‘ನನ್ನ ಹಾಡು ನನ್ನದು’ ತಂಡದಿಂದ ಶುಭಹಾರೈಕೆ
ಕಾರ್ಕಳ : ಸೋನಿ ಟಿವಿ ನಡೆಸುತ್ತಿರುವ ಅತಿ ದೊಡ್ಡ ರಿಯಾಲಿಟಿ ಶೋ ಇಂಡಿಯನ್ ಐಡಲ್ 12ನೇ ಆವೃತ್ತಿಯಲ್ಲಿ ಮೂಡಬಿದ್ರಿ ಅಲಂಗಾರ್ ಸಮೀಪದ ಕಡಲಕೆರೆ ನಿಹಾಲ್ ತಾವ್ರೋ ಆ. 15ರಂದು ನಡೆಯುವ ಫೈನಲ್‌ಗೆ ಎಂಟ್ರಿ ಕೊಟ್ಟಿದ್ದಾರೆ.
ಹೆರಾಲ್ಡ್ ತಾವ್ರೋ ಹಾಗೂ ಪ್ರಸಿಲ್ಲಾ ತಾವ್ರೋ ಅವರ ಪುತ್ರನಾಗಿರುವ ನಿಹಾಲ್ ಬಾಲ್ಯದಿಂದಲೇ ಸಂಗೀತದ ಕುರಿತು ಅಪಾರ ಆಸಕ್ತಿ ಹೊಂದಿದ್ದರು. ಹಲವಾರು ಟಿವಿ ಶೋಗಳಲ್ಲಿ ವಿನ್ನರ್ ಆಗಿರುವ ಇವರು ಕನ್ನಡ, ತುಳು, ಕೊಂಕಣಿ ಸಿನಿಮಾಗಳಲ್ಲಿ ಹಿನ್ನೆಲೆ ಗಾಯಕರಾಗಿ ಹಾಡಿದ್ದಾರೆ. ಕನ್ನಡದ ಸರಿಗಮಪ ರಿಯಾಲಿಟಿ ಶೋನಲ್ಲಿ ಫೈನಲ್ ಹಂತ ತಲುಪಿದ್ದರು.

ಕಳೆದ 34 ವಾರಗಳಿಂದ ಬಾಲಿವುಡ್‌ನ ಖ್ಯಾತ ಹಿನ್ನೆಲೆ ಗಾಯಕರು, ಬಾಲಿವುಡ್ ತಾರೆಯರು ಪಾಲ್ಗೊಂಡು ರಂಗೇರಿದ್ದ ಇಂಡಿಯಲ್ ಐಡಲ್ ಫೈನಲ್ ಹಂತ ತಲುಪಿದೆ.
ಆ. 8ರಂದು ನಡೆದ ಸೆಮಿ ಫೈನಲ್‌ನಲ್ಲಿ ಕಣದಲ್ಲಿದ್ದ 6 ಸ್ಪರ್ಧಿಗಳು ಜಿದ್ದಿನ ಸ್ಪರ್ಧೇ ನೀಡಿರುತ್ತಾರೆ. ಆ. 15ರಂದು ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 12ರ ವರೆಗೆ ನೇರ ಪ್ರಸಾರದೊಂದಿಗೆ ನಡೆಯಲಿರುವ ಫೈನಲ್ ಶೋ ನಲ್ಲಿ ಕನ್ನಡಿಗ ನಿಹಾಲ್ ತಾವ್ರೋ ಜತೆಗೆ ಬಂಗಾಳದ ಅರುಣಿತಾ ಕಾಂಜೀವಾಲ್, ಮಹಾರಾಷ್ಟ್ರದ ಸೈಲಿ ಕಾಂಬ್ಲೆ, ದೆಹಲಿಯ ದ್ಯಾನಿಶ್, ಉತ್ತರಖಂಡದ ಪವನ್‌ದೀಪ್, ಆಂಧ್ರದ ಷಣ್ಮುಗಪ್ರಿಯ ನಡುವೆ ಸ್ಪರ್ಧೆ ನಡೆಯಲಿದೆ.
ನನ್ನ ಹಾಡು ನನ್ನದು ಶುಭಹಾರೈಕೆ
ಇಂಡಿಯನ್ ಐಡಲ್ 12ನೇ ಆವೃತ್ತಿಯಲ್ಲಿ ಫೈನಲ್ ಪ್ರವೇಶಿಸಿದ ನಿಹಾಲ್ ಅವರಿಗೆ ನ್ಯೂಸ್ ಕಾರ್ಕಳ ನನ್ನ ಹಾಡು ನನ್ನದು ತಂಡವು ಶುಭಹಾರೈಸಿದೆ. ಮಜಾ ಟಾಕೀಸ್ ಖ್ಯಾತಿಯ ಮೋಹನ್ ಕಾರ್ಕಳ, ಪದ್ಮಪ್ರಸಾದ್ ಜೈನ್, ರಮ್ಯಾ ಸುಧೀಂದ್ರ, ರಾಜ್ ಆಂಡ್ ರಾಜ್ ಕಾರ್ಕಳ ಶುಭಹಾರೈಸಿರುತ್ತಾರೆ.


















