ಪೆಟ್ರೋಲ್ ಡಿಸೇಲ್ ಬೆಲೆ ಇಳಿಕೆಯಾದರೂ ಜನತೆಗೆ ಪ್ರಯೋಜನವಾಗಿಲ್ಲ

ಜನತೆ ಬೆಲೆ ಏರಿಕೆಯ ಬಿಸಿಯಿಂದ ಇನ್ನೂ ಹೊರಗೆ ಬಂದಿಲ್ಲ. ಇತ್ತೀಚೆಗೆ ಸರಕಾರ ಇಂಧನದ ಬೆಲೆ ತುಸು ಇಳಿಕೆ ಮಾಡಿದರೂ ಅದರ ಪ್ರಯೋಜನ ಜನಸಾಮಾನ್ಯರಿಗೆ ದೊರೆಯುತ್ತಿಲ್ಲ. ಪೆಟ್ರೋಲ್ ಡಿಸೇಲ್ ಬೆಲೆ ಹೆಚ್ಚಿದ ಸಂದಭ೯ದಲ್ಲಿ ಬಸ್ ಸೇರಿದಂತೆ ಸಾರಿಗೆ ವ್ಯವಸ್ಥೆಗಳ ಟಿಕೆಟ್ ದರ ಗಗನಕ್ಕೇರಿತ್ತು. ಆದರೆ, ಇದೀಗ ಪೆಟ್ರೋಲ್ ಡಿಸೇಲ್ ಬೆಲೆಯಲ್ಲಿ ಲೀಟರ್ ಮೇಲೆ ಕ್ರಮವಾಗಿ 12 ಮತ್ತು 17 ರೂ. ಕಡಿಮೆಯಾದರೂ ಜನತೆಗೆ ಮೂಲಭೂತವಾಗಿ ಅಗತ್ಯವಾಗಿರುವ ಅಕ್ಕಿ, ಸಕ್ಕರೆ, ಅಡುಗೆ ಪದಾರ್ಥಗಳ ಮೇಲೆ, ಸಾರಿಗೆ ವ್ಯವಸ್ಥೆ ಮುಖ್ಯವಾಗಿ ಬಸ್‌ ಟಿಕೆಟ್ ದರದಲ್ಲಿ ಇಳಿಕೆಯಾಗಿಲ್ಲ. ಹೀಗಾಗಿ ಬಡ ಮತ್ತು ಮಧ್ಯಮ ವಗ೯ದವರಿಗೆ ತೊಂದರೆಯಾಗುತ್ತಿದೆ. ಆದರೂ, ಸರಕಾರ ಈ ಬಗ್ಗೆ ಕಣ್ಣು ಮುಚ್ಚಿ ಕುಳಿತಿದೆ.
ಸ್ಥಳೀಯ ಜಿಲ್ಲಾಡಳಿತ ಕೂಡ ಈ ಬಗ್ಗೆ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸವೇ ಸರಿ.
ದೇಶಾದ್ಯಂತ ಇಂಧನ ಬೆಲೆ ಕಡಿಮೆಯಾದರೂ ಯಾವುದೇ ವಸ್ತುವಿನ ಬೆಲೆ ಕಡಿಮೆಯಾಗಿಲ್ಲ. ಹೀಗಾಗಿ ಜನಸಾಮಾನ್ಯರಿಗೆ ಇಂಧನ ಬೆಲೆ ಇಳಿಕೆಯಿಂದ ಹೆಚ್ಚಿನ ಪ್ರಯೋಜನವಾಗಿಲ್ಲ.
ಜನತೆಯ ಸಂಪಾದನೆಯ ಬಹುಪಾಲು ಖರ್ಚಿಗೆ ಬೇಕಾಗುವುದು. ಇದರಿಂದ ಹೊಸ ಯೋಜನೆ ಕೈಹಿಡಿಯಲು ಸಾಧ್ಯವಾಗುತ್ತಿಲ್ಲ. ಇದರಿಂದ ಜನಸಾಮಾನ್ಯರ ಜೀವನ ವಷ೯ದಿಂದ ವಷ೯ಕ್ಕೆ ದುಸ್ತರವಾಗುತ್ತಿದೆ.

ಇಂಧನವನ್ನು ಜಿಎಸ್ಟಿ ವ್ಯಾಪ್ತಿಗೆ ತರಬೇಕಾಗಿದೆ
ಪೆಟ್ರೋಲ್, ಡಿಸೇಲ್ ಅನ್ನು ಜಿಎಸ್ಟಿ ವ್ಯಾಪ್ತಿಗೆ ತರುವುದು ಅತಿ ಅಗತ್ಯವಾಗಿದೆ. ಜಿಎಸ್‌ಟಿ ವ್ಯಾಪ್ತಿಗೆ ತಂದಲ್ಲಿ ಬೆಲೆಗಳ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸಬಹುದಾಗಿದೆ. ಪೆಟ್ರೋಲ್, ಡಿಸೇಲ್ ಬೆಲೆ ಕಡಿಮೆ ಮಾಡಿದ ಪ್ರಯೋಜನ ಜನರಿಗೆ ತಲುಪಿಸಲು ಸಕಾ೯ರ ಮುಂದಾಗಬೇಕಿದೆ. ಮುಂದಿನ ದಿನಗಳಲ್ಲಿ ಬೆಲೆ ಏರಿಕೆಯಾಗುವುದು ಸಾಮಾನ್ಯವಾಗಬಹುದು. ಹೀಗಾಗಿ ಖಚಿ೯ನ ಮೇಲೆ ನಿಯಂತ್ರಣ ಸಾಧಿಸಿ, ಸರಳ ಜೀವನದ ಮೂಲಕ ಉಳಿತಾಯ ಮನೋಭಾವನೆ ಬೆಳೆಸೋಣ.

ರಾಘವೇಂದ್ರ ಪ್ರಭು, ಕವಾ೯ಲು
ಯುವ ಬರಹಗಾರರು
































































error: Content is protected !!
Scroll to Top