ಹೆಬ್ರಿ : ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಗೆ ವಾಹನವೊಂದು ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸ್ಥಳದಲ್ಲೇ ಮೃತಪಟ್ಟ ಘಟನೆ ಹೆಬ್ರಿ ತಾಲೂಕು ಹೆಬ್ರಿ ತಾಲೂಕು ಗದ್ದುಗೆ ಅಮ್ಮನವರ ದೇವಸ್ಥಾನದ ಸಮೀಪ ನಡೆದಿದೆ. ಶಿವಪುರ ಗ್ರಾಮದ ಪ್ರಕಾಶ ಎಂಬವರೇ ಸಾವಿಗೀಡಾದ ದುರ್ದೈವಿ. ಡಿಕ್ಕಿಯ ರಭಸಕ್ಕೆ ರಸ್ತೆಗೆ ಬಿದ್ದು ಅವರ ತಲೆಗೆ ಗಾಯವಾಗಿದ್ದು, ವಿಪರೀತ ರಕ್ತ ಸ್ರಾವವಾಗಿದಿಂದಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ. ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಬ್ರಿ : ವಾಹನ ಡಿಕ್ಕಿ- ಪಾದಚಾರಿ ಸ್ಥಳದಲ್ಲೇ ಸಾವು
























