ಉಡುಪಿ : ಜ್ಞಾನಸುಧಾ ಸಂಸ್ಥಾಪಕರ ಜನ್ಮ ಶತಾಬ್ಧಿ ಹಾಗೂ ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ದಶಮಾನೋತ್ಸವದ ಕೊಡುಗೆಯಾಗಿ ಹೊಸದಾಗಿ ಆರಂಭಗೊಂಡ ಉಡುಪಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿಗಣಿತ ಮತ್ತು ವಿಜ್ಞಾನವಿಷಯದಲ್ಲಿ ಶೇ.97ಕ್ಕಿಂತ ಅಧಿಕ ಅಂಕ ಗಳಿಸಿದ ಉಡುಪಿ ಜಿಲ್ಲೆಯ ಆಸಕ್ತ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಕಾಲೇಜು ಶಿಕ್ಷಣವನ್ನು ಸಂಪೂರ್ಣ ಉಚಿತವಾಗಿ ನೀಡಲಾಗುವುದು ಎಂದು ಜ್ಞಾನಸುಧಾ ಶಿಕ್ಷಣ ಸಂಸ್ಥೆ ಹಾಗೂ ಅಜೆಕಾರು ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಪ್ರಕಟನೆಯಲ್ಲಿ ತಿಳಿಸಿದೆ.
ಸಿ.ಬಿ.ಎಸ್.ಇ. ಹಾಗೂ ಐ.ಸಿ.ಎಸ್.ಇ. ಪರೀಕ್ಷೆಗಳು ಪ್ರಸಕ್ತ ವರ್ಷ ನಡೆಯದೆ ಇರುವುದರಿಂದ ಉಡುಪಿ ಜ್ಞಾನಸುಧಾದಲ್ಲಿ ಪ್ರವೇಶತಗೊಂಡು ದ್ವಿತೀಯ ಪಿಯುಸಿಯ ವಿಜ್ಞಾನ ವಿಭಾಗದಲ್ಲಿ ಸಂಸ್ಥೆ ನಿಗದಿಪಡಿಸುವ ಮಾನದಂಡದಲ್ಲಿ ಸಾಧನೆ ಮಾಡುವ ವಿದ್ಯಾರ್ಥಿಗಳಿಗೆ 2ವರ್ಷಗಳ ಕಾಲೇಜು ಶುಲ್ಕವನ್ನು ಹಿಂದಿರುಗಿಸಲಾಗುವುದು. ಆಸಕ್ತರು ಕಡಿಯಾಳಿ ಸಮೀಪದ ಉಡುಪಿ ಜ್ಞಾನಸುಧಾ ನಾಗಬನ ಕ್ಯಾಂಪಸ್‍ಗೆ ಭೇಟಿ ನೀಡುವಂತೆ ಸಂಸ್ಥೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ 8277820909 ಸಂಪರ್ಕಿಸಬಹುದಾಗಿದೆ.

















