ತಹಶೀಲ್ದಾರ್‌ ಪುರಂದರ ಹೆಗ್ಡೆ ಅವರಿಗೆ ಭೂಮಾಪನಾ ಆಯುಕ್ತರಿಂದ ಅಭಿನಂದನಾ ಪತ್ರ

ಕಾರ್ಕಳ : ಭೂಮಿ ಯೋಜನೆಯಡಿ ಸಾರ್ವಜನಿಕರಿಂದ ಸ್ವೀಕರಿಸಲಾಗಿರುವ ಅರ್ಜಿಯನ್ನು ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡಿ 4.68 ಸಿಗ್ಮಾ ಮೌಲ್ಯವನ್ನು ಪಡೆದ ಹಿನ್ನೆಲೆಯಲ್ಲಿ ಕಾರ್ಕಳ ತಾಲೂಕು ಕಚೇರಿಯನ್ನು ಅಭಿನಂದಿಸಿ ಭೂಮಾಪನಾ ಇಲಾಖೆ ಆಯುಕ್ತರಾಗಿರುವ ಕೆ.ಎ. ದಯಾನಂದ್‌ ಪತ್ರ ಬರೆದಿರುತ್ತಾರೆ. ಕಾರ್ಕಳ ತಾಲೂಕು ಕಚೇರಿ ರಾಜ್ಯ ಮಟ್ಟದಲ್ಲಿ ಈ ಹಿಂದೆ ಒಂದು ಬಾರಿ ಪ್ರಥಮ ಹಾಗೂ ಎರಡು ಬಾರಿ ದ್ವಿತೀಯ ಸ್ಥಾನ ಗಳಿಸಿದೆ. ಇದೀಗ ಮತ್ತೊಮ್ಮೆ ರಾಜ್ಯದಲ್ಲಿ ಕಾರ್ಕಳ ಪ್ರಥಮ ಸ್ಥಾನ ಪಡೆದ ಹಿನ್ನೆಲೆಯಲ್ಲಿ ತಹಶೀಲ್ದಾರ್‌ ಪುರಂದರ ಹೆಗ್ಡೆ ಅವರಿಗೆ ಆಯುಕ್ತರು ಪತ್ರ ಬರೆದು ಅಭಿನಂದನೆ ಸಲ್ಲಿಸಿದ್ದಾರೆ.

















































































error: Content is protected !!
Scroll to Top