ಕಾರ್ಕಳ : ತಲೆನೋವಿನಿಂದ ಬಳಲುತ್ತಿದ್ದ ಯುವತಿ ಮೃತ್ಯು


ಕಾರ್ಕಳ : ತಲೆನೋವಿನಿಂದ ಬಳಲುತ್ತಿದ್ದ ನೀರೆ ಗ್ರಾಮದ ಬಾರೆಜಡ್ಡು ಮನೆ ಶರಣ್ಯ (18) ಸಾವಿಗೀಡಾಗಿದ್ದಾರೆ. ಬಾರೆಜಡ್ಡು ಮನೆ ಶಿವರಾಮ ಆಚಾರ್ಯರ ಮಗಳು ಶರಣ್ಯ 12 ದಿನಗಳ ಹಿಂದೆ ತಲೆನೋವು ಎಂದು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿ, ಚಿಕಿತ್ಸೆ ಪಡೆದಿದ್ದರು. ಜ.9ರಂದು ಮಧ್ಯಾಹ್ನ ಮತ್ತೆ ಅಸ್ವಸ್ತರಾಗಿದ್ದು, ಕಾರ್ಕಳ ಸಿಟಿ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಕಾರ್ಕಳ ಆಸ್ಪತ್ರೆಗೆ ಕರೆದುಕೊಂಡು ಬರಲಾಯಿತು. ಈ ವೇಳೆ ಶರಣ್ಯ ಕೊನೆಯುಸಿರೆಳೆದಿರುತ್ತಾರೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.









































































































error: Content is protected !!
Scroll to Top