Wednesday, January 26, 2022
spot_img
Homeಸುದ್ದಿಆಶಯ ವಿವಿಧೊದ್ದೇಶ ಸೌಹಾರ್ದ ಸಹಕಾರಿ ಸಂಘದ ಕಾರ್ಕಳ ಶಾಖೆ ಶುಭಾರಂಭ

ಆಶಯ ವಿವಿಧೊದ್ದೇಶ ಸೌಹಾರ್ದ ಸಹಕಾರಿ ಸಂಘದ ಕಾರ್ಕಳ ಶಾಖೆ ಶುಭಾರಂಭ

ಕಾರ್ಕಳ : ಆರ್ಥಿಕ ಸಬಲೀಕರಣಕ್ಕೆ ಸಹಕಾರಿ ಕ್ಷೇತ್ರ ಅಪಾರ ಕೊಡುಗೆ ನೀಡಿದ್ದು, ಕೇಂದ್ರ ಸರ್ಕಾರ ಸಹಕಾರಿ ಕ್ಷೇತ್ರಕ್ಕಾಗಿ ಸಚಿವಾಲಯ ತೆರೆಯುವುದರ ಮೂಲಕ ಸಹಕಾರಿ ಬ್ಯಾಂಕುಗಳಿಗೆ ಉತ್ತೇಜನ ನೀಡಲು ಮುಂದಾಗಿದೆ ಎಂದು ಸಚಿವ ಸುನಿಲ್‌ ಕುಮಾರ್‌ ಹೇಳಿದರು.

ಅವರು ಜ. 14ರಂದು ಶ್ರೇಯಸ್‌ ಕಟ್ಟಡದಲ್ಲಿ ಆಶಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಸ್ಥೆಯ ಕಾರ್ಪೊರೇಟ್‌ ಕಚೇರಿ ಹಾಗೂ ಕಾರ್ಕಳ ಶಾಖಾ ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಆರ್ಥಿಕ ಪುನಶ್ಚೇತನವಾಗಬೇಕೆಂಬ ನಿಟ್ಟಿನಲ್ಲಿ ಮಳವಳ್ಳಿ ಶಿವರಾಯರು ಸಹಕಾರಿ ಚಳುವಳಿ ಪ್ರಾರಂಭಿಸಿದ್ದರು. ಕೋವಿಡ್‌ ಸವಾಲಿನ ಸನ್ನಿವೇಶದಲ್ಲಿ ಪ್ರಧಾನಿ ಮೋದಿಯವರು ಹೇಳಿದಂತೆ ಜೀವದ ಜೊತೆಗೆ ಜೀವನ ಪುನಶ್ಚೇತನಗೊಳಿಸಬೇಕಾಗಿದೆ. ಮಧ್ಯಮ ವರ್ಗದ ಜನತೆಯ ಆರ್ಥಿಕ ಚಟುವಟಿಕೆಗಾಗಿ, ಉತ್ಸಾಹಿ ಯುವಕರಿಗೆ ಉದ್ಯಮ ಪ್ರಾರಂಭಿಸಲು ಸಹಕಾರಿಯಾಗಿ ಕಾರ್ಕಳದಲ್ಲಿ ಆಶಯ ಸಂಸ್ಥೆ ಸ್ಥಾಪಿಸಲಾಗಿದೆ ಎಂದು ಆಶಯ ವಿವಿಧೋದ್ದೇಶ ಸಹಕಾರಿ ಸಂಘದ ಅ‍ಧ್ಯಕ್ಷ ಸುವೃತ್‌ ಕುಮಾರ್‌ ಹೇಳಿದರು.

ಮೂಡುಬಿದ್ರೆಯಲ್ಲಿ ಕಳೆದ ೭ ವರ್ಷಗಳಲ್ಲಿ ೨೦ ಕೋಟಿ ರೂ. ವ್ಯವಹಾರ ನಡೆಸಿದೆ. ಮುಂದಿನ ದಿನಗಳಲ್ಲಿ ಹತ್ತಾರು ಶಾಖೆಗಳನ್ನು ತೆರೆಯುವುದು ಸಂಘದ ಗುರಿ ಆಗಿದೆ ಎಂದವರು ಹೇಳಿದರು.

ಬ್ಯಾಂಕಿಂಗ್‌ ಕ್ಷೇತ್ರ ಅಗಾಧವಾಗಿ ಬೆಳೆದಿದೆ. ಸಹಕಾರಿ ಸಂಘದ ಸಿಬ್ಬಂದಿ ಗ್ರಾಹಕರಲ್ಲಿ ಉತ್ತಮವಾಗಿ ವ್ಯವಹರಿಸಿದ್ದೇ ಆದಲ್ಲಿ ಸಂಘ ಬಹಳ ಎತ್ತರಕ್ಕೆ ಬೆಳೆಯಬಲ್ಲದು. ಜನತೆಯ ಸೇವೆಯೊಂದಿಗೆ ಉದ್ಯೋಗಾವಕಾಶ ಕಲ್ಪಿಸುವುದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಡಾ. ಹರ್ಷೇಂದ್ರ ಕುಮಾರ್‌ ಅಭಿಪ್ರಾಯಪಟ್ಟರು.

ಸನ್ಮಾನ

ಶ್ರೀ ವೀರಶಾಸನ ಟ್ರಸ್ಟ್‌ ಮುಂಬೈ ಸದಸ್ಯೆ ಶಾಂತಲಾ ಅಜಿತ್‌ ನೆಲ್ಲಿಕಾರು ಅವರನ್ನು ಸಚಿವ ಸುನಿಲ್‌ ಕುಮಾರ್‌ ಸನ್ಮಾನಿಸಿದರು.

ಹಿರಿಯ ಉದ್ಯಮಿ ಬೋಳ ಪ್ರಭಾಕರ್‌ ಕಾಮತ್‌, ಹಿರಿಯ ನ್ಯಾಯವಾದಿ ಎಂ.ಕೆ. ವಿಜಯ ಕುಮಾರ್‌ ಸಂಸ್ಥೆಗೆ ಶುಭಹಾರೈಸಿದರು. ಸ್ನೇಹಾ ಮತ್ತು ಅವನಿ ಪ್ರಾರ್ಥಿಸಿ, ಆಶಯ ಸಹಕಾರಿ ಬ್ಯಾಂಕ್ ನ ಉಪಾಧ್ಯಕ್ಷ ರೋಬರ್ಟ್‌ ರೊನಾಲ್ಡ್ ಫೆರ್ನಾಂಡಿಸ್‌ ಸ್ವಾಗತಿಸಿದರು. ಶಿಕ್ಷಕ ಕೆ. ರಾಜೇಂದ್ರ ಭಟ್‌ ನಿರೂಪಿಸಿ, ಪ್ರಕಾಶ್‌ ರಾವ್ ವಂದಿಸಿದರು. ‌

ಮುನಿಗಳ ಪ್ರೇರಣೆಯಿಂದ ಶ್ರೀ ವೀರಶಾಸನ ಟ್ರಸ್ಟ್‌ ಮುಂಬೈ ವತಿಯಿಂದ ಆಶಯ ಸಂಘಕ್ಕೆ 10 ಆಕ್ಸಿಜನ್‌ ಕಾನ್ಸನ್ಟ್ರೇಟರ್ ಅನ್ನು ಕೊಡುಗೆಯಾಗಿ ನೀಡಲಾಯಿತು. ಆಕ್ಸಿಜನ್‌ ಅಗತ್ಯವುಳ್ಳವರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಸಂಘ ತಿಳಿಸಿದೆ.

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!