ಹೆಬ್ರಿ : ಹೆಬ್ರಿ ತಾಲೂಕಿನ ಚಾರ ಗ್ರಾಮದ ಕಾರಾಡಿ ಎಂಬಲ್ಲಿ ಕೋಳಿ ಅಂಕದಲ್ಲಿ ತೊಡಗಿಸಿಕೊಂಡಿದ್ದ 7 ಮಂದಿಯನ್ನು ಹೆಬ್ರಿ ಠಾಣಾ ಪೊಲೀಸರು ವಶಕ್ಕೆ ಪಡೆದಿರುತ್ತಾರೆ. ಮೇ 14ರಂದು ಪಿಎಸ್‌ಐ ಮಹೇಶ ಟಿ.ಎಂ. ಹಾಗೂ ಪೊಲೀಸರು ರೌಂಡ್ಸ್ ಕರ್ತವ್ಯದಲ್ಲಿದ್ದಾಗ ಕೋಳಿ ಅಂಕ ನಡೆಯುತ್ತಿದ್ದ ಕುರಿತು ದೊರೆತ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಲಾಗಿದೆ. ರಮೇಶ ನಾಯ್ಕ, ಸುನಿಲ್ ಪೂಜಾರಿ, ವೆಂಕಟೇಶ ಶೆಟ್ಟಿ, ಸುರೇಶ ಮಡಿವಾಳ, ಸುದೀಪ, ಶಶಿಕಾಂತ, ಶಂಕರ ಎನ್ನುವವರನ್ನು ವಶಕ್ಕೆ ಪಡೆಯಲಾಗಿದ್ದು, 3 ಕೋಳಿ ಹುಂಜ, 1150 ರೂ. ನಗದು, ಕೋಳಿಗಳಿಗೆ ಕಟ್ಟಿದ ಎರಡು ಬಾಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸ್ಥಳದಲ್ಲಿದ್ದ ಕೆಲವರು ಪರಾರಿಯಾಗಿದ್ದಾರೆ. ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೆಬ್ರಿ : ಕೋಳಿ ಅಂಕಕ್ಕೆ ದಾಳಿ- 7 ಮಂದಿ ವಶಕ್ಕೆ















