ಎರ್ಲಪ್ಪಾಡಿ : ಶಾಲಾ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ

ಕಾರ್ಕಳ : ಸರಕಾರಿ ಸಂಯುಕ್ತ ಪ್ರೌಢಶಾಲೆ ಎರ್ಲಪಾಡಿಯಲ್ಲಿ 33 ಲಕ್ಷ ರೂ. ವೆಚ್ಚದ ನೂತನ ಕಟ್ಟಡ ನಿರ್ಮಾಣಕ್ಕೆ ಎ. 20ರಂದು ಶಿಲಾನ್ಯಾಸವನ್ನು ‌ಶಾಸಕರು ವಿ. ಸುನಿಲ್‌ ಕುಮಾರ್ ನೆರವೇರಿಸಿದರು. ಜಿ.ಪಂ. ಸದಸ್ಯ ಸುಮಿತ್‌ ಶೆಟ್ಟಿ ಕೌಡೂರು, ಯರ್ಲಪಾಡಿ ಗ್ರಾ.ಪಂ. ಅಧ್ಯಕ್ಷೆ ಪ್ರಮೀಳಾ ಪೂಜಾರಿ, ಉಪಾಧ್ಯಕ್ಷ ಸುನಿಲ್‌ ಹೆಗ್ಡೆ, ರಮೇಶ್‌ ಶೆಟ್ಟಿ ಜಾರ್ಕಳ, ರಮೇಶ್‌ ಶೆಟ್ಟಿ ಮಂಜೋಲುಗುತ್ತು, ಜಯರಾಮ್‌ ಶೆಟ್ಟಿ ನಡಿಬೆಟ್ಟು, ಅನಂತಪಟ್ಟಾಭಿರಾವ್‌, ಶಾಲಾ ಎಸ್‌ಡಿಎಂಸಿ ಅಧ್ಯಕ್ಷರಾದ ಭಾಸ್ಕರ ಶೆಟ್ಟಿ, ಉಮೇಶ್‌ ಪೂಜಾರಿ, ಮುಖ್ಯಶಿಕ್ಷಕರಾದ ಸುನಂದಾ ಎಲ್‌.ಎಸ್., ಶಶಿಕಲಾ ದೇವಿ, ಸಿ.ಆರ್‌.ಪಿ. ಉಮೇಶ್‌ ನಾಯಕ್‌, ಶಿಕ್ಷಕರಾದ ಸುರೇಶ್‌ ಶೆಟ್ಟಿ, ಇಂದಿರಾ, ಪುಷ್ಪಾ, ಚೇತನಾ ಉಪಸ್ಥಿತರಿದ್ದರು. ಹಿರಿಯ ಶಿಕ್ಷಕ ಪ್ರಕಾಶ್‌ ಭಟ್‌ ಸ್ವಾಗತಿಸಿ, ರಮೇಶ್‌ ಕುಲಾಲ್‌ ಎನ್.‌ ನಿರೂಪಿಸಿದರು.

















































































error: Content is protected !!
Scroll to Top