ಕುಕ್ಕುಂದೂರು : ಭೋವಿ ಸಂಘದ ವತಿಯಿಂದ ಶೌಚಾಲಯ ನಿರ್ಮಾಣಕ್ಕೆ ನೆರವು

ಕಾರ್ಕಳ : ತಾಲೂಕಿನ ಕುಕ್ಕುಂದೂರು ಗ್ರಾಮದ ಪೊಸನೊಟ್ಟು ಎಂಬಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ಬೇಬಿ ಅವರ ಮನೆಯಲ್ಲಿ ಶೌಚಾಲಯ ಇಲ್ಲದಿರುವುದರ ಕುರಿತು ಮಾಹಿತಿ ಪಡೆದುಕೊಂಡ ಭೋವಿ ಸಂಘದ ಪದಾಧಿಕಾರಿಗಳು ಶೌಚಾಲಯ ನಿರ್ಮಾಣಕ್ಕೆ ನೆರವು ನೀಡಿದರು.

ಸಮಸ್ಯೆ ಕುರಿತು ಉಡುಪಿ ಜಿಲ್ಲಾ ಭೋವಿ ಸಂಘದ ಅಧ್ಯಕ್ಷರಾದ ಶ್ರೀನಿವಾಸ್ ಅವರಿಗೆ ಮಾಹಿತಿ ನೀಡಿದ್ದು,ಅದರಂತೆ ಬೋವಿ ಸಂಘದ ಕಾರ್ಕಳ ತಾಲೂಕಿನ ಪದಾಧಿಕಾರಿಗಳಾದ ಧನಶೇಖರ್ ಜೋಡುಕಟ್ಟೆ, ಕೃಷ್ಣ ಜೊಡುಕಟ್ಟೆ , ಸುರೇಶ್ ಅತ್ತೂರು, ರೇಣು ಕೆದಿಂಜೆ , ಪ್ರಕಾಶ್ ಮಾವೀನಕಟ್ಟೆ ಇವರೆಲ್ಲ ಶೌಚಾಲಯ ನಿರ್ಮಾಣಕ್ಕೆ ನೆರವು ನೀಡಿದರು.





























































































error: Content is protected !!
Scroll to Top