ಕಾರ್ಕಳ : ಕಾರ್ಕಳ, ಹೆಬ್ರಿ ತಾಲೂಕಿನಾದ್ಯಂತ ಮಂಗಳವಾರ ಧಾರಾಕಾರ ಮಳೆಯಾಗಿದೆ. ಮಧ್ಯಾಹ್ನ 2 ಗಂಟೆಗೆ ಗುಡುಗಿನ ಆರ್ಭಟ ಆರಂಭಗೊಂಡಿದ್ದು, ಬಳಿಕ ಸುಮಾರು 2 ಗಂಟೆಗಳ ಕಾಲ ನಿರಂತರವಾಗಿ ಮಳೆಯಾಗಿದೆ. ಕಾರ್ಕಳ ಪೇಟೆ, ಗ್ರಾಮೀಣ ಪ್ರದೇಶವಾದ ಬೈಲೂರು, ಬೆಳ್ಮಣ್, ಕೆರ್ವಾಶೆ, ತೆಳ್ಳಾರು, ಮಾಳ, ಮುಡಾರು, ನಿಟ್ಟೆ ಭಾಗದಲ್ಲಿ ಭಾರಿ ಮಳೆಯಾಗಿದ್ದರೆ, ಬಜಗೋಳಿಯಲ್ಲಿ ಸಾಧಾರಣ ಮಳೆಯಾಗಿದೆ.









































