’ ವಿಷಯವಾಗಿ ನಡೆದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾಲೇಜಿನ ಪ್ರಾಂಶುಪಾಲ ಡಾ. ಮಂಜುನಾಥ್ ಎ. ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ದತ್ತಾತ್ರೇಯ ಮಾರ್ಪಳ್ಳಿ, ಮಾನವಿಕ ಸಂಘದ ಸಂಯೋಜಕ ಹಾಗೂ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶಿವಕುಮಾರ್, ವಿದ್ಯಾರ್ಥಿ ಕಾರ್ಯದರ್ಶಿ ದಯಾನಂದ ಉಪಸ್ಥಿತರಿದ್ದರು. ವಿದ್ಯಾರ್ಥಿ ಮಹೇಶ್ ಸ್ವಾಗತಿಸಿ, ದೀಪಕ್ ನಾಯಕ್ ವಂದಿಸಿದರು. ವಿದ್ಯಾರ್ಥಿನಿ ಶ್ವೇತಾ ಜೈನ್ ಕಾರ್ಯಕ್ರಮ ನಿರೂಪಿಸಿದರು.
ಗಾಂಧಿ ಬೀರಿದ ಪ್ರಭಾವ ಅಗಾಧ – ವಿನೀತ್ ರಾವ್
























