ಹೆಬ್ರಿ : ಕಾರಿನಲ್ಲಿ ವ್ಯಕ್ತಿ ಆತ್ಮಹತ್ಯೆ

ಹೆಬ್ರಿ : ಕೃಷಿಯಲ್ಲಿ ನಷ್ಟವುಂಟಾಗಿ ಬ್ಯಾಂಕ್‌ ಹಾಗೂ ಸೊಸೈಟಿಯಲ್ಲಿ ಮಾಡಿದ ಸಾಲ ಮರುಪಾವತಿಸಲಾಗದೇ ವ್ಯಕ್ತಿಯೋರ್ವರು ಕಾರ್ಕಳ ನಾಡ್ಪಾಲು ಗ್ರಾಮದ ಸೋಮೇಶ್ವರ ಘಾಟಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಶೃಂಗೇರಿ ತಾಲೂಕಿನ ಗಿಣಿಕಲ್ ನಿವಾಸಿ ಜಿ. ಎನ್. ಲೋಕಣ್ಣ (54) ಎಂಬವರೇ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಅಡಿಕೆ ತೋಟಕ್ಕೆ ರೋಗ ತಗುಲಿ ನಿರೀಕ್ಷಿತ ಫಸಲು ಬಾರದ ಹಿನ್ನೆಲೆಯಲ್ಲಿ ಸಾಲಭಾದೆ ತಾಳಲಾರದೇ ಫೆ. 10 ರಂದು ಸೋಮೇಶ್ವರ ಘಾಟಿಯ 2ನೇ ತಿರುವಿನಲ್ಲಿ ತಾನು ಚಲಾಯಿಸಿಕೊಂಡು ಬಂದಿದ್ದ ಓಮ್ನಿ ಕಾರನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ಕಾರಿನ ಹಿಂದುಗಡೆಯ ಸೀಟಿನಲ್ಲಿ ಕುಳಿತು ಲೋಕಣ್ಣ ಅವರು ವಿಷ ಪದಾರ್ಥ ಸೇವಿಸಿರುತ್ತಾರೆ. ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!
Scroll to Top