18 ವಿದ್ಯಾರ್ಥಿಗಳಿಗೆ 600 ಕ್ಕಿಂತ ಅಧಿಕ ಅಂಕ
621 ಅಂಕ ಗಳಿಸಿದ ಪ್ರೀಶಲ್ ಡಿ’ಅಲ್ಮೆಡಾ ರಾಜ್ಯದಲ್ಲಿ ನಾಲ್ಕನೇ ರ್ಯಾಂಕ್
ಕಾರ್ಕಳ : ಕ್ರೈಸ್ಟ್ ಕಿಂಗ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಈ ಬಾರಿಯ ಎಸ್. ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದೆ. ಒಟ್ಟು 117 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅವರಲ್ಲಿ 18 ವಿದ್ಯಾರ್ಥಿಗಳು 600ಕ್ಕಿಂತ ಅಧಿಕ ಅಂಕ ಗಳಿಸಿದ್ದಾರೆ. 41 ವಿದ್ಯಾರ್ಥಿಗಳು ಎ+ ಶ್ರೇಣಿಯಲ್ಲಿ, 64 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ನಲ್ಲಿ ತೇರ್ಗಡೆ ಹೊಂದಿದ್ದು, 50 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ ಮೂವರು ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಕನ್ನಡದಲ್ಲಿ 16, ಹಿಂದಿಯಲ್ಲಿ 15, ವಿಜ್ಞಾನದಲ್ಲಿ 13, ಸಮಾಜ ವಿಜ್ಞಾನದಲ್ಲಿ 11, ಗಣಿತದಲ್ಲಿ ಮೂವರು ಹಾಗೂ ಇಂಗ್ಲೀಷ್ನಲ್ಲಿ ಓರ್ವ ವಿದ್ಯಾರ್ಥಿ ಸೇರಿದಂತೆ 41 ವಿದ್ಯಾರ್ಥಿಗಳು ಬೇರೆ ಬೇರೆ ವಿಷಯಗಳಲ್ಲಿ 100 ಅಂಕಗಳನ್ನು ಪಡೆದಿದ್ದಾರೆ. ಪ್ರೀಶಲ್ ಡಿ’ಅಲ್ಮೇಡ 621 ಅಂಕಗಳನ್ನು ಪಡೆದು ರಾಜ್ಯದಲ್ಲಿ ಮೂರನೇ ರ್ಯಾಂಕ್ ಗಳಿಸಿದ್ದಾರೆ.

ಜನನಿ ಶೆಟ್ಟಿ 619, ಅಕಾಂಕ್ಷ ಕ್ವೀನ್ ಡಿ’ಸೋಜ 618, ರೋಸ್ಟನ್ ಡಿ’ಸೋಜ 616, ಸಂಕೇತ್ ಕಾಮತ್ 616, ಸಾತ್ವಿಕ್ 616, ವೆರಿನಾ ಪೆರಿಸ್ 614, ತ್ರಿಶಾ ಎಂ. 614, ಮೆಲ್ರಿಕ್ ಜೋಶ್ವಾ ಅರಾನ್ಹ 611, ವೈಷ್ಣವಿ ಪೈ 609, ಎರಿಕಾ ರೆಬೆಕಾ ಮೊರಾಸ್ 606, ಸ್ತುತಿ 606, ವಿಶೋನ್ ಡಿ’ಸೋಜ 606, ಮೊಹಮ್ಮದ್ ತಾಬಿಶ್ 605, ವಿವಿನ್ ಡಿ’ಸೋಜ 605, ಫಿಯೋನಾ ಮಾರ್ಟಿಸ್ 604, ಅಕ್ಷಯ್ ಹೆಚ್.ಎಸ್. 601, ಇಂದುಶ್ರೀ ಭಾಸ್ಕರ್ ನಾಯ್ಕ್ 600 ಅಂಕ ಗಳಿಸಿರುತ್ತಾರೆ.
Congrats Pishu
Proud of you.
Blessed be the teachers who taught you, parents who supported you. May you have bright future