ಯುಎಇಯಲ್ಲಿ ಇನ್ನು ವಾರದಲ್ಲಿ ನಾಲ್ಕೂವರೆ ದಿನ ಕೆಲಸ

ದುಬಾಯಿ : ಕೆಲಸದ ಒತ್ತಡ ಕಡಿಮೆ ಮಾಡಲು ಜನರಿಗೆ ಹೆಚ್ಚಿನ ಬಿಡುವು ನೀಡಬೇಕು ಎಂಬ ನೆಲೆಯಲ್ಲಿ ವಾರದಲ್ಲಿ ಸರಕಾರಿ ನೌಕರರು ನಾಲ್ಕೂವರೆ ದಿನ ಮಾತ್ರ ಕೆಲಸ ಮಾಡಬೇಕು ಎಂದು ಯುಎಇ ಸರಕಾರ ಆದೇಶ ಹೊರಡಿಸಿದೆ.

ಈ ಮೂಲಕ ವಿಶ್ವದಲ್ಲಿ ವಾರದಲ್ಲಿ ಅತಿ ಕಡಿಮೆ ಅವಧಿಯ ಕೆಲಸ ಇರುವ ದೇಶ ಯುಎಇ ಎನಿಸಿದೆ ನೂತನ ನಿಯಮವು 2022 ರ ಜನವರಿ 1 ರಿಂದಲೇ ಜಾರಿಯಾಗಲಿದೆ. ಯುಎಇಯಲ್ಲಿ ಇದುವರೆಗೆ ನೌಕರರಿಗೆ ವಾರದಲ್ಲಿ 5 ದಿನ ಕೆಲಸವಿದ್ದು ಈಗ ನಾಲ್ಕೂವರೆ ದಿನಕ್ಕೆ ಇಳಿಸಲಾಗಿದೆ.

ಸೋಮವಾರದಿಂದ ಶುಕ್ರವಾರದವರೆಗೆ ಬೆಳಗ್ಗೆ 7.30 ರಿಂದ ಮಧ್ಯಾಹ್ನ 3.30 ರವರೆಗೆ ಹಾಗೂ ಶುಕ್ರವಾರ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆವರೆಗೆ ಮಾತ್ರ ಕೆಲಸ ಮಾಡಬೇಕು ಎಂದು ಆದೇಶಿಸಲಾಗಿದೆ .

ಶನಿವಾರ ಹಾಗೂ ರವಿವಾರ ಸಂಪೂರ್ಣವಾಗಿ ರಜೆ ಇರಲಿದೆ, ಶುಕ್ರವಾರ ಮಧ್ಯಾಹ್ನ ಹನ್ನೆರಡು. ಗಂಟೆಗೆ ಕೆಲಸ ಮುಗಿಯುವುದರಿಂದ ಪ್ರಾರ್ಥನೆ ಸಲ್ಲಿಸಲು ಸಹ ಅನುಕೂಲವಾಗಲಿದೆ. ವಾರಾಂತ್ಯದಲ್ಲಿ ಜನರಿಗೆ ಹೆಚ್ಚಿನ ಬಿಡುವು ಸಿಗುವುದರಿಂದ ಕೆಲಸದಲ್ಲಿ ದಕ್ಷತೆ ಬರುವ ಜತೆಗೆ ಔದ್ಯೋಗಿಕ ಜೀವನದ ಸಮತೋಲನವೂ ಸಾಧ್ಯವಾಗಲಿದೆ ಎಂದು UAE ಸರಕಾರ ತಿಳಿಸಿದೆ ಸರಕಾರಿ ಕಚೇರಿಗಳು, ಶಾಲೆ, ಕಾಲೇಜುಗಳಲ್ಲಿ ನೂತನ ನಿಯಮ ಅನ್ವಯವಾಗಲಿದ್ದು ಖಾಸಗಿ ಸಂಸ್ಥೆಗಳು ಸಹ ಇದೇ ನಿಯಮ ಪಾಲಿಸಲಿವೆ ಎಂದು ತಿಳಿದುಬಂದಿದೆ. ಹೊಸ ಆದೇಶದ ಪ್ರಕಾರ ಶುಕ್ರವಾರ ಮನೆಯಿಂದಲೇ ಕೆಲಸ ( ವರ್ಕ್ ಫ್ರಂ ಹೋಮ್ ) ಮಾಡುವ ಆಯ್ಕೆಯು ಇದೆ.

















































error: Content is protected !!
Scroll to Top